Ad image

ಇ- ಪೌತಿ  ಆದೋಲನ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ

Vijayanagara Vani
ಕೃಷಿ ಜಮೀನುಗಳ ಮಾಲಿಕರು ಮೃತರಾದಲ್ಲಿ ಸದರಿ ಜಮೀನನ್ನು ಸಂಬಂಧಪಟ್ಟ ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಅದರಂತೆ ‘ಇ-ಪೌತಿ’ ಆಂದೋಲನದ ಮೂಲಕ ಕುರುಗೋಡು ತಾಲೂಕಿನ ಈ ರೀತಿಯ ಜಮೀನುಗಳನ್ನು ಉಚಿತವಾಗಿ ವಾರಸತ್ಯದ ಪ್ರಕಾರ ಪಹಣಿ ಪತ್ರಿಕೆ (ಉತಾರ) ಮಾಡಿಕೊಡಲಾಗುತ್ತದೆ.ಎಂದು ತಹಶಿಲ್ದಾರ ನರಸಪ್ಪ ತಿಳಿಸಿದರು. ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ  ಮೃತರಾಗಿರುವ  ಇಂತಹ ಜಮೀನುಗಳ ವಾರಸುದಾರರು ಕೂಡಲೇ ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ವಾರಸುದಾರರ ಆಧಾರ ಕಾರ್ಡ್, ಇತ್ಯಾದಿ ಎಲ್ಲಾ ಪೂರಕ ದಾಖಲೆಗಳನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಿದಲ್ಲಿ ಮಾಲಿಕರು ಮೃತರಾಗಿರುವ ಜಮೀನುಗಳ ವಾರಸು ಖಾತೆಯನ್ನು ಉಚಿತವಾಗಿ ‘ಇ-ಪೌತಿ’ ಆಂದೋಲನದ ಮೂಲಕ ಮಾಡಿಕೊಡಲಾಗುವುದು. ಕಾರಣ ಕುರುಗೋಡು ತಾಲೂಕಿನ ಎಲ್ಲಾ ಸಾರ್ವಜನಿಕರು ಸದರಿ ‘ಇ-ಪೌತಿ’ ಅಂದೋಲನದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದ್ದಾರೆ

Share This Article
error: Content is protected !!
";