Ad image

 ಕೈ ಹಿಂದಿಕ್ಕಿದ ಕಂಗನಾ ಮುಖದಲ್ಲಿ ಕಳೆ: 1294 ಮತಗಳ ಅಂತರದಿಂದ ಮುನ್ನಡೆ

Vijayanagara Vani
 ಕೈ ಹಿಂದಿಕ್ಕಿದ ಕಂಗನಾ ಮುಖದಲ್ಲಿ ಕಳೆ: 1294 ಮತಗಳ ಅಂತರದಿಂದ ಮುನ್ನಡೆ

ಮಂಡಿ ಜೂನ್ 4: ಬಿಜೆಪಿ ಅಭ್ಯರ್ಥಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ರನೌತ್ ಮುನ್ನಡೆ ಸಾಧಿಸಿದ್ದು, 1294 ಮತಗಳ ಅಂತರದಿಂದ ಸೀಟಿನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕಾದು ನೋಡಬೇಕಾದ ಹೈ ಪ್ರೊಫೈಲ್ ಕ್ಷೇತ್ರಗಳಲ್ಲಿ ಮಂಡಿಯೂ ಸೇರಿದೆ. ಇಲ್ಲಿ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ವಿರುದ್ಧ ನಟಿ ಕಂಗನಾ ರನೌತ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕ್ಷೇತ್ರವನ್ನು ಪ್ರಸ್ತುತ ವಿಕ್ರಮಾದಿತ್ಯ ಸಿಂಗ್ ಅವರ ತಾಯಿ ಪ್ರತಿಭಾ ಸಿಂಗ್ ಪ್ರತಿನಿಧಿಸುತ್ತಿದ್ದಾರೆ. ಗ್ರ್ಯಾಂಡ್ ಓಲ್ಡ್ ಪಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಆದರೆ ಕೇಸರಿ ಪಕ್ಷದ ಸಂಸದ ರಾಮ್ ಸ್ವರೂಪ್ ಶರ್ಮಾ ವರ್ಷ ನಿಧನರಾದ ನಂತರ 2021 ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಸ್ಥಾನವನ್ನು ಹಿಂಪಡೆಯಲು ಕೇಸರಿ ಪಕ್ಷವು ಪ್ರಯತ್ನಿಸುತ್ತಿದೆ. ಕೆಲವು ವರ್ಷದಿಂದ ಕಂಗನಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಇದ್ದರೂ ಈಗ ನಟಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಚುನಾವಣೆಗೆ ಸ್ಪರ್ಧೆ ಕೂಡಾ ಮಾಡಿದ್ದಾರೆ. ಮಂಡಿ ಕ್ಷೇತ್ರದಲ್ಲಿ ಹೈ ಪ್ರೊಫೈಲ್ ಸ್ಪರ್ಧೆ ಇರಲಿದೆ. ನಟಿಯಾಗಿ ಈಗಾಗಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಕಂಗನಾ ರಣಾವತ್ ಅವರು ಬಾರಿ ರಾಜಕಾರಣಿಯಾಗಿ ಮೊದಲ ಚುನಾವಣೆಯನ್ನು ಎದುರಿಸಿದ್ದಾರೆ. ಬಿಜೆಪಿ ಖ್ಯಾತ ನಟಿಗೆ ಟಿಕೆಟ್ ಕೊಟ್ಟಿದೆ.

ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಅವರು 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಹಾಗೂ ಹಾಲಿ ಮಂಡಿ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ. ಕಂಗನಾ ರಣಾವತ್ ಅವರು ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮಾಡಿಕೊಂಡು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಹಿಮಾಚಲ ಪ್ರದೇಶದಲ್ಲಿ ಮೋದಿ ವೇವ್ ಇದೆ ಎಂದು ಹೇಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಎಲ್ಲ ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು

ಹಿಮಾಚಲದಲ್ಲಿ ಸಂಪೂರ್ಣವಾಗಿ ಮೋದಿ ಅಲೆ ಇದೆ. ಮೋದಿ 200 ರ್ಯಾಲಿ ಮಾಡಿದ್ದಾರೆ. 80-90 ಇಂಟರ್ವ್ಯೂ ಕೊಟ್ಟಿದ್ದಾರೆ. ನಾವೆಲ್ಲರೂ ಮೋದಿಯ ಸೈನಿಕರು ಎಂದಿದ್ದರು. ಇದೀಗ ಕಂಗನಾ ಅವರು ಗೆಲ್ಲುತ್ತಾರಾ ಇಲ್ಲವೇ ಎನ್ನುವ ಕುತೂಹಲ ಹೆಚ್ಚಾಗಿದೆ.

ಮಾರ್ಚ್ 16 ರಿಂದ ಪ್ರಾರಂಭವಾದ ದೇಶದಲ್ಲಿ 18 ನೇ ಲೋಕಸಭೆ ಚುನಾವಣೆ ಪ್ರಕ್ರಿಯೆಯು ಜೂನ್ 4 ರಂದು ಕೊನೆಗೊಂಡಿದೆ. 542 ಲೋಕಸಭಾ ಸ್ಥಾನಗಳ ಫಲಿತಾಂಶ ಮಂಗಳವಾರ ಬರಲಿದೆ. ಇದೇ ನಿರೀಕ್ಷೆಯಲ್ಲಿ ಸದ್ಯ ಎಲ್ಲರೂ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂದು ಕಾಯುತ್ತಿದ್ದಾರೆ.

46 ದಿನಗಳ ಕಾಲ ಚುನಾವಣಾ ಪ್ರಕ್ರಿಯೆ ನಡೆದಿದೆ. ಜೂನ್ 19 ಮತ್ತು ಜೂನ್ 1 ನಡುವೆ 7 ಹಂತಗಳಲ್ಲಿ ಮತದಾನ ಪೂರ್ಣಗೊಂಡಿದೆ. ಅವಧಿಯಲ್ಲಿ, 642 ಮಿಲಿಯನ್ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸುವ 8360 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದ್ದಾರೆ. 55 ಲಕ್ಷ ಇವಿಎಂಗಳನ್ನು ಮತದಾನಕ್ಕೆ ಬಳಸಲಾಗಿದೆ.

Share This Article
error: Content is protected !!
";