ಬಳ್ಳಾರಿ.ಜೂ.17: ಮುಸ್ಲೀಂರ ಹಬ್ಬಗಳಲ್ಲಿ ಪ್ರಮುಖವಾದ ಬಕ್ರೀದ್ ಹಬ್ಬವನ್ನು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ನಗರದ ಮಸ್ಲೀಂ ಸಮುದಾಯದವತಿಯಿಂದ ನಗರದ ಎ.ಪಿ.ಎಂ.ಸಿ ಪ್ರದೇಶದ ಬಳಿಯಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು (ನಮಾಜ್) ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲೀಮ ಧರ್ಮಗುರುಗಳಾದ ಖಾಝಿ ಗುಲಾಂ ಸಿದ್ದೀಖಿ ಇವರು ಪ್ರಾರ್ಥನೆಯನ್ನು ಬೋದಿಸಿ, ಮುಸ್ಲೀಂ ಜನಾಂಗವು ಬಕ್ರೀದ್ (ಈದುಲ್ ಅದಾ) ಹಬ್ಬವನ್ನು ಇಬ್ರಾಹಿಂ ಅಲೈ ಸಲಾಮ್ ಅವರು ತನ್ನ ಮಗನಾದ ಇಸ್ಮಾಯಿಲ್ ಅಲೈ ಸಲಾಮ್ ಅವರನ್ನು ಕುರಿತು, ಮಗನೆ, ನಿನ್ನನ್ನು ಬಲಿ ಕೊಡಬೇಕು ಎಂದು ನನಗೆ ದೇವರ (ಅಲ್ಲಾಹ್) ನ ಆಜ್ಞೆಯಾಗಿದೆ, ನೀನ್ನನ್ನು ನಾನು ಈ ದಿನ ದೇವರಿಗೆ ಅರ್ಪಿಸುತ್ತೇನೆಂದು ಮಗನನ್ನು ಕೇಳಿದಾಗ, ಆಗ ಎಂಟು ವರ್ಷದ ಬಾಲಕ ಇಸ್ಮಾಯಿಲ್, ಅಪ್ಪ ನಿನಗೆ ದೇವರ ಅಜ್ಞೆಯಾಗಿದೆ ಎಂದ ಮೇಲೆ ನನ್ನದೇನು ಅಭ್ಯಂತರವಿಲ್ಲ ಅಲ್ಲಾಹನ ಆಸೆಯನ್ನು ಈಡೇರಿಸುವುದು ನನ್ನ ಕರ್ತವ್ಯ, ನನ್ನನ್ನು ನೀನು ಬಲಿ ಕೊಡಬಹುದು ಎಂದು ಒಪ್ಪಿಕೊಂಡಾಗ, ಇಸ್ಮಾಯಿಲ್ ಅವರನ್ನು ಬಲಿಕೊಡಲು ಅಲ್ಲಾಹನ ಸನ್ನಿದಿಗೆ ಕರೆದುಕೊಂಡು ಹೊಗಿ ಬಲಿ ಕೊಡುವ ಸಂದರ್ಭದಲ್ಲಿ, ಇಸ್ಮಾಯಿಲ್ ಬದಲಾಗಿ ಬಲಿ ಪೀಠದಲ್ಲಿ ಒಂದು ಕುರಿಯನ್ನು ಇಟ್ಟು ಬಲಿ ಕೊಟ್ಟು ಪವಾಡ ಮಾಡುತ್ತಾನೆ, ಈ ಭಕ್ತಿಯ ಸಂಕೇತವಾಗಿ ಮತ್ತು ಘಟನೆಯ ನೆನಪಿಗಾಗಿ ಇಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ, ಅಲ್ಲಾಹು ಇಂದು ವಿಶ್ವದ ಸಕಲ ಜೀವರಾಶಿಗಳಿಗೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸಿದರು.
ಹಿಂದು ಮುಸ್ಲಿಂ ಎಂದು ನಮಗೆ ಬೇಧಭಾವವಿಲ್ಲ, ದೇಶದಲ್ಲಿ ಕೆಲವೊಂದು ರಾಜಕಾರಿಣಿಗಳು ತಮ್ಮ ಅಧಿಕಾರಕ್ಕಾಗಿ ಮತ್ತು ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕಾಗಿ ಹಿಂದು ಮುಸ್ಲಿಂ ಎಂದು ಬೇಧಬಾವ ಮಾಡುತ್ತಿದ್ದಾರೆ, ಅಸಲಿಗೆ ದೇಶದಲ್ಲಿ ಹಿಂದು ಮುಸ್ಲೀಂ ಅಣ್ಣ ತಮ್ಮಂದಿರಾಗಿ ಮತ್ತು ಬಳ್ಳಾರಿಯಲ್ಲಿಯೂ ಹಿಂದಿನಿಂದಲೂ ಮತ್ತು ಈಗಲೂ ಸಹ ಹಿಂದು ಮುಸ್ಲೀಮ್ ಸಮುದಾಯದಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಒಂದಾಗಿ ಜೀವನ ನಡೆಸುತ್ತಿದ್ದೇವೆ, ಅಲ್ಲಾಹುವಿನ ದೃಷ್ಟಿಯಲ್ಲಿ ಎಲ್ಲಾರೂ ಒಂದೇ ಸಬ್ ಮಾಲಿಕ್ ಏಕ್ ಎಂಬಂತೆ ಎಲ್ಲರ ದೇವರು ಒಬ್ಬನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ನಗರ ಶಾಸಕ ನಾರಾ ಭರತ್ ರೆಡ್ಡಿ, ವಕ್ಫ್ ಬೋರ್ಡ್ ಅಧ್ಯಕ್ಷರಾದ ಹುಮಾಯೂನ್ ಖಾನ್, ಪಾಲಿಕೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಬಾಬು, ಪಾಲಿಕೆ ಸದಸ್ಯರಾದ ಮಿಂಚು ಸೀನಾ, ಪ್ರಭಂಜನ್, ನೂರ್ ಅಹಮ್ಮದ್, ಅರ್ಷದ್, ಸಮೀರ್, ಮುಖಂಡರಾದ ಆಯಾಜ್, ಗುಜರಿ ಅಜೀಜ್, ಮುನ್ನಾ ಭಾಯ್ ಸುಲ್ತಾನ್ ಅನ್ನು ಹುಸೇನ್ ಸೇರಿದಂತೆ ನೂರಾರು ಮುಸ್ಲೀಂ ಮುಖಂಡರು ಮತ್ತು ಸಾವಿರಾರು ಜನ ಮುಸ್ಲೀಮ ಜನರು ನಮಾಜ್ ನಲ್ಲಿ ಪಾಲ್ಗೊಂಡಿದ್ದರು.