ಕೊಟ್ಟೂರು: ತಾಲೂಕಿನ ಉಜ್ಜಿನಿ, ನಿಂಬಳಗೇರಿ ಹಾಗೂ ಸುತ್ತಮುತ್ತ ವ್ಯಾಪ್ತಿಯ ರೈತರು ಬೆಳೆದ ದಾಳಿಂಬೆ ಬೆಳೆಯು ದುಂಡಾಣು ಬಾದೆಯಿಂದ ಬೆಳೆಗಾರರ ಪಾಲಿಗೆ ಲಕ್ಷಾಂತರ ರೂಪಾಯಿ
ನಷ್ಟವನ್ನುಂಟು ಮಾಡಿದೆ.
ಸುಮಾರು 200 ಹೆಕ್ಟರ್ ಪ್ರದೇಶದಲ್ಲಿ ಬೆಳೆದ ದಾಳಿಂಬೆ ಜೂನ್ ತಿಂಗಳ ವಾತಾವರಣದಿಂದ ಮುಂಗಾರು ಪೂರ್ವದಲ್ಲಿ ದುಂಡಾಣು ಕಜ್ಜಿ ರೋಗ ಬಂದು ರೈತರು ನಷ್ಟ ಅನುಭವಿಸುವಂತಾಗಿದೆ.
ದಾಳಿಂಬೆ ಗಿಡದ ಎಲೆಗಳ ಮೇಲೆ ಹಳದಿ ಉಂಗುರದಿಂದ ಆವೃತವಾದ ಕಪ್ಪು ಚುಕ್ಕೆಗಳು ಕಂಡು ಬಂದು ಎಲೆ ಹಳದಿ ಬಣ್ಣಕ್ಕೆ ತಿರುಗಿ ಒಣಗಿ ಉದುರುತ್ತದೆ, ರೋಗವು ಗಿಡದ ಕಾಂಡಗಳಿಗೂ ಹಬ್ಬಿ ಕೊಂಬೆಗಳು ಒಣಗುವಂತೆ ಮಾಡುತ್ತದೆ, ಹೂಗಳ ಮೇಲೆ ರೋಗ ಕಂಡು ಬಂದರೆ ಹೂವು ಸಹ ಉದುರುತ್ತದೆ ಒಂದು ಕಾಯಿಂದ ಮತ್ತೊಂದು ಕಾಗೆ ರೋಗವು ಹರಡುತ್ತದೆ. ಕಾಯಿಗಳ ಮೇಲೆ ಚುಕ್ಕಿ ಕಂಡುಬಂದಿದ್ದರಿಂದ ತುಂಬಿನವರೆಗೂ ಚುಕ್ಕಿಗಳು ಆವರಿಸಿ ಹಣ್ಣು ಹೊಡೆದು ಕೊಳೆತಂತೆ ಆಗುತ್ತದೆ. ಕೀಟ ಬಾದೆ ಮತ್ತು ಉಷ್ಣ ಮಿಶ್ರಿತ ತೇವಾಂಶ ಹೆಚ್ಚಿದಲ್ಲಿ ರೋಗ ಬಾದೆ ಹೆಚ್ಚಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದಿದ್ದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೈಗೆ ಬಂದ ಹಣ್ಣು ಬಾಯಿಗೆ ಸೇರಲಿಲ್ಲ ವರ್ಷದ ಶ್ರಮ ತಿಪ್ಪೆಗೆ ಮತ್ತು ಅರಣ್ಯಕ್ಕೆ ಹಾಕಲಾಗಿದೆ . ರೈತರಾದ ಆಲೂರು ಚಂದ್ರಪ್ಪ ,ಯರಿಸ್ವಾಮಿ , ಶಾಮಿಯಾನ ರೇವಣ್ಣ. ನಿಂಬಳಗೇರೆ ಗ್ರಾಮದ ಬೆಳೆಗಾರರಾದ ಎಂ ಜಿ ಬಸವರಾಜ, ಎಂ ರಮೇಶ್ ಗಾಬರಿ ಈಶಪ್ಪ, ಗಾಬರಿ ರಾಮಣ್ಣ,ಬಣಕಾರ್ ಕೊಟ್ರೇಶ್, ಎಂ ಜಿ ವಿಜಯಪ್ಪ , ಯರಮ್ಮನಹಳ್ಳಿ ಗ್ರಾಮದ ರೈತಾರದ ಬಿ ಉಮೇಶ್, ಮೂಲೇರ ಬಸವರಾಜ್, ಎಂ ಕೊಟ್ರೇಶ್,ಹೆಚ್ ಚನ್ನಪ್ಪ, ಸಿ ಪಿ ಕಲ್ಲಪ್ಪ , ಬಿ ಮಹೇಶ್.ಬಿ ಸುರೇಶ್, ಎಸ್ ಮೂಗಪ್ಪ, ಇನ್ನು ಹೆಚ್ಚು ರೈತರು ನಷ್ಟವನ್ನು ಅನುಭವಿಸಿದ್ದಾರೆ.
ಕೊಟ್ಟಿಗೆ ಗೊಬ್ಬರ ಮತ್ತು ಸರ್ಕಾರಿ ಗೊಬ್ಬರ ಮತ್ತು ಔಷಧಿ ಸಿಂಪಡಿಸಿ ಪ್ರತಿ ಗಿಡಕ್ಕೆ 600 ರಿಂದ 700 ಖರ್ಚು ಬರುತ್ತದೆ, ಹಿಂದಿನ ವರ್ಷ ಬೆಳೆಯು ಪರ್ವಾಗಿರಲಿಲ್ಲ. ಈ ವರ್ಷ ಸಂಪೂರ್ಣವಾಗಿ ನಷ್ಟವಾಗಿದೆ.
ಆಲೂರು ಚಂದ್ರಪ್ಪ ಉಜ್ಜಿನಿ