100 ರ ಸನಿಹದಲ್ಲಿ ಟೊಮೆಟೊ ಬೆಲೆ ತರಕಾರಿ ಬೆಲೆ ಕೇಳಿ ಕಂಗಾಲಾದ ಗ್ರಾಹಕರು

Vijayanagara Vani
100 ರ ಸನಿಹದಲ್ಲಿ ಟೊಮೆಟೊ ಬೆಲೆ ತರಕಾರಿ ಬೆಲೆ ಕೇಳಿ ಕಂಗಾಲಾದ ಗ್ರಾಹಕರು

ಕಳೆದ ವರ್ಷ ದಾಖಲೆಯ ಬೆಲೆ ತಲುಪಿದ್ದ ಟೊಮೆಟೋ ಜನರನ್ನು ಕಂಗಾಲಾಗುವಂತೆ ಮಾಡಿತ್ತು. ಸೇಬಿಗಿಂತ ಟೊಮೆಟೋ ದುಬಾರಿಯಾಗಿದ್ದನ್ನು ನೋಡಿದ್ದೇವೆ. ಮತ್ತೆ ಟೊಮೆಟೋ ಬೆಲೆ ಹೆಚ್ಚಾಗುತ್ತಿದ್ದು ಶತಕದ ಸನಿಹಕ್ಕೆ ಬಂದಿದೆ

ಟೊಮೆಟೊ ಮಾತ್ರವಲ್ಲ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದ್ದ ಗ್ರಾಹಕರು ಕಂಗಾಲಾಗಿದ್ದಾರೆ. ಬಹುತೇಕ ಎಲ್ಲಾ ತರಕಾರಿಗಳು 50 ರೂಪಾಯಿಗಿಂತ ಹೆಚ್ಚಾಗಿದ್ದು, ಇನ್ನೂ ಕೆಲವು ತರಕಾರಿಗಳ ಬೆಲೆ 100 ರೂಪಾಯಿ ದಾಟಿದೆ.

ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ? ಕ್ಯಾರೆಟ್ ಬೆಲೆ ಕೆಜಿಗೆ 110 ರೂಪಾಯಿ ಇದ್ದರೆ, ಆಲೂಗಡ್ಡೆ ಬೆಲೆ 60 ರೂಪಾಯಿ ಆಗಿದೆ. ಹೂಕೋಸು 60 ರೂಪಾಯಿ, ಬೆಂಡೆಕಾಯಿ 66 ರೂಪಾಯಿ, ಕ್ಯಾಪ್ಸಿಕಂ 80 ರೂಪಾಯಿ, ನುಗ್ಗೇಕಾಯಿ 213 ರೂಪಾಯಿ, ಮೆಣಸಿನಕಾಯಿ 140 ರೂಪಾಯಿ, ಹುರುಳಿಕಾಯಿ (ಬೀನ್ಸ್) 150 ರೂಪಾಯಿ, ಬಿಟ್‌ರೂಟ್‌ 63 ರೂಪಾಯಿ, ಬದನೆಕಾಯಿ 90 ರೂಪಾಯಿ, ಟೊಮ್ಯಾಟೋ 85 ರೂಪಾಯಿಗೆ ಮಾರಾಟವಾಗುತ್ತಿದೆ. ಸೊಪ್ಪಿನ ದರ ಕೂಡ ಹೆಚ್ಚಳ

ಸೊಪ್ಪಿನ ದರ ಕೂಡ ಹೆಚ್ಚಾಗಿದ್ದು ಹೊರೆ ಮತ್ತಷ್ಟು ಹೆಚ್ಚಾಗಿದೆ. ಪಾಲಕ್ ಸೊಪ್ಪು 1 ಕೆಜಿಗೆ 115 ರೂಪಾಯಿ, ಕೊತ್ತಂಬರಿ ಸೊಪ್ಪಿನ ಬೆಲೆ 300 ರೂಪಾಯಿ ಮುಟ್ಟಿದೆ. ಮೆಂತ್ಯ ಸೊಪ್ಪಿನ ಬೆಲೆ ಒಂದು ಕೆಜಿಗೆ 245 ರೂಪಾಯಿ ಆಗಿದೆ. ಮತ್ತಷ್ಟು ದರ ಹೆಚ್ಚಳ ಸಾಧ್ಯತೆ ಮುಂದಿನ ದಿನಗಳಲ್ಲಿ ತರಕಾರಿ ಮತ್ತು ಸೊಪ್ಪಿನ ಬೆಲೆ ಮತ್ತಷ್ಟು ಹೆಚ್ಚುವ ಭೀತಿ ಇದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಹಲವು ಕಡೆ ತರಕಾರಿಗಳನ್ನು ಬೆಳೆಯುತ್ತಿಲ್ಲ, ಈಗ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ತರಕಾರಿ ಬೆಳೆ ಹಾಳಾಗುತ್ತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚುವ ಆತಂಕ ಮೂಡಿಸಿದೆ

WhatsApp Group Join Now
Telegram Group Join Now
Share This Article
error: Content is protected !!