ಕಟ್ಟಿದ್ದು 330ರೂ ಪಡೆದದ್ದು 2 ಲಕ್ಷ” ಇಂದು ದೇವದುರ್ಗ ಗ್ರಾಹಕ ಸೇವಾ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ , ವೀಮೆ ನೊಂದಾಯಿಸಿ ಮೃತ ಪಟ್ಟಿದ್ದ ಕುಟುಂಬಕ್ಕೆ 2 ಲಕ್ಷ ಮೊತ್ತ ಕ್ಲೇಮ್ ಪರಿಹಾರದ ಚೆಕ್ ನ್ನು “ಜಿಲ್ಲಾಧಿಕಾರಿಗಳ ನಡೆ – ಹಳ್ಳಿಕಡೆ ” ಅಮರಾಪುರ ಗ್ರಾಮದ ಕಾರ್ಯಕ್ರಮದಲ್ಲಿ , ಪರಿಹಾರ ನೀಡಿದ ಹಾಲಿ ಶಾಸಕರು ಮಾಜಿ ಸಚಿವರಾದ ಶ್ರೀ ಶಿವನಗೌಡ ನಾಯಕ ದೇವದುಗ೬ ರವರು ಮೃತನ ಮಗ ಮಂಜುನಾಥ ಅಂಗಡಿ ತಂದೆ ದೀll ಮಲ್ಲಪ್ಪ ಸಾಹುಕಾರ ಅಂಜಳ ಇವರಿಗೆ ಸಾಂಕೇತಿಕವಾಗಿ ಮಾದರಿ ಚೆಕ್, ಹಣ ಜಮಾಯಿಸಿದ ಪಾಸ್ ಬುಕ್ ಮತ್ತು ಪಾಲಿಸಿ ಡಿಸಜಾರ್ಜ್ ಪ್ರತಿ ನೀಡಲಾಯಿತು. ದೇವದುರ್ಗ SBI ಶಾಖಾ ವ್ಯವಸ್ಥಾಪಕರಾದ ಶ್ರೀ ರಜೀಬ್ ರಾಯ್ ಹಾಗೂ ಬ್ಯಾಂಕ್ ಫೀಲ್ಡ್ ಆಫಿಸರ್ ಶ್ರೀ ಹರ್ಷ ಹಾಗೂ ಸಿಬ್ಬಂದಿ ಮತ್ತು ಬ್ಯಾಂಕ್ ವ್ಯವಹಾರಿಕ ಪ್ರತಿನಿಧಿ ಸಂಸ್ಥೆಯ (ಜೀರೋ ಮಾಸ್ )ಜಿಲ್ಲಾ ಮುಖ್ಯಸ್ಥ ಶ್ರೀ ವಾಲ್ಮೀಕಿ ನಾಯಕ
ಉಪಸ್ತಿತರಿದ್ದರು, ದೇವದುಗ೬ ತಹಶಿಲ್ದಾರ ಶ್ರೀನಿವಾಸ ಚಾಪಲ ,ಗ್ರಾಹಕ ಸೇವಾ ಪ್ರತಿನಿಧಿ ಶ್ರೀ ಹಣಮಂತ್ರಾಯ T ನಾಯಕ ಅಂಜಳ ಹಾಗೂ ಮಾಧ್ಯಮ ಪ್ರತಿನಿಧಿಗಳು ಗ್ರಾಹಕರಿದ್ದರು , ಸ್ಥಳೀಯ ನೆರದ ಜನರಿಗೆ ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ, ಇತರೆ ಪಿಂಚಣಿ ಯೋಜನೆ APY ಕುರಿತು ಅರಿವು ನೀಡಿ ನೂತನ ನೊಂದಣಿಗೆ ಪ್ರೇರೆಪಿಸಲಾಯಿತು, ಮತ್ತು ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೆ ಬ್ಯಾಂಕಿಂಗ್ ಸೇವೆ ನೀಡುತ್ತಿರುವ SBI ಬ್ಯಾಂಕ್ ಹಾಗೂ ವ್ಯವಹಾರಿಕ ಪ್ರತಿನಿಧಿಗಳ ಪಾತ್ರ ಅಪಾರ ಮತ್ತು ಸರ್ಕಾರಿ ಸಹಾಯಧನ ನೇರ ನಗದು ವರ್ಣಾವಣೆ ಯಶಸ್ವಿಗೊಳಿಸುವಲ್ಲಿ SBI ಬ್ಯಾಂಕ್ ಮತ್ತು ಸೇವಾ ಪ್ರತಿನಿಧಿಗಳ ಕರ್ತವ್ಯ ಸಾಮಾಜಿಕ ಕಳಕಳಿಗೆ ಪ್ರಶಂಸಿ ಮೃತರ ಕುಟುಂಬಕ್ಕೆ ಶಾಸಕರು ಆತ್ಮ ವಿಶ್ವಾಸ ತುಂಬಿ ಜನರ ಸಾಮಾಜಿಕ ಭದ್ರತಾ ಸೇವೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ದವಾಗಿದೆ ಎಂದರು