ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ:
ಸಿರುಗುಪ್ಪ: ನಗರದ ತಹಶೀಲ್ದಾರ್ ಕಛೇರಿಯಲ್ಲಿ ತಾಲೂಕಿನ ಬಾಗೆವಾಡಿ ಕಾಲೂವೆಯ ಕೆಳಭಾಗದ ರೈತರಿಂದ ಸಿರಿಗೇರಿ ಮತ್ತು ತೆೆಕ್ಕಲಕೋಟೆ ವ್ಯಾಪ್ತಿಯಲ್ಲಿ ಅಕ್ರಮ ವಿದ್ಯತ್ ಸಂಪರ್ಕಗಳನ್ನು ತೇರವು ಗೊಳಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ರವರಿಗೆ ರೈತಮುಖಂಡ ಬಾಗೊಡಿ ಮಲ್ಲಿಕಾರ್ಜುನಗೌಡ ಮನವಿ ಸಲ್ಲಿಸಿದರು
ನಂತರ ಮಾತನಾಡಿದ ಅವರು ಸಿರಿಗೇರಿ ಮತ್ತು ತೆÉಕ್ಕಲಕೋಟೆ ವ್ಯಾಪ್ತಿಯಲ್ಲಿನ ಕೇಲವು ರೈತರು ತಮ್ಮ ಜಮೀನುಗಳಿಗೆ ಜೆಸ್ಕಂ ಇಲಾಖೆಯಿಂದ ಅಕ್ರಮವಾಗಿ ವಿದ್ಯತ್ ಸಂಪರ್ಕಗಳನ್ನು ಪಡೆದು ಅಕ್ರಮವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿ ಕೊಂಡು ನೀರನ್ನು ಸಂಗ್ರಹಿಸಿ ಕೊಂಡು ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸಿ ಕೊಳ್ಳುತ್ತಿರುವುದರಿಂದ ಬಾಗೆವಾಡಿ ಕಾಲೂವೆಯ ಕೇಳಭಾಗದ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ನೀರು ಸಿಗದಂತಗಿದ್ದು ರೈತರು ಬೇಳೆದ ಬೇಳೆಗಳು ಒಣಗುತ್ತಿವೆ ಅದರಿಂದ ಜೆಸ್ಕಂ ಇಲಾಖೆಯಿಂದ ಸಿರಿಗೇರಿ ಮತ್ತು ತೆÉಕ್ಕಲಕೋಟೆ ವ್ಯಾಪ್ತಿಯಲ್ಲಿನ ಅಕ್ರಮ ವಿದ್ಯತ್ ಸಂಪರ್ಕಗಳನ್ನು ಕಡಿದುಹಾಕಿ ಸೂಕ್ತ ಕಾನೂನು ಕ್ರಮ ಕೈಗೊಳುವಂತೆ ಮನವಿ ಸಲ್ಲಿಸಿದರು
ರೈತಮುಖಂಡರಾದ ವಿರೇಶಪ್ಪ, ರೆವಣ್ಣ, ಜ್ಞಾನಂದಸ್ವಾಮಿ, ಬಸಪ್ಪ, ಸಿದ್ದನಗೌಡ ಕಾಳಿಂಗಪ್ಪ, ರಾಜಸಾಬ್, ಬಸವರಾಜ,ನಸಿರುದ್ಧಿನ್,ಕೊಮರೆಪ್ಪ,ಬಂದೆನವಾಜ್,ಮಾರೇಶ, ಸೇರಿದಂತೆ ಇನ್ನಿತರರು ಇದ್ದರು