ಕಟ್ಟಡ ಕಟ್ಟುವ, ಕಲ್ಲು, ಕ್ವಾರಿ, ಕಾರ್ಮಿಕರಿಗೆ ಕೂಡಲೇ ಪರಿಹಾರ ಹಣ ನೀಡಿ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ

ಬಳ್ಳಾರಿ ಜಿಲ್ಲೆ:
ಹರಪನಹಳ್ಳಿ:ಕಾರ್ಮಿಕರಿಗೆ ೫ ಸಾವಿರ ರೂಪಾಯಿ ಪರಿಹಾರದ ಹಣವನ್ನು ಪೋಷಣೆ ಮಾಡಿ ಕೆಲ ಕಾರ್ಮಿಕರಿಗೆ ನೇರವಾಗಿ ಖಾತೆಗೆ ಜಮ ಆಗಿರುತ್ತದೆ. ಆದರೆ ಇನ್ನುಳಿದ ಕಾರ್ಮಿಕರು ೫೦೦೦ ರೂಪಾಯಿ ಇಂದು ಬರುತ್ತದೆ, ನಾಳೆ ಬರುತ್ತದೆ. ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ, ಕಲ್ಲು, ಕ್ವಾರಿ, ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ತಾಯಮ್ಮನ ಹುಣೆಸ ಮರದ ಹತ್ತಿರ ಕಾರ್ಮಿಕ ಇಲಾಖೆಯ ಮುಂದೆ ಗುರುವಾರ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಮಾಡಿ ಕಾರ್ಮೀಕ ನಿರೀಕ್ಷಕ ನಾಗೇಶ್ ಅವರಿಗೆ ಮನವಿ ನೀಡಿ ಮಾತನಾಡಿದ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಕಟ್ಟಡ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಿದರು ಇದಕ್ಕೆ ಸಂಬAಧಿಸಿದ ಕಾರ್ಮಿಕ ಅಧಿಕಾರಿಗಳು, ಮಂತ್ರಿಗಳು, ಇದರ ಬಗ್ಗೆ ಏನು ಅರಿವು ಇಲ್ಲದಂತೆ, ಕಾಲಹರಣ ಮಾಡುತ್ತಿದ್ದಾರೆ. ಸಂಬAಧಿಸಿದ ಅಧಿಕಾರಿಗಳೇ ಕಟ್ಟಡ ಕಾರ್ಮಿಕರಿಗೆ ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ, ಇಡುವುದನ್ನು ಬಿಟ್ಟು ಕೂಡಲೇ ಕಾರ್ಮಿಕರಿಗೆ ಪರಿಹಾರದ ಹಣವನ್ನು ನೀಡಬೇಕೆಂದು ಆಗ್ರಹಿಸಿದರು.
ನಗರ ಹಾಗೂ ಸುತ್ತಮುತ್ತಲಿನ ಶೌಚಾಲಯದಿಂದ ಇಡಿದು ಮನೆ ಮಟ್ಟ ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರತಿಯೊಬ್ಬ ಮನುಷ್ಯನೂ ನೆಮ್ಮದಿಯಿಂದ ವಾಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೋವೀಡ್-೧೯ ಮಾರಕ ವೈರಸ್‌ನಿಂದ ಹಾಗೂ ಸರ್ಕಾರ ಪೂರ್ವಸಿದ್ದತೆ ಇಲ್ಲದೇ ಲಾಕ್‌ಡೌನ್ ಪೋಷಣೆ ಮಾಡಿ ನಮ್ಮ ತಾಲ್ಲೂಕಿನಿಂದ ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ಹೋದಂತ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕ ಸಂಘಟನೆಯ ನಗರಧ್ಯಕ್ಷ ಮಾಬುಬಾಷ ಹೇಳಿದರು.
ಪ್ರತಿಭಟನೆಯಲ್ಲಿ ಪೃತ್ತೇಶ್ವರ ದುರುಗಪ್ಪ, ಬಿ.ವಾಲಿಸಾಬ್, ದಾದಾಪೀರ್, ಮಂಜುನಾಥಚಾರಿ, ಎಂ.ಶಬ್ಬೀರ್, ಹಾಗೂ ಇತರರು ಇದ್ದರು.
೦೩,ಎಚ್,ಆರ್,ಪಿ,ಪೋಟೋ,- ಪಟ್ಟಣದ ತಾಯಮ್ಮನ ಹುಣೆಸ ಮರದ ಹತ್ತಿರ ಕಾರ್ಮಿಕ ಇಲಾಖೆಯ ಮುಂದೆ ಗುರುವಾರ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಮಾಡಿ ಕಾರ್ಮೀಕ ನಿರೀಕ್ಷಕ ನಾಗೇಶ್ ಅವರಿಗೆ ಮನವಿ ನೀಡಿದರು.

Share and Enjoy !

Shares