ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ:
ಹರಪನಹಳ್ಳಿ: ವೆಸ್ಟಾಸ್ ವಿಂಡ್ ಪವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟಾರ್ಗೆಟ್ ಸೆಕ್ಯುರಿಟಿ ಸಿಬ್ಬಂದಿಯ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತದಿಂದ ಪಾರಾದ ಘಟನೆ ಗುರುವಾರ ತಾಲ್ಲೂಕಿನ ಹಾರಕನಾಳು ಸಣ್ಣತಾಂಡದ ಮಾರ್ಗಮಧ್ಯದಲ್ಲಿ ನಡೆದಿದೆ.
ಪಟ್ಟಣಕ್ಕೆ ೧೫ ಕೀ.ಮೀ. ದೂರದಲ್ಲಿರುವ ಹುಲಿಕಟ್ಟಿ ಹಾರಕಾನಾಳ ಗ್ರಾಮಕ್ಕೆ ಹೊಂದಿ ಕೊಂಡಿರುವ ಅರಣ್ಯ ಪ್ರದೇಶದಲ್ಲಿ ವೆಸ್ಟಾಸ್ ವಿಂಡ್ ಪವರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಹನ ಚಾಲಕ ಸುರೇಶ್ ಸೇರಿದಂತೆ ಇಬ್ಬರು ಸೆಕ್ಯುರಿಟಿ ಸಿಬ್ಬಂದಿಗಳಾದ ಟಿ.ರವಿಚಂದ್ರ ಹಾಗೂ ಎಸ್.ನಾಗರಾಜ್ ಅವರು ಇದ್ದ ಕಾರು ಚಾಲನೆಯಲ್ಲಿ ಬರುತ್ತಿರುವ ವೇಳೆ ತಾಂತ್ರೀಕ ದೋಷದಿಂದ ಏಕಾಏಕಿ ಬೆಂಕಿ ಹತ್ತಿಕೊಂಡಿತ್ತು.
ಬೆAಕಿ ತಗುಲಿದ ಪರಿಣಾಮವಾಗಿ ಕಾರಿನ ಬಾಗಿಲು ಹೊಡೆದು ಹೊರ ಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಎಲ್.ಡಿ.ಗಜಪತಿ ಇವರಿಗೆ ಸೇರಿದ ವಾಹನ ಕೆ.ಎ. ೧೭. ಬಿ ೮೭೮೨. ಎಲ್ಲೊ ಬೋರ್ಡ ಇಂಡಿಕಾ ಕಾರು ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಹರಪನಹಳ್ಳಿ ಅಗ್ನಿಶಾಮಕ ಠಾಣಾಧಿಕಾರಿ ಎಚ್.ಕೆ.ರಾಮಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಶಿಕುಮಾರ್ ನಾಯ್ಕ್, ಪಂಪಾಪತಿ, ಚಂದ್ರಪ್ಪ, ಡ್ರೆöÊವರ್ ಇಮಾಮ್ ಸಾಬ್, ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಮುಂದಾದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ :-
ಹಾರಕನಾಳ, ಹುಲಿಕಟ್ಟಿ, ಬಾಗದಲ್ಲಿ ಬರುವ ಅರಣ್ಯ ಗುಡ್ಡಗಾಡು ಪ್ರದೇಶದಲ್ಲಿ ವಿಂಡ್ ಪವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಭದ್ರತೆ ಇಲ್ಲ. ದಯವಿಟ್ಟು ಈ ಕಂಪನಿಯವರು ಅವರಿಗೆ ಜೀವನ ಭದ್ರತೆ ಒದಗಿಸಿಕೊಡಬೇಕು. ಚಳಿ,ಮಳೆ, ಗಾಳಿಯನ್ನದೇ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ವಾಹನ ಸೌಕರ್ಯ, ಬಡ ಜನರ ಪ್ರಾಣಕ್ಕೆ ಅನಾವುತವಾದರೆ ಅವರ ಕುಟುಂಬಕ್ಕೆ ಯಾರು ಜಾವಬ್ದಾರರು, ಕಾರ್ಮಿಕರನ್ನು ವಿಮೆ ಗೊಳಪಡಿಸಬೇಕು, ಹೆಚ್ಚಿನ ಭದ್ರತೆ ನೀಡಬೇಕು ಎಂದು ತಿಳಿಸಿದರು.