ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಹರಪನಹಳ್ಳಿ:ಶಿಕ್ಷಣವೆಂಬುವುದು ಗ್ರಾಮೀಣ ಪ್ರದೇಶದ
ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದ್ದ ಕಾಲದಲ್ಲಿಯೇ ವೃತ್ತಿಪರ ಶಿಕ್ಷಣ
ಸಂಸ್ಥೆಗಳನ್ನು ಸ್ಥಾಪಿಸಿ ಸ್ವಾಲಂಬಿ ಬದುಕು ರೂಪಿಸಿಕೊಳ್ಳುವಂತೆ ಮಾಡಿದ
ಕೀರ್ತಿ ಧೀಮಂತ ಶ್ರೀ ಚಂದ್ರಮೌಳೇಶ್ವರ ಶ್ರೀಗಳಿಗೆ ಸಲ್ಲುತ್ತದೆ
ಎಂದು ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ
ತಿಳಿಸಿದರು.
ಪಟ್ಟಣದ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ ಲಿಂಗೈಕ್ಯರಾದ
ಚAದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿರವರ ೮೪ನೇ ಜನ್ಮದಿನೋತ್ಸವ
ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು,
ಬೋಧಕನಿಂದ ಸಾಧಕನಾಗುವವರೆಗೆ ಧಣಿವರಿಯದೇ ಸಾಗಿದ
ಶಿವಾಚಾರ್ಯರು ೧೯೬೯ರಲ್ಲಿ ತೆಗ್ಗಿನಮಠ ಶಿಕ್ಷಣ ಸಂಸ್ಥೆಯ ಬೀಜ ನೆಟ್ಟು
ಅದನ್ನು ಹೆಮ್ಮರವಾಗಿ ಬೆಳೆಸುವ ಮೂಲಕ ದಕ್ಷ
ಆಡಳಿತಗಾರರಾಗಿಯೂ ಹೊರ ಹೊಮ್ಮಿದ್ದರು. ಶಿಕ್ಷಣ ಕೇಂದ್ರಗಳು
ಅವರನ್ನು ಎಂದೆAದಿಗೂ ಜೀವಂತವಾಗಿ ಇರುವಂತೆ ಮಾಡಿವೆ. ಶ್ರೀಗಳು
ಶೈಕ್ಷಣಿಕ ಕ್ರಾಂತಿ ನಡೆಸಿ ಬಡ ಮಕ್ಕಳ ಪಾಲಿಗೆ ಜ್ಞಾನದ
ಜ್ಯೋತಿಯಾಗಿದ್ದಾರೆ ಎಂದು ಸ್ಮರಿಸಿದರು.
ಶೈಕ್ಷಣಿಕ ಕ್ಷೇತ್ರ ವ್ಯಾಪಾರೀಕರಣಗೊಳ್ಳುತ್ತಿರುವ ಇಂಥ
ಸAದರ್ಭದಲ್ಲಿ ಚಂದ್ರಮೌಳೇಶ್ವರ ಶ್ರೀಳು ಗ್ರಾಮೀಣ ಪ್ರದೇಶದ
ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ನೀಡಲು ವಿವಿಧ ಜಿಲ್ಲೆಗಳಲ್ಲಿ ಕಲಾ,
ವಿಜ್ಞಾನ, ವಾಣಿಜ್ಯ, ತರಬೇತಿ, ತಾಂತ್ರಿಕ, ವೈದ್ಯಕೀಯ ಶಿಕ್ಷಣಕ್ಕೆ ಸಂಬAಧಿಸಿದ
ಒಟ್ಟು ೬೩ ವಿದ್ಯಾ ಸಂಸ್ಥೆಗಳು ತೆಗ್ಗಿನಮಠ ಸಂಸ್ಥೆಯ ಅಧೀನದಲ್ಲಿ
ನಡೆಯುತ್ತಿವೆ. ಜಾತಿ, ಮತ, ಪಂಥ ಎಂದೆಣಿಸದೆ ಎಲ್ಲ ವರ್ಗಗಳ
ವಿದ್ಯಾರ್ಥಿಗಳಿಗೂ ಪ್ರಸ್ತುತ ಅಗತ್ಯಕ್ಕೆ ತಕ್ಕ ಶಿಕ್ಷಣ ನೀಡುವ ಮೂಲಕ
ನೈತಿಕ ಶಿಕ್ಷಣ ಧಾರೆ ಎರೆಯಲು ಸಂಸ್ಥೆಯ ಶಾಲಾ ಕಾಲೇಜುಗಳು
ಶ್ರಮಿಸುತ್ತಿವೆ ಎಂದು ತಿಳಿಸಿದರು.
ಮಠದ ಕಾರ್ಯದರ್ಶಿ ಟಿ.ಎಂ.ಚAದ್ರಶೇಖರಯ್ಯ ಮಾತನಾಡಿ,
ಮಧ್ಯ ಕರ್ನಾಟಕದಲ್ಲಿ ಹರಪನಹಳ್ಳಿ ತೆಗ್ಗಿನಮಠ ಧಾರ್ಮಿಕ ಕೇಂದ್ರವಾಗಿ
ಹೊರ ಹೊಮ್ಮದೇ ಶೈಕ್ಷಣಿಕ ಕೇಂದ್ರವಾಗಿ ಬಡ ವಿದ್ಯಾರ್ಥಿಗಳಿಗೆ
ಜ್ಞಾನದ ದೀವಿಗೆಯಾಗಿದೆ. ಶ್ರೀಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ
ಸೇರಿ ಆರು ಜನ ಗುರುಗಳ ಪರಂಪರೆ ತೆಗ್ಗಿನ ಮಠ ಮಠಕ್ಕಿದೆ. ಎಲ್ಲಾ
ಬಗೆಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ ಶ್ರೀಗಳು ಗ್ರಾಮಾಂತರ
ಮಕ್ಕಳ ಕಲಿಕೆಗೆ ನೆರವು ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ
ಮೂಲಕ ಜ್ಞಾನ ದಾಸೋಹಿ ಎನಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ನಾಗೇಂದ್ರರಾವ್,
ಅರುಣಕುಮಾರ್, ಕಚೇರಿ ಅಧೀಕ್ಷಕರಾದ ಜಯಪ್ರಕಾಶಗೌಡ, ದೇವೇಶ್
ಸೇರಿದಂತೆ ಶಾಲಾ, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.