ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಕರ ಕೊರತೆ ಕಲೆಕ್ಷನ್ ಮೇಲೆ ಬಸ್ ಸಂಚಾರದ ನಿರ್ಧಾರ

Share and Enjoy !

Shares
Listen to this article


ವಿಜಯನಗರವಾಣಿ ಸುದ್ದಿ:
ಬಳ್ಳಾರಿ ಜಿಲ್ಲೆ
ಸಿರಿಗೇರಿ: ಗ್ರಾಮೀಣ ಭಾಗದಲ್ಲಿ ಕೆಲ ತಿಂಗಳುಗಳ ನಂತರ ಸರ್ಕಾರಿ ಬಸ್ಸುಗಳ ಓಡಾಟ ಪ್ರಾರಂಭಗೊಂಡಿದೆ. ಆದರೆ ಪ್ರಯಾಣಿಕರಿಲ್ಲದೆ ಬಸ್ಸುಗಳು ಖಾಲಿ ಹೋಗುತ್ತಿವೆ ಬರುತ್ತಿವೆ, ಸಿರಿಗೇರಿ ಮಾರ್ಗದಲ್ಲಿ ಕುರುಗೋಡು, ಕಂಪ್ಲಿ, ಬಳ್ಳಾರಿ, ಸಿರುಗುಪ್ಪ, ಮತ್ತು ಬೆಂಗಳೂರಿಗೆ ಹೋಗುವ ೦೩ ಬಸ್ ಗಳು ಬರುತ್ತಿವೆ. ಬಸ್ಸುಗಳಲ್ಲಿ ಬೆರಳೆಣಿಕೆ ಜನ ಪ್ರಯಾಣಿಕರು ಹತ್ತುತ್ತಿದ್ದಾರೆ ಇದರಿಂದ ಪ್ರಾರಂಭದಲ್ಲಿ ಈ.ಕ.ರಾ.ರ.ಸಾ.ಸಂಸ್ಥೆಗೆ ನಿಗದಿತ ಕಲೆಕ್ಷನ್‌ಗೆ ತೊಂದರೆಯಾಗಿದೆ.
ಇದು ಪ್ರಾರಂಭದ ತೊಂದರೆಯಾದರೂ ಕೊರೊನ ರೋಗದ ಹತೋಟಿಗಾಗಿ ಸುಮಾರು ೫ತಿಂಗಳಿನಿಂದ ಬಸ್ ಗಳನ್ನು ರಸ್ತೆಗೆ ಇಳಿಸಿರದ ಕಾರಣ ಸಾರ್ವಜನಿಕರು ತಮ್ಮ ಅವಸರದ ಕೆಲಸಗಳಿಗೆ ಇತರೆ ಊರುಗಳಿಗೆ ಹೋಗಿ ಬರಲು ಗಾಡಿ (ಮೋಟರ್‌ಸೈಕಲ್) ಗಳನ್ನು ಬಳಸುತ್ತಿರುವುದು ರೂಢಿಯಾಗಿದೆ. ಬಸ್ಸುಗಳ ಕಲೆಕ್ಷನ್‌ಗೆ ತೊಂದರೆಯಾಗಿದೆ. ಪ್ರಯಾಣಿಕರು ಬೈಕ್ ಬಳಸುತ್ತಿರುವುದು ಒಂದು ಕಾರಣವಾದರೆ, ಈ ಹಿಂದೆ ಕೊರೊನ ಸೋಂಕಿತರನ್ನು ಸರ್ಕಾರಿ ಬಸ್ಸುಗಳಲ್ಲಿ ಕ್ವಾರಂಟೇನ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಬಳಸಿದ್ದರೆಂಬ ಕಾರಣ, ಮತ್ತು ನಾನಾ ಊರುಗಳಿಂದ ಬರುವ ಜನರಲ್ಲಿ ಸೋಂಕಿತರಿರಬಹುದೆಂಬ ದುಗುಡದಿಂದಲೂ ಬಸ್ ಪ್ರಯಾಣಕ್ಕೆ ಅಷ್ಟಾಗಿ ಜನರು ಮುಂದಾಗುತ್ತಿಲ್ಲ.
ಸೆ.೦೨ ರಿಂದ ಬಸ್ ಸಂಚಾರ ಪ್ರಾರಂಭಗೊಂಡಿದೆ. ಬಸ್ ಹತ್ತುವ ವೇಳೆ ಈ ಹಿಂದೆ ಇದ್ದ ಸ್ಕಾನಿಂಗ್ ಟೆಸ್ಟ್, ಸ್ಯಾನಿಟೈಸರ್ ಬಳಕೆ ಮಾಡುತ್ತಿಲ್ಲ. ಸಿರುಗುಪ್ಪದಿಂದ ಸಿರಿಗೇರಿ ಮಾರ್ಗವಾಗಿ ಕಂಪ್ಲಿ ಪಟ್ಟಣಕ್ಕೆ ಒಂದು ಬಸ್ ಮಾತ್ರ ಬರುತ್ತಿದೆ, ಅದು ಒಂದು ಟ್ರಿಪ್ ಮಾತ್ರ, ಟ್ರಿಪ್‌ಗೆ ೬೦೦/- ರು. (ಅಪ್ ಆಂಡ್ ಡೌನ್) ಕಲೆಕ್ಷನ್ ಆಗಿದೆ ಹೀಗೇ ಆದರೆ ಮುಂದೆ ಬಸ್ ಸಂಚರಿಸುವುದೂ ಅನುಮಾನವೆಂಬುದು ಸಿಬ್ಬಂದಿಯವರ ಅಭಿಪ್ರಾಯ. ಗ್ರಾಮೀಣರಲ್ಲಿ ಕೊರೊನ ಭೀತಿ ಕಡಿಮೆಯಾಗಿದ್ದರೂ, ತಕ್ಷಣದಲ್ಲಿ ಎಲ್ಲಾ ವಹಿವಾಟುಗಳು ಸಹಜ ಸ್ಥಿತಿಗೆ ಮರಳುವುದು ಅಷ್ಟು ಸುಲಭದ ವಿಷಯವಲ್ಲವೆಂಬುದು ಲೆಕ್ಕಾಚಾರವಾಗಿದೆ.

 

Share and Enjoy !

Shares