ವಿಜಯನಗರವಾಣಿ ಸುದ್ದಿ:
ರಾಯಚೂರು ಜಿಲ್ಲೆ:
ಲಿಂಗಸೂಗೂರು ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ ಸರಕಾರ ಸಹಾಯ ನೀಡುವ ಕುರಿತು “ ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ್ ” ಎಂಬ ಸಿದ್ಧಾಂತದೊಂದಿಗೆ ನಮ್ಮ ದೇಶ ಗುರುವಿಗೆ ಹೆತ್ತವರ ನಂತರದ , ಮೊದಲನೇ ಸ್ಥಾನ ನೀಡಿ ಗೌರವಿಸುತ್ತಿದ್ದಂತಹ ಗುರುವನ್ನು ನಮ್ಮ ಭಾರತ ದೇಶ ಹಾಗೂ ನಮ್ಮ ರಾಜ್ಯದ ರಾಜಕೀಯ ಇಚ್ಛಾಶಕ್ತಿಯ ಕೊರತೆಗೆ ಇಂದಿನ ಖಾಸಗಿ ಅನುದಾನ ರಹಿತ ಶಿಕ್ಷಕರ ಅಗೌರವ , ತಾರತಮ್ಯ ಹಾಗೂ ಕಿಂಚಿತ್ತೂ ಕನಿಕರವಿಲ್ಲದ ರೀತಿಯಲ್ಲಿ ನಿರ್ಲಕ್ಷಿಸಿ ಮನುಕುಲವೇ ತಲೆತಗ್ಗಿಸುವ ರೀತಿಯಲ್ಲಿ ನಡೆಸಿಕೊಂಡಿರುವದು ಅತ್ಯಂತ ನೋವು ಹಾಗೂ ಕ್ಷಮಿಸಲಾಗದ ಪಾಪದ ರೀತಿಯಲ್ಲಿ ಮೇಲೆ ಕರಿಘಾಯ ಎಸಗಿದಂತಾಗಿದೆ . ಪ್ರಮುಖ ಬೇಡಿಕೆಗಳು ಶಾಲೆಗಳು ಪುನಃ ಪ್ರಾರಂಭಗೊಳ್ಳುವವರೆಗೆ ಎಲ್ಲಾ ಖಾಸಗಿ ಅನುದಾನ ರಹಿತ . ಶಾಲೆಗಳ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಕನಿಷ್ಟ ವೇತನವನ್ನು ಹಾಗೂ ವಿಶೇಷ ಪ್ಯಾಕೇಜ್‌ನ್ನು ಸರ್ಕಾರ ತಕ್ಷಣ ನೀಡಬೇಕು . ಖಾಸಗಿ ಅನುದಾನ ರಹಿತ ಶಾಲಾ ಸಿಬ್ಬಂದಿಗಳನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಆರೋಗ್ಯ ವಿಮೆ ಸೌಲಭ್ಯ ನೀಡಬೇಕು .ಶಾಲೆಗಳು ಪುನರಾರಂಭಗೊಂಡ ನಂತರ ಪ್ರತಿ ಖಾಸಗಿ ಶಾಲೆಗೆ ಸ್ಯಾನಿಟೈಸರ್ ಹಾಗೂ ಸುರಕ್ಷತಾ ಸಾಮಾಗ್ರಿಗಳನ್ನು ಸರಕಾರ ಒದಗಿಸಬೇಕು . • ಶಾಲಾ ಪುನರಾರಂಭಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು . ಈಗಾಗಲೇ ನಾವು ಶಿಕ್ಷಕರ ಸಮಸ್ಯೆಗಳ ಕುರಿತು ಹಲವು ಬಾರಿ ಸೂಕ್ತ ಪರಿಹಾರಕ್ಕಾಗಿ ತಮಗೆ ಮನವಿ ಸಲ್ಲಿಸಿದ್ದೇವೆ . ಆದರೆ ಲಿಂಗಸೂರು ತಾಲ್ಲೂಕು ಖಾಸಗಿ ಶಿಕ್ಷಣ ಒಕ್ಕೂಟದ ವತಿಯಿಂದ ಅನೇಕಬಾರಿ ಮನವಿ ಸಲ್ಲಿಸಿದ್ದೇವೆನೋವಿನಿಂದ ಕರಾಳದಿನವನ್ನಾಗಿ ಆಚರಿಸುತ್ತಿದ್ದೇವೆ ಇಲ್ಲಿಯವರೆಗೆ ಯಾವುದೇ ಪರಿಹಾರ ಮಾಡಿಲ್ಲಾ ಆದ್ದರಿಂದ ನಾವೆಲ್ಲರೂ ಸಂತೋಷ , ಸಡಗರದಿಂದ ಆಚರಿಸಬೇಕಾಗಿದ್ದ ಶಿಕ್ಷಕರ ದಿನಾಚರಣೆಯನ್ನು ತುಂಬಾ ಗೌರವವನ್ನು ಎತ್ತಿ ಹಿಡಿದು ಅವರ ಸಮಸ್ಯೆಗಳಿಗೆ ಸಂದಿಸಿ ವಿಶೇಷ ಆರ್ಥಿಕ ಪ್ಯಾಕೇಜನ್ನು ಒದಗಿಸಬೇಕೆಂದು ಈ ಮೂಲಕ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮನವಿಮಾಡಿದರು