ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಕೃಷಿ ಕೂಲಿಕಾರರ ಸಂಘಟನೆ
ಪ್ರತಿಭಟನೆ ಕರ್ನಾಟಕ ಪ್ರಾಂತ್ಯ ರೈತ ಸಂಘ.ಕರ್ನಾಟಕ ಪ್ರಾಂತ ರೈತ ಕೃಷಿ ಕೂಲಿಕಾರರ ಸಂಘಹಾಗೂ ಸಿಐಟಿಯು ಜಂಟಿ ಸಮಿತಿಗಳು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯದ್ಯಾಂತ ಕರೆ ನೀಡಿದ್ದು. ಅದರ ಭಾಗವಾಗಿ ತಾಲೂಕಿನ ಸೋಮಲಾಪುರ್ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ .ಕರ್ನಾಟಕ ಪ್ರಾಂತ ರೈತ ಕೃಷಿ ಕೂಲಿಕಾರರ ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು.ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಕೃಷಿ ಕೂಲಿಕಾರರ ಸಂಘಟನೆಯ ಅಧ್ಯಕ್ಷವೀರೇಶ ಮಾತನಾಡಿ
ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನಮಗೆ 200 ದಿನಗಳ ಕಾಲ ಉದ್ಯೋಗ ನೀಡಬೇಕು ಜೊತೆಗೆ ಕನಿಷ್ಠ ಕೂಲಿ ಯನ್ನು 600 ರೂ ಗೆ ಹೆಚ್ಚಿಸಬೇಕು.ಕೋವಿಡ್- 19 ಸಮಸ್ಯೆ ಇತ್ಯರ್ಥವಾಗುವವರೆಗೆ ಎಲ್ಲಾ ಕೃಷಿ ಕೂಲಿಕಾರರಿಗೆ ಮಾಸಿಕ 7500 ನೆರವು ನೀಡಬೇಕು ಎಂದು ಹೇಳಿದರು…
ನಂತರ ಬರೆದ ಮನವಿ ಪತ್ರವನ್ನು ಸೋಮಲಾಪುರ್ ಗ್ರಾಮ ಪಂಚಾಯತಿ ಪಿ.ಡಿ.ಓ ಅಮರ ಗುಂಡಪ್ಪ ಮೂಲಕ ರಾಷ್ಟ್ರಪತಿ ಗಳಿಗೆ ಸಲ್ಲಿಸಿದರು…
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ದುರುಗಪ್ಪ.ಕಾರ್ಯದರ್ಶಿ ರಂಗಣ್ಣ.ಮುರುಳಿ ಸೇರಿದಂತೆ ಅನೇಕರು ಭಾಗವಹಿಸಿದರು