ಸೋಮವಾರದಿಂದ ಕೊಟ್ಟೂರಿನಲ್ಲಿ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಚೇರಿ ಕಾರ್ಯಾರಂಭ

ವಿಜಯನಗರವಾಣಿ ಸುದ್ದಿ:
ಬಳ್ಳಾರಿ ಜಿಲ್ಲೆ:
ಕೊಟ್ಟೂರು : ನಾಡಿದ್ದು ಸೋಮವಾರವೇ ಕೊಟ್ಟೂರಿನಲ್ಲಿ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಉಮಾ ದೇವಿ ತಿಳಿಸಿದರು .ಅವರು 133ನೇ ರಾಧಾಕೃಷ್ಣನ್ ಜಯಂತಿಯ ಶಿಕ್ಷಕರ ದಿನಾಚರಣೆಯಲ್ಲಿ ತಿಳಿಸಿದರು .ತಾಲೂಕು ಪಂಚಾಯತ್ ಅಧ್ಯಕ್ಷರಾದ ಗುರು ಮೂರ್ತಿ ಮಾತನಾಡಿ ಕೋವಿಡ್ ಸಂಕಷ್ಟ ವೇಳೆಯಲ್ಲಿ ಶಿಕ್ಷಕರ ಸೇವೆ  ಶ್ಲಾಘನೀಯ ಎಂದು ತಿಳಿಸಿದರು .ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ ವತಿಯಿಂದ ನಿವೃತ್ತ ಶಿಕ್ಷಕರನ್ನು ತಹಸೀಲ್ದಾರ್ ಅನಿಲ್ ಕುಮಾರ್ ಸನ್ಮಾ ನಿಸಿದರು .ಸಮಾರಂಭದಲ್ಲಿ ತಾ .ಪಂ .ಕಾರ್ಯ ನಿರ್ವಹಣಾದಿಕಾರಿಗಳಾದ ವಿಶ್ವ ನಾಥ್ ,ಜಿಲ್ಲಾ ಪಂಚಾಯತ್ ಸದಸ್ಯರಾದ ಉಮಾ ಕೊಟ್ರೇಶ್ ,ಶಿಕ್ಷಕರ ಸಂಘದ ಶಿವಾನಂದ ,ಸಂಪತ್ ,ಅಜ್ಜಪ್ಪ ಹಾಗು ಪದಾಧಿಕಾರಿಗಳು ಹಾಜರಿದ್ದರು .ಈ ಸಂದರ್ಭದಲ್ಲಿ ಕಂದಾಯ ಇಲಾಖೆ ನೌ ಕರ ಗುರು ಬಸವ ರಾಜ ಸ್ವ ರಚಿಸಿದ ಕವನ ವಾಚನ ಮಾಡಿ ಗಮನ ಸೆಳೆದರು .ಶರಣಪ್ಪ ನಿರೂಪಿಸಿದರು .

Share and Enjoy !

Shares