ಕೀಟನಾಶಕಗಳ ಬಳಕೆ ಕುರಿತು ಜಾಗೃತಿ ಆಂದೋಲನ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಕೊಪ್ಪಳ ಜಿಲ್ಲೆ:
ಕಾರಟಗಿ:ಸಿದ್ದಾಪುರ ಗ್ರಾಮದ ರೈತ ಸಂಪರ್ಕ ಕೇಂದ್ರಹಾಗೂ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಇವರ ಸಹಯೋಗದಲ್ಲಿ ಸಿದ್ದಾಪುರ ಗ್ರಾಮದ ರೈತರ ಜಮಿನೊಂದರಲ್ಲಿ ಸುರಕ್ಷೀತ ಕೀಟನಾಶಕಗಳ ಬಳಕೆ ಕುರಿತು ಜಾಗೃತಿ ಆಂದೋಲನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೀಟ ಶಾಸ್ತçಜ್ಞರಾದ ಡಾ|
ರಾಘವೇಂದ್ರ ಎಲಿಗಾರ ಮಾತನಾಡಿ ರೈತರು
ಕೀಟನಾಶಕಗಳನ್ನು ಬಳಸುವ ಸಮಯದಲ್ಲಿ
ಮುಂಜಾಗೃತೆ ವಹಿಸಬೇಕು. ಅರದಲ್ಲಿ ಗಾಳಿಯ
ವಿರುದ್ಧವಾಗಿ ಕೀಟನಾಶಕಗಳನ್ನು ಬಳಸುವ
ಸಮಯದಲ್ಲಿಯಂತು ತುಂಬಾ ಮುಂಜಾಗೃತ
ಕ್ರಮವನ್ನು ಅನುಸರಿಸಿ ಸಿಂಪರಣೆ ಮಾಡಬೇಕು.
ಕೀಟನಾಶಕಗಳನ್ನು ಮುಂಜಾಗ್ರತೆ ಕ್ರಮ
ವಹಿಸದೆ ಸಿಂಪರಣೆ ಮಾಡಿದರೆ ಮಾರಕ
ಖಾಯಿಲೆಗಳಾದ ಕ್ಯಾನ್ಸರ್, ಚರ್ಮದ ಕಾಯಿಲೆ,
ಅಸ್ತಮ ಮುಂತಾದ ಖಾಯಿಲೆಗಳು ಬರಬಹುದು.
ರೈತರು ಹೆಚ್ಚು ರಾಸಾಯನಿಕ
ಕೀಟನಾಶಕಗಳನ್ನು ಉಪಯೋಗಿಸದೆ ಜೈವಿಕ
ಪರತಂತ್ರ ಜೀವಿಗಳಾದ ಟ್ರೇಕೊಗ್ರಾಮ
ಕಾರ್ಡ್ ಹಾಗೂ ಮೋಹಕ ಬಲೆಯನ್ನು
ಉಪಯೋಗಿಸಿ ಭತ್ತದಲ್ಲಿ ಬರುವ
ಕಾಂಡಕೋರಕ ಹುಳುಗಳನ್ನ ನಿರ್ವಹಣೆ
ಮಾಡಬಹುದು ಎಂದು ಹೇಳಿದರು.
ನಂತರ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ
ಅಧಿಕಾರಿ ನಾರೆಪ್ಪ ಮಾತನಾಡಿ ಭತ್ತದ
ಗದ್ದೆಯಲ್ಲಿ ಶೇ ೫೦ ರಷ್ಟು ನೀರನ್ನು ಕಡಿಮೆ
ಮಾಡುವುದರಿಂದ ದ್ವಾಮಿಗಳ ಹಾವಳಿಯನ್ನು
ನಿಯಂತ್ರಿಸಬಹುದು ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ|
ರವಿ ಮಾತನಾಡಿ ಪೋಷಕಾಂಶಗಳ ನಿರ್ವಹಣೆ

ಕುರಿತು ರೈತರಿಗೆ ತಿಳಿಸಿದರು.
ಈ ವೇಳೆ ರೈತರಿಗೆ ಮೋಹಕ ಬಲೆ ಹಾಗೂ
ಟ್ರೇಕೊಗ್ರಾಮ ಕಾರ್ಡ್ಗಳನ್ನು
ವಿತರಿಸಲಾಯಿತು.
ಸಿದ್ದಾಪುರ ರೈತ ಸಂಪರ್ಕ ಕೇಂದ್ರದ ಕೃಷಿ
ಅಧಿಕಾರಿ ಗೋರಖನಾಥ,ಸಹಾಯಕ ಕೃಷಿ ಅಧಿಕಾರಿ
ರಾಮಚಂದ್ರಪ್ಪ ಲಮಾಣಿ, ಆತ್ಮ ಯೋಜನೆಯ
ಸಹಾಯಕ ತಾಂತ್ರೀಕ ವ್ಯವಸ್ಥಾಪಕಿ ವಿದ್ಯಾವತಿ,
ಲೆಕ್ಕ ಸಹಾಯಕ ಮಂಜುನಾಥ ಸೇರಿದಂತೆ
ಸಿದ್ದಾಪುರ ಹೊಬಳಿಯ ರೈತರು ಇದ್ದರು.

Share and Enjoy !

Shares