ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಅಕ್ರಮ ಮರಳು ದಂಧೆಗೆ ತೊಡಗಿದ ಟ್ಯಾಕ್ಟರ್ ಹಿಂಬದಿಯಿಂದ ಗುದ್ದಿದ ಪರಿಣಾಮವಾಗಿ ಹದಿನೈದು ವಯಸ್ಸಿನ ಬಾಲಕ ಸ್ಥಳದಲ್ಲೇ ಸಾವು
ತಾಲೂಕಿನ ಅಲಬನೂರು ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಹಗಲು ರಾತ್ರಿ ಎನ್ನದೇ ನಡೆಯುತ್ತಿದ್ದು.
ದ್ವಿಚಕ್ರ ವಾಹನ ಮೂಲಕ ಮನೆಗೆ ಕುಡಿಯುವ ನೀರು ತರಲು ಮೌನೇಶ್ ತಂದೆ ಗಂಗಪ್ಪ ಹದಿನೈದು ವಯಸ್ಸಿನ ಬಾಲಕ ತೆರಳಿದಾಗ ಅಕ್ರಮ ವಾಗಿ ಮರಳು ತುಂಬಿಕೊಂಡ ಬರಲು ತೆರಳುತ್ತಿದ್ದ ಟ್ಯಾಕ್ಟರ್ ಹಿಂಬದಿಯಿಂದ ಗುದ್ದಿದ ಪರಿಣಾಮವಾಗಿ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.
ಟ್ಯಾಕ್ಟರ್ ಚಾಲಕ ಪರರಿಯಾಗಿದಾನೆ.
ಮರಣೋತ್ತರ ಪರೀಕ್ಷೆಗಾಗಿ
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ