ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಮಕ್ಕಳಿಗೆ ಶಿಕ್ಷಕರು ಬೈದಾಗ ಮಕ್ಕಳ ಮುಂದಿನ ಪಾಲಕರು ಶಿಕ್ಷಕರಿಗೆ ಪ್ರಶ್ನಿಸಬಾರದು.ಇದರಿಂದ ಮಕ್ಕಳಲ್ಲಿರುವ ನೈತಿಕತೆ ಕುಂದುತ್ತದೆ ಎಂದು ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಭೋಗಾವತಿ ಹೇಳಿದರು.
ನಗರದ ಪಿ.ಡಬ್ಲ್ಯು.ಡಿ
ಕ್ಯಾಂಪ್ ನಲ್ಲಿ ಇರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ.ತಾಲ್ಲೂಕು ಪಂಚಾಯಿತಿ. ಸಿಂಧನೂರು ಸಾರ್ವಜನಿಕ ಶಿಕ್ಷಣ ಇಲಾಖೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ -ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು. ಪ್ರಾಥಮಿಕ ಶಾಲೆ. ಪ್ರೌಢಶಾಲೆ ಶಿಕ್ಷಕರ ಸಂಘಟನೆಗಳ ಹಾಗೂ ತಾಲ್ಲೂಕು ಸಮಸ್ತ ಶಿಕ್ಷಕರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಡಾ ಸರ್ವೇಪಲ್ಲಿ ರಾಧಾಕೃಷ್ಣನ್ ರವರ 132 ನೇ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾವು ಶಿಕ್ಷಕರ ಹಾಗೆ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಆಗಿರುವ ಅನುಭವಗಳನ್ನು ತಿಳಿಸಿದರು.ಶಿಕ್ಷಕರು ಪ್ರತಿನಿತ್ಯ ಅಪ್ಡೇಟ್ ಆಗಬೇಕು ಅಂದಾಗ ಮಾತ್ರ ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಶಿಕ್ಷಕರ ಎನಿಸಿಕೊಳ್ಳಲು ಸಾಧ್ಯವಾಗುತ್ತದೆ.ಪಾಲಕರು ಸಹ ಶಿಕ್ಷಕರು ಮಕ್ಕಳಿಗೆ ಬೈದಾಗ ಅಥವಾ ಹೊಡೆದಾಗ ಅದನ್ನು ಮಕ್ಕಳನ್ನು ಮುಂದೇನೆ ಪ್ರಶ್ನಿಸದೆ.ಮಕ್ಕಳ ಇರದ ಸಂದರ್ಭದಲ್ಲಿ ಪ್ರಶ್ನಿಸಬೇಕು ಇಲ್ಲವಾದರೆ ಮಕ್ಕಳಲ್ಲಿರುವ ನೈತಿಕತೆ ಕುಂದುತ್ತದೆ ಎಂದು ಹೇಳಿದರು.