ಪ್ರಸಾರವಾಗುತ್ತಿರುವ ಮಹಾನಾಯಕ ಬಿ.ಆರ್ , ಅಂಬೇಡ್ಕರ ಧಾರವಾಹಿಯನ್ನು ನಿಲ್ಲಿಸುವಂತೆ ಬೆದರಿಕೆ ಕರೆ ಮಾಡುವವರ ವಿರುದ್ದ ಕ್ರಮಕ್ಕೆ ಭಾರತೀಯ ಪ್ರಜಾ ಸಂಘ ಆಗ್ರಹ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ:
ರಾಯಚೂರುಜಿಲ್ಲೆ
ಲಿಂಗಸೂಗೂರು: ಭಾರತೀಯ ಪ್ರಜಾ ಸಂಘ ( ಭೀಮ ನಡೆ ) ತಲೂಕ ಸಮಿತಿ ಲಿಂಗಸಗೂರು ವತಿಯಿಂದ ತಮ್ಮಗಳ ಗಮನಕ್ಕೆ ತರವುದೇನಂದರೆ , ಉ.ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ & ಬಾನುವಾರ ಪ್ರಸಾರವಾಗುತ್ತಿರುವ ಮಹಾನಾಯಕ ಬಿ.ಆರ್.ಅಂಬೇಡ್ಕರ ರವರ ಧಾರವಾಹಿಯನ್ನು ನಿಲ್ಲಿಸುವಂತೆ .ಕನ್ನಡ ವಾಹಿನಿಯ ನಿರ್ವಾಹಕರಾದ ರಾಘವೇಂದ್ರ ಹುಣಸೂರು ಇವರಿಗೆ ಫೋನ್ ಮೂಲಕ ಬೆದರಿಕೆ ಸಂದೇಹಗಳು ಬರುತ್ತವೆ ಎಂದು ಗೊತ್ತಾಗಿದೆ . ಇದು ಪ್ರಜಾಪ್ರಭುತ್ವ ಹಾಗೂ ಮಾಧ್ಯಮ ವಾಕ್ ಸ್ವತಂತ್ರವನ್ನು ಹರಣ ಮಾಡುವ ಜಾತಿವಾದವನ್ನು ಕೊಮವಾದವನ್ನು ಉಳಿಸಿ , ಬೆಳಸಿ , ಪೋಶಿಸುವ ಪಟ್ಟಭದ್ರ ಹಿತಾಸಕ್ತಿಗಳ ಗೂಂಡಾ ರಾಜಕಾರಣವನ್ನು ನಮ್ಮ ಭಾರತೀಯ ಪ್ರಜಾ ಸಂಘ ( ಭೀಮ ನಡೆ ) ತಾಲೂಕ ಸಮಿತಿ ತೀವ್ರವಾಗಿ ಖಂಡಿಸುತ್ತದೆ . ಡಾ || ಬಿ.ಆರ್ . ಅಂಬೇಡ್ಕರವರ ಚರಿತ್ರೆ ಹಾಗೂ ಅವರು ಅನುಭವಿಸಿದಂತಹ ಜಾತಿಯ ಶೋಷಣೆಯನ್ನು ತಮ್ಮ ಬಾಲ್ಯದಿಂದಲೂ ದಿಕ್ಕರಿಸುತ್ತಾ , ಹೋರಾಡುತ್ತಾ , ದಲಿತ , ಹಿಂದುಳಿದ ಅಲ್ಪ ಸಂಖ್ಯಾತ ಸೇರಿದ ಎಲ್ಲಾ ಜಾತಿಯ ಜನರ ಪರವಾಗಿ ಧ್ವನಿ ಎತ್ತಿದಂತವರಾಗಿದ್ದಾರೆ.ಆವತ್ತಿನ ಕಾಲಘಟ್ಟದಲ್ಲಿ ಶಿಕ್ಷಣ ಪಡೆಯಲು ಗ್ರಾಮಗಳಲ್ಲಿ ಸವರ್ಣಿಯರಿಂದ ಅನುಭವಿಸಿದಂತಹ ಘನ ಘೋರವಾದ ಮಾನಸಿಕ , ಸಾಮಾಜಿಕ , ಶೈಕ್ಷಣಿಕ , ಜಾತಿ ತಾರತಮ್ಯದ ನೋವು ಎಷ್ಟೇ ಇದ್ದರೂ ಸಹಿಸಿಕೊಂಡು ಕೆಚ್ಚೆದೆಯಿಂದ ಹೊರಾಡಿ , ಈ ದೇಶದಕ್ಕೆ ಸಂವಿಧಾನಕೊಟ್ಟಂತಹ ಭಾರತ ರತ್ನ ಡಾ | ಬಿ.ಆರ್.ಅಂಬೇಡ್ಕರ ಬಗ್ಗೆ ಶೋಷಿತ ಜನರ ಜನ ಮನಸ್ಸನ್ನು ತಣ್ಣನಗೊಳಿಸಿ ಪ್ರಸ್ತುತ ಇಂದಿಗೂ ಜೀವಂತವಾಗಿರುವ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಪ್ರೇರಿಪಿಸುತ್ತಿರುವ ಧಾರವಾಹಿಯನ್ನು ನಿಲ್ಲಿಸುವಂತೆ ಬೆದರಿಕೆ ಹಾಕುವದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಸಂಚಾಗಿದೆ . ಇಂದಿಗೂ ಜಾತಿ ನಾಶವಾಗಿಲ್ಲ . ದೇಶ ರಾಜ್ಯದಲ್ಲಿ ದಲಿತರ ಮೇಲೆ ಸವರ್ಣಿಯ ಕೊಲೆ , ಅತ್ಯಾಚಾರ , ತಾರತಮ್ಯ ನಿಂತಿಲ್ಲ . ಕಾರ್ಪೋರೆಟರ್ ಬಂಡವಾಳವಾದ ಕೋಮವಾದಿ ಆಳುವ ಸರಕಾರಗಳ ಕೃಪಾ ಪೋಷಿತವಾಗಿ ವ್ಯವಸ್ಥಿತವಾಗಿ ಜಾತಿವಾದ ಕೋಮವಾದ ಲಿಂಗತಾರತಮ್ಯ ಬೆಳೆಯುತ್ತದೆ . ಇದರ ವಿರುದ್ಧ ದಲಿತ ಆದಿವಾಸಿ , ರೈತ ಕಾರ್ಮಿಕ , ಪ್ರಗತಿಪರ ಕಮುನಿಷ್ಟ ಸಂಘಟನೆಗಳು ಸಿಡಿದೆದ್ದು , ಭಲಾಡ್ಯ ಜನಾಂದಲೋನವನ್ನು ಮುನ್ನಡೆಸಬೇಕಾಗಿದೆ . ಝೀ ಕನ್ನಡ ವಾಹಿನಿಯ ನಿರ್ವಾಹಕರು , ಮತ್ತು ಧಾರವಾಹಿಯನ್ನು ಚಿತ್ರೀಕರಣ ಮಾಡುತ್ತಿರುವ ಕಲಾವಿದರಿಗೆ ಸರಕಾರ ರಕ್ಷಣೆ ನೀಡಿ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಈ ಮುಖಾಂತರ ಭಾರತೀಯ ಪ್ರಜಾ ಸಂಘ ( ಭೀಮ ನಡೆ ) ತಾಲೂಕ ಸಮಿತಿ ಲಿಂಗಸಗೂರು ವತಿಯಿಂದ ಮುಖ್ಯಮಂತ್ರಿ ಸನ್ಮಾನ ಶ್ರೀ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಗಳು ರವರಿಗೆ ಸಹಾಯ ಆಯುಕ್ತರು ಉಪ ವಿಭಾಗ ಲಿಂಗಸೂಗೂರೂ ಇವರ ಮುಖಾಂತರ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಹೊಳಿಯಪ್ಪ ಕುಣಿಕೆಲ್ಲೂರು . ದಯಾನಂದ ಭೀಮಣ್ಣ .ಬಸವರಾಜ. ಅಶೋಕ ಮುಳದಿನ್ನಿ . ಮೌನೇಶ .ದೇವರಾಜ ಮಲ್ಲೇಶ .ಹುಲ್ಲಪ್ಪ ನಾಗಪ್ಪ . ವೆಂಕಟೇಶ ಇತರರು ಇದ್ದರು

Share and Enjoy !

Shares