ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು:ರಾಷ್ಟ್ರೀಯ ಶಿಕ್ಷಣ – 2020 ನೀತಿ ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಚರ್ಚೆ ನಡೆಸದೆ ತರಾತುರಿಯಲ್ಲಿ
ಜಾರಿಗೊಳಿಸುವ ಪ್ರಯತ್ನ ಮಾಡುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆ ಕಗ್ಗೊಲೆ ಮಾಡುತ್ತಿದೆ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ತಾಲ್ಲೂಕು ಅಧ್ಯಕ್ಷರಾದ ನೂರ್ ಮೊಹಮ್ಮದ್ ಹೇಳಿದರು.
ನಗರದ ತಹಸೀಲ್ ಕಚೇರಿಯ ಮುಂದೆ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ಪ್ರಸಾರದ 2020 ನೀತಿಯ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರವು ಕೋರನ ಹೆಸರಿನಲ್ಲಿ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ ತರಾತುರಿಯಲ್ಲಿ ಏಕಪಕ್ಷಿಯವಾಗಿ ರಾಷ್ಟ್ರೀಯ ಶಿಕ್ಷಣ – 2020 ನೀತಿಯನ್ನು ಜಾರಿಗೊಳಿಸುವುದು ಎಷ್ಟರ ಮಟ್ಟಿಗೆ ಸರಿ.ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ ಕೂಡಲೇ ಅಧಿವೇಶನದಲ್ಲಿ ಜನಪ್ರತಿನಿಧಿಗಳಿಗೆ ಚರ್ಚೆಗೆ ಅವಕಾಶ ನೀಡಿ ಸಾಧಕ ಬಾಧಕಗಳ ಪರಿಶೀಲಿಸಿ ನಂತರ ಜಾರಿಗೊಳಿಸಲು ಯೋಚಿಸಬೇಕು ಇಲ್ಲವಾದಲ್ಲಿ ರಾಷ್ಟ್ರವ್ಯಾಪಿಯಾಗಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ನಂತರ ಬರೆದ ಮನೆಯ ಪತ್ರವನ್ನು ಉಪತಹಸೀಲ್ದಾರ್ ಅಂಬಾದಾಸ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಇಂತಿಯಾಜ್ ಡಾಕ್ಟರ್ ವಸೀಮ್ ಆಸಾರ್ ಉಸ್ಮಾನ್ ಕಲಂದರ್ ಇನ್ನಿತರ ಸದಸ್ಯರುಗಳು ಭಾಗವಹಿಸಿದ್ದರು .