ವಿಜಯನಗರವಾಣಿ ಸುದ್ದಿ :
ರಾಯಚೂರು ಜಿಲ್ಲೆ:
ಲಿಂಗಸೂಗೂರೂ: ಸರಕಾರಿ ವಸತಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರು ಕ್ವಾರಂಟೈನ್‌ನಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ 5 ತಿಂಗಳ ವೇತನವನ್ನು ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡ , ವರ್ಗಗಳ ಇಲಾಖೆಯು ಸರಕಾರಿ ನಿಲಯಗಳ ದಿನಗೂಲಿ ಕಾರ್ಮಿಕರು ಕೋವಿಡ್ -19 ಕ್ವಾರಂಟೈನ್‌ನಲ್ಲಿ ಸುಮಾರು 5 ತಿಂಗಳುಗಳಿಂದ ಕಾರ್ಯನಿರ್ವಹಿಸಿದ ವೇತನವನ್ನು ಈ ವರೆಗೂ ನೀಡಿರುವುದಿಲ್ಲ , ತೀರಾ ಆರ್ಥಿಕ ಪರಿಸ್ಥಿತಿ ತಲೆದೋರಿದ್ದು ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಆದ್ದರಿಂದ ತೀವ್ರದಲ್ಲಿ ತಿಂಗಳುಗಳ ವೇತನವನ್ನು ( ಏಪ್ರಿಲ್‌ನಿಂದ ಆಗಸ್ಟ್ ತಿಂಗಳುವರೆಗೆ ) ನೀಡಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ವಸತಿ ನಿಲಯ ಹೊರ ಗುತ್ತಿಗೆ ಕಾರ್ಮಿಕ ಸಂಘ -TUCI ಸಹಾಯ ಆಯುಕ್ತರಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ದೇವಣ್ಣ ಕರಡಕಲ್ಲ, ಚಿನ್ನಪ್ಪ ಪ್ರಶಾಂತ .ಗೌರಮ್ಮ, ಗಂಗಮ್ಮ ಕಮಲಮ್ಮ ,ಲಕ್ಷ್ಮೀ ,ಮಾಲಾಬೀ,ಹೊಳೆಪ್ಪ.ಮಂಜುನಾಥ್. ದೇವಮ್ಮ,ಲಕ್ಷ್ಮೀ, ಹುಲಿಗೇಮ್ಮ,ರೇಣುಕಾ, ಹುಸೇನ್ ಮ್ಮ,ಖಾಜಾಹುಸೇನ.ಬಾಲಪ್ಪ,ರರಿಯಾನ ಬೇಗಂ ಇತರರು ಇದ್ದರು