ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಸಿರುಗುಪ್ಪ :ತಾಲೂಕಿನ ಕೊತ್ತಲಚಿಂತ ಗ್ರಾಮದ ಶ್ರೀ ಹನುಮಂತಾವಧೂತರ ವಾರ್ಷಿಕ ರಥೋತ್ಸವ ಅಂಗವಾಗಿ ಹುಚ್ಚಾಯ ಎಳೆಯುವ ಸಂದರ್ಭದಲ್ಲಿ ಹುಚ್ಚಾಯ ಮೇಲ್ಭಾಗದ ವೆಲ್ಡಿಂಗ್ ಮುರಿದ ಕಾರಣ ಆರು ಜನರಿಗೆ ಗಾಯಗಾಳಾದ ಘಟನೆ ಸೋಮವಾರ ನಡೆದಿದೆ.
ರಾಘವೇಂದ್ರರೆಡ್ಡಿ, ಗುಂಡಪ್ಪಸ್ವಾಮಿ, ಲಕ್ಷ್ಮೀ ಕಾಂತರೆಡ್ಡಿ, ತಿಕ್ಕಯ್ಯ,
ತಾಯಪ್ಪ,ಮಹೇಶ ಹುಚ್ಚಾಯ ಎಳೆಯುವಾಗ ತೇರಿನ ಮೇಲ್ಭಾಗದ ವೆಲ್ಡಿಂಗ್ ಮುರಿದ ಕಾರಣ ಆರು ಮಂದಿಗೆ ಗಾಯಗಳಾಗಿದ್ದು, ಇದರಲ್ಲಿ ಮಹೇಶ್ ಎನ್ನುವ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದ್ದು,
ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕೇವಲ ಪೂಜೆನರೆವೇಸಲುಮಾತ್ರವೆ
ಪಂಚಾಯಿತಿ ಪಿ.ಡಿ.ಒ. ಗ್ರಾಮಸ್ಥರಿಗೆ ಸೂಚನೆ ನೀಡಿದ್ದರು. ತೆರು ಹಾಗೂ ಹುಚ್ಚಾಯಏಳೆಯದಂತೆ ಅಧಿಕಾರಿಗಳು ದೆವಸ್ತಾನದ ಆಡಳಿತ ಮಂಡಳಿಯವರಿಗೆ
ಸೂಚನೆ ನಿಡಿದ್ದರು ಆದರೆ ಸಂಪ್ರದಾಯವನ್ನು ಪಾಲಿಸುವ ಉದ್ದೇಶದಿಂದ ಹುಚ್ಚಾಯ ಎಳೆಯಲು ಮುಂದಾಗಿದ್ದು, ಅನಾಹುತ ನಡೆಯಲು ಕಾರಣವಾಗಿದೆ.
ತೇರು ಎಳೆಯಲು ಹನುಮಂತಾವಧೂತರ ಮಠದಿಂದ ಅನುಮತಿ ಕೇಳಿ ಪತ್ರ ಬಂದಿಲ್ಲ, ತೇರನ್ನು ಎಳೆಯಲು ನಮ್ಮ ಇಲಾಖೆಯಿಂದ ಅನುಮತಿ ಪಡೆದಿಲ್ಲವೆಂದು ಲೋಕೋಪಯೋಗಿ ಇಲಾಖೆಯ ಎ.ಇ.ಇ. ಮುತ್ತಯ್ಯ ತಿಳಿಸಿದ್ದಾರೆ.
ತೇರು ಮುರಿದ ಘಟನೆಯಲ್ಲಿ 6 ಜನರಿಗೆ ಗಾಯಗಳಾಗಿದ್ದು, ಐದು ಜನ ಗಾಯಾಳುಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದೇವೆ, ಮಹೇಶ ಎನ್ನುವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ನಗರದ ೧೦೦ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ದೇವರಾಜ್ ಮಾಹಿತಿ ನೀಡಿದ್ದಾರೆ.
ಈ ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಸಿರುಗುಪ್ಪ ಪೊಲೀಸ್ ಠಾಣೆಯ ಸಿ.ಪಿ.ಐ. ಟಿ.ಆರ್.ಪವಾರ್ ತಿಳಿಸಿದ್ದಾರೆ.