ವಿಜಯನಗರವಾಣಿ ಸುದ್ದಿ
ಕೊಪ್ಪಳ ಜಿಲ್ಲೆ:
ಕಾರಟಗಿ: ಕಲ್ಯಾಣ ಕರ್ನಾಟಕ ಉತ್ಸವದ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಈ ಬಾರಿಯ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಂಬಂಧಿಸಿದ ಪುರಸಭಾ ಅಧಿಕಾರಿಗಳು,ಆರೋಗ್ಯ ಇಲಾಖೆ,ಶಿಕ್ಷಣ ಇಲಾಖೆ,ಪಶುಸಂಗೋಪನಾ ಇಲಾಖೆ,ಅಗ್ನಿಶಾಮಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,ಪೊಲೀಸ್ ಇಲಾಖೆ,ಮತ್ತು ತಾಲೂಕ ಹೋರಾಟ ಸಮಿತಿ,ಇಲಾಖೆ ಅಧಿಕಾರಿಗಳ ಮಾರ್ಗ ಸೂ ಚಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದರು ಕಾರಟಗಿ ತಹಶೀಲ್ದಾರ್ ಆರ್ ಕವಿತಾ ಆರ್ ರವರು ಸೆಪ್ಟೆಂಬರ್.17 ರಂದು ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಅಧ್ಯಕ್ಷತೆಯಲ್ಲಿ ಬುದುವಾರ ನಡೆಯಿತು. ಅಧ್ಯಕ್ಷತೆ ವಹಿಸಿದ ತಹಶೀಲ್ದಾರ್ .ಕಲ್ಯಾಣ ಕರ್ನಾಟಕ ಉತ್ಸವ ದೀ,17-9-202ರಂದು ಬೆಳಿಗ್ಗೆ 8-00 ಗಂಟೆಗೆ ರಾಷ್ಟ ಧ್ವಜಾರೋಹಣ ನೆರವೇರಿಸಲಾಗುವುದು
ಎಂದರುಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಹೋರಾಟಗಾರರಿಗೆ ಸನ್ಮಾನ ಮತ್ತು 60 ವರ್ಷ ವಯೋಮಿತಿಯ ಹೋರಾಟಗಾರರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಸನ್ಮಾನಿಸುವುದು, ಹೋರಾಟಗಾರರನ್ನು ಕರ್ನಾಟಕ ಉತ್ಸವದ ದಿನದ ಕಾರ್ಯಕ್ರಮದ ಭಾಷಣದಲ್ಲಿ ಉಲ್ಲೇಖನ ಮಾಡುವ ಕುರಿತು ಮತ್ತು ಕೋರೋಣ ವಾರಿಯರ್ಸ್ ಆಗಿ ಪತ್ರಿಕಾ ಮಾಧ್ಯಮದವರನ್ನು ಗುರುತಿಸಿ ಮತ್ತು ಅವರ ಸಂಘದವರನ್ನು ಸನ್ಮಾನಿಸಲು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಕೋರುವುದು, ಮತ್ತು ಸಂಘ-ಸಂಸ್ಥೆಗಳು ಲಾಕ್ಡೌನ್ ಸಮಯದಲ್ಲಿ ಸಲ್ಲಿಸಿದ ಸೇವೆಗೆ ಸನ್ಮಾನಿಸಿ ಗೌರವಿಸಲು ಜಿಲ್ಲಾಧಿಕಾರಿಗಳಿಗೆ ಪತ್ರಗಳ ಮೂಲಕ ನಿರ್ಧರಿಸಲಾಗುವುದು ಮತ್ತು ಅಧಿಕಾರಿಗಳ ಸಭೆಯನ್ನು ಕರೆಯುವ ಮುನ್ನ ಸಂಘ-ಸಂಸ್ಥೆಗಳನ್ನು ಮತ್ತು ಪತ್ರಿಕಾ ಮಾಧ್ಯಮವರನ್ನು ಪೂರ್ವಬಾವಿ ಸಭೆಗೆ ಕರೆಯಲು ನಿರ್ಧರಿಸಲಾಯಿತು, ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು ಮತ್ತು ಅವರಿಗೆ ಒಂದೊಂದು ಜವಾಬ್ದಾರಿ ಕೆಲಸವನ್ನು ವಹಿಸಲಾಯಿತು,
ಈ ವೇಳೆ ಮಾತನಾಡಿದ ತಹಶೀಲ್ದಾರ್,ಕವಿತಾ ಆರ್ ಸರ್ಕಾರ ನಿರ್ದೇಶನದಂತೆ ನಿರ್ದಿಷ್ಟ ಮಂದಿಯನ್ನು ಸೇರಿಸಿ, ಮಾಸ್ಕ್, ಸಾಮಾಜಿಕ ಆಂತರ, ಸ್ಯಾನಿಟೈಸೇಷನ್‌ಗಳ ಮುಂಜಾಗ್ರತಾ ಕ್ರಮ ಕೈಗೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸರಳವಾಗಿ ಧ್ವಜಾರೋಹಣ ನಡೆಸಲಾಗುತ್ತದೆ. ಯಾವುದೇ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ರದ್ದು ಪಡಿಸಲಾಗಿದೆ,ಮತ್ತು 10ವರ್ಷದ ಒಳಗಿನ 60ವರ್ಷ ಮೇಲ್ಪಟ್ಟ ವ್ಯಕ್ತಿಗಳನ್ನು ಆಹ್ವಾನಿಸುವುದು ನಿಷೇಧಿಸಿದೆ, ವಿದ್ಯಾರ್ಥಿಗಳು, ಎನ್ ಸಿಸಿ ವಿದ್ಯಾರ್ಥಿಗಳ ಪರೇಡ್ ಕೂಡ ರದ್ದು ಪಡಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ಸರಳವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ತಾಲೂಕು ಹೋರಾಟ ಸಮಿತಿ ಪಾಲ್ಗೊಂಡಿದ್ದರು