ರೈತರಿಗೆ ಪರಿಹಾರ ಒದಗಿಸವಲ್ಲಿ ಅದೀಕಾರಿಗಳು ವಿಳಂಬವಾಗಬಾರದು ರಾಜೇಶಕರ್ ಡಂಬಾಳ

Share and Enjoy !

Shares
Listen to this article

 

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ:

ಸಿಂಧನೂರು:ರೈತ ಆತ್ಮಹತ್ಯೆ ಪ್ರಕರಣ
ಅಕಾಲಿಕ ಮರಣ ಹೊಂದಿದ ರೈತ ಪ್ರಕರಣಗಳ ಕುರಿತು ಸಭೆ.ನಗರದ ತಹಶಿಲ್ದಾರರ ಕಚೇರಿಯಲ್ಲಿ ಲಿಂಗಸುಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ ನೇತೃತ್ವದಲ್ಲಿ ಕೃಷಿ ಇಲಾಖೆ,ಪೋಲಿಸ್ ಇಲಾಖೆ ,ಸಾರ್ವಜನಿಕ ಆರೋಗ್ಯ ಇಲಾಖೆ ಸೇರಿದಂತೆವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಪ್ರಕರಣ ಹಾಗೂ ಕೃಷಿ ಚಟುವಟಿಕೆ ಯಲ್ಲಿ ತೊಡಗಿದ ರೈತಾಪಿ ವರ್ಗವು ನಾನಾ ಕಾರಣಗಳಿಂದ ಅಕಾಲಿಕ ಮರಣ ಹೊಂದಿದ ಪ್ರಕರಣಗಳ ಕುರಿತು ಸಭೆಯನ್ನು ನಡೆಸಲಾಯಿತು .ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾಲ್ಲೂಕಿನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಪ್ರಕರಣ ಹಾಗೂ ರೈತರು ಹೊಲದಲ್ಲಿ ಕೆಲಸ ಮಾಡುವಾಗ ನಾನಾ ಕಾರಣಗಳಿಂದ ಅಕಾಲಿಕ ಮರಣ ಹೊಂದಿದ ಪ್ರಕರಣ ಗಳ ಕುರಿತು ಸಭೆಯನ್ನು ನಡೆಸಲಾಯಿತು.

ತಾಲೂಕಿನ ಸಾಲಬಾಧೆಯಿಂದ ಆತ್ಮಹತ್ಯೆ ರೈತ ಪ್ರಕರಣ ಗಳಲ್ಲಿ ಒಟ್ಟು 4 ದಾಖಲಾಗಿದ್ದು ಅದರಲ್ಲಿ ಈಗಾಗಲೇ 2 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದ್ದು .ಕೃಷಿ ಚಟುವಟಿಕೆ ಯಲ್ಲಿ ತೊಡಗಿದ ರೈತ ಅಕಾಲಿಕ ಮರಣ ಪ್ರಕರಣ ಗಳಲ್ಲಿ ಒಟ್ಟು 9 ದಾಖಲಾಗಿದೆ. ಇದರಲ್ಲಿ 5‌ ಪ್ರಕರಣ ಗಳನ್ನು ಇತ್ಯರ್ಥ ಮಾಡಲಾಗಿದ್ದು.
ಇನ್ನು ಉಳಿದ ಪ್ರಕರಣಗಳ ಬಗ್ಗೆ ಸರಿಯಾದ ದಾಖಲೆಗಳನ್ನು ಪಡೆದು ಲಗತ್ತಿಸುವ ಮೂಲಕ ನೊಂದ ರೈತಾಪಿ ವರ್ಗಕ್ಕೆ ಸರಕಾರದಿಂದ ಬರುವ ಪರಿಹಾರವನ್ನು ಒದಗಿಸುವಲ್ಲಿ ಪ್ರಾಮಾಣಿಕ ವಾಗಿ ಕರ್ತವ್ಯ ನಿರ್ವಹಿಸಲು ಕೃಷಿ ಇಲಾಖೆಯ ಸಹಾಯಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಂಡ ಅಧಿಕಾರ ಮಂಜುನಾಥ್ ಭೋಗಾವತಿ.ಕೃಷಿ ಇಲಾಖೆ ಸಹಾಯಕ ಆಯುಕ್ತರಾದ ಜಯಪ್ರಕಾಶ್.ಪ್ರಶಾಂತ್.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ
ವೈದ್ಯಾಧಿಕಾರಿ ಡಾ! ನಾಗರಾಜ್ ಪಾಟೀಲ್.ಸಿಪಿಐ ಬಾಲಚಂದ್ರ ಲಕ್ಕಂ.ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು

Share and Enjoy !

Shares