ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ:
ಸಿಂಧನೂರು:ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಕೋವಿಡ್-ನಿಂದ ಗುಣಮುಖರಾಗಲೆಂದು ವೃದ್ಧಾಶ್ರಮದಲ್ಲಿ ಸ್ಯಾನಿಟೈಸರ್ ಮಾಸ್ಕ್
ಬ್ರೆಡ್ ಹಣ್ಣು ಹಂಪಲ ವಿತರಿಸುವ ಮೂಲಕ ಪ್ರಾರ್ಥನೆ .
ನಗರದ ಕುಷ್ಟಗಿ ರಸ್ತೆಯಲ್ಲಿ ಇರುವ ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಅಹಿಂದ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಕೋವಿಡ್-19 ನಿಂದ ಬೇಗ ಗುಣಮುಖರಾಗಿ ಬರಲಿ ಎಂದು ರಾಯರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಕಾರುಣ್ಯ ನೆಲೆವೃದ್ಧಾಶ್ರಮದಲ್ಲಿ ವೃದ್ಧರಿಗೆ ಮಾಸ್ಕ್ ಸ್ಯಾನಿಟೈಸರ್ ಬ್ರೆಡ್ ಹಣ್ಣು ಹಂಪಲು ನೀಡುವುದರ ಮೂಲಕ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಗುಣಮುಖರಾಗಲೆಂದು ಪ್ರಾರ್ಥನೆ ಮಾಡಿದರು..
ಇನ್ನೂ ಇದೇ ಸಂದರ್ಭದಲ್ಲಿ ಸಂಜೆವಾಣಿ ಪತ್ರಿಕೆ ವರದಿಗಾರ ಚಿದಾನಂದ ದೊರೆ ಖಾಸಗಿ ಬ್ಯಾಂಕ್ ನಿಂದ ಉತ್ತಮ ವರದಿಗಾರರು ಪ್ರಶಸ್ತಿ ದೊರೆತ ಹಿನ್ನಲೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ನಿರುಪಾದೆಪ್ಪ ವಕೀಲರು.ರಾಯಪ್ಪ ವಕೀಲರು. ಎಚ್ ಎನ್ ಬಡಿಗೇರ್. ಜಿಲಾನಿ ಪಾಷಾ .ಸುರೇಶ್ ಜಾಧವ್. ಬಾಬರ್ ಪಾಷಾ ಜಾಗಿರ್ದಾರ್. ರಂಗನಗೌಡ. ಆರ್ ಪದ್ಮನಾಭ. ಗಂಗಾಧರ ಹೂಗಾರ್. ಹನುಮೇಶ ಬಾಗೋಡಿ. ಲಿಂಗಪ್ಪ ಹೊಸಳ್ಳಿ. ಸೇರಿದಂತೆ ಅಹಿಂದ ಒಕ್ಕೂಟ.ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು .