ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ.
ಸಿಂಧನೂರು: ಕೊರೋನ್ ವೈರಸ್ ಹರಡದಂತೆ ತಡೆಗಟ್ಟುವ ಮೂಲಕ
ಕ್ಷೇತ್ರದ ಜನತೆಗೆ ಆರೋಗ್ಯವನ್ನು ಶ್ರೀ ಅಂಬಾದೇವಿ ಕಾಪಾಡಲಿ ಎಂದು ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಹೇಳಿದರು .
ತಾಲೂಕಿನ ಅಂಬಾಮಠದ ಶ್ರೀ ಅಂಬಾದೇವಿ ದೇವಸ್ಥಾನದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಕೋವಿಡ್-19 ರಿಂದ ಶೀಘ್ರವಾಗಿ ಗುಣಮುಖರಾಗಲೆಂದು ಜೆಡಿಎಸ್ ಪಕ್ಷದ
ಕಾರ್ಯಕರ್ತರು ಹಿತೈಷಿಗಳಿಂದ ಅಂಬಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥಿಸಿ ಕೊಲ್ಲಲಾಯಿತು .
ಪೂಜೆಯನ್ನು ಸಲ್ಲಿಸಿ ನಂತರ ಮಾತನಾಡಿದ ಅವರು ಶಾಸಕ ವೆಂಕಟರಾವ್ ನಾಡಗೌಡ ಕೋವಿಡ್-19 ರಿಂದ
ಗುಣಮುಖರಾಗಲೆಂದು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಇಂದು ಅಂಬಾಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ಅವರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಗೌರವವನ್ನು ತೋರಿಸುತ್ತದೆ .ಶಾಸಕ ವೆಂಕಟರಾವ್ ನಾಡಗೌಡ ಅವರು ಬೇಗ ಗುಣಮುಖರಾಗುತ್ತಾರೆ ಜೊತೆಗೆ ಶ್ರೀ ಅಂಬಾ ದೇವಿಯು ಕ್ಷೇತ್ರದ ಜನತೆಗೆ ಕೋರನ ವೈರಸ್ ನಿಂದ ಕಾಪಾಡುವ ಮೂಲಕ ರೈತಾಪಿ ಜನರ ಹಿತವನ್ನು ಕಾಪಾಡಲ್ಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಲಿಂಗಪ್ಪ ದಡೇಸುಗೂರು. ಧರ್ಮನಗೌಡ ಮಲ್ಕಾಪುರ. ಜಿಲಾನಿ ಪಾಷಾ .ಎಮ್. ಚಂದ್ರಶೇಖರ್. ಸೋಮನಗೌಡ. ಸಂಗಮೇಶ್.ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು