ಲಿಂಗಸುಗೂರ ತಾಲೂಕಿನ ಗುಜಲೇರದೊಡ್ಡಿಯಲ್ಲಿ 16 ಸಾವಿರ ಮೌಲ್ಯದ ಗಾಂಜಾ ವಶ

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ:

ಲಿಂಗಸುಗೂರ ತಾಲೂಕಿನ ಗುಜಲೇರದೊಡ್ಡಿಯಲ್ಲಿ 16 ಸಾವಿರ ಮೌಲ್ಯದ ಗಾಂಜಾ ವಶಹಟ್ಟಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲೂಕಿನಲ್ಲಿ ಅಕ್ರಮವವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಜಲೇರದೊಡ್ಡಿಯ ಪರಸಪ್ಪ ಗುಜ್ಜಲ ಹಾಗೂ ಅಮರೇಶ ಗುಜ್ಜಲ ಬಂಧಿತ ಆರೋಪಿಗಳು. ಇವರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು, ಪೊಲೀಸ್ ವರಿಷ್ಠಾಧಿಕಾಯಾದ
ಪ್ರಜಾಶ ನಿಕ್ಕಂ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ನೇತೃತ್ವದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ಐ ಮುದ್ದುರಂಗಸ್ವಾಮಿ ಸಹಯೋಗದಲ್ಲಿ ದಾಳಿ ನಡೆಸಿ 16 ಸಾವಿರ ಮೌಲ್ಯದ 9 ಕೆಜಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಸಂಬಂಧ ಪಟ್ಟಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share and Enjoy !

Shares