ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು : ನಗರದ ಪಂಚಾಯತ್ ರಾಜ್ ಇಂಜಿನೀಯರ್ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ
ಇಂಜಿನೀಯರ್ ಕಾಯಾಲಯದಲ್ಲಿ.
ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆ.ಇ ರಾಜಶೇಖರ್ ಗೌಡ ಮಾತನಾಡಿ
ಭಾರತ ರತ್ನ ವಿಶ್ವೇಶ್ವರ ಅವರು ಜಗತ್ತು ಕಂಡ ಅದ್ಭುತ ಇಂಜಿನೀಯರ್.ಇವರ ಕೊಡುಗೆಗಳು ಭಾರತಕ್ಕಷ್ಟೇ ಸೀಮಿತವಾಗದೆ ದೇಶ ವಿದೇಶಗಳಲ್ಲಿ ಕೂಡ ಇವರನ್ನು ನೆನೆಯುತ್ತಾರೆ . ಇವರ ಕೊಡುಗೆಗಳು ಮರೆಯುವಂತಿಲ್ಲ ಎಂದು ಹೇಳಿದರು..
ಇನ್ನು ಎ.ಇ.ಇ ಶ್ರೀನಿವಾಸ್ ರಂಗ ಮಾತನಾಡಿ ರಾಷ್ಟ್ರ ಅಭಿವೃದ್ಧಿ ಪಥ ಕೊಂಡೊಯ್ಯುವಲ್ಲಿ ಇಂಜಿನೀಯರ್ ಗಳ ಪಾತ್ರ ಅತ್ಯಂತ ಪ್ರಾಮುಖ್ಯವಾಗಿದೆ.ಈ ದಿಶೆಯಲ್ಲಿ ನಾವೆಲ್ಲರೂ ಸಾರಿ ವಿಶ್ವೇಶ್ವರಯ್ಯ ಅವರ ನಡೆದುಕೊಂಡ ಹಾದಿಯನ್ನು ಸ್ಮರಿಸುತ್ತಾ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡಿಯಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು .
ಈ ಸಂದರ್ಭದಲ್ಲಿ ಧನರಾಜ್ ಲಿಂಗನಗೌಡ ಸೇರಿದಂತೆ ಇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು