ವಿಶ್ವವಿದ್ಯಾಲಯದಿಂದ ಪದ್ಮಾವತಿ ಯತಗಲ್‌ಗೆ ಪ್ರಥಮ ರ‍್ಯಾಂಕ್ ನೊಂದಿಗೆ ನಾಲ್ಕು ಚಿನ್ನದ ಪದಕಗಳು

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾ

ಯಚೂರು ಜಿಲ್ಲೆ

ಲಿಂಗಸೂಗೂರು : ತಾಲ್ಲೂಕಿನ ಕಸಬಾಲಿಂಗಸೂಗೂರು ಗ್ರಾಮದ ಪದ್ಮಾವತಿ ಯತಗಲ್ ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರದಿಂದ ಎಂ.ಎ. ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದು ಪ್ರಥಮ ರ‍್ಯಾಂಕ್ ನೊಂದಿಗೆ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವುದರಿಂದ ವಿಶ್ವವಿದ್ಯಾಲಯದ 11 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ . ಪದ್ಮಾವತಿ ಯತಗಲ್ ಇವರು ಕಸಬಾ ಲಿಂಗಸೂಗೂರು ಗ್ರಾಮದ ಕೃಷಿ ಕುಟುಂಬದ ಶ್ರೀ ನಾಗಪ್ಪ ಯತಗಲ್ ಹಾಗೂ ಶ್ರೀಮತಿ ದುರಗಮ್ಮ ಇವರ ಸುಪುತ್ರಿಯಾಗಿದ್ದಾರೆ . ಇವರು ಕಸಬಾ ಲಿಂಗಸೂಗೂರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು , ಪದವಿಪೂರ್ವ ಶಿಕ್ಷಣವನ್ನು ಲಿಂಗಸೂಗೂರಿನ ಶ್ರೀ ಅಮರೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿ , ನಂತರ ಪದವಿ ಶಿಕ್ಷಣವನ್ನು ಎಸ್.ಎಂ.ಎಲ್.ಬಿ. ಕಲಾ , ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಿಂದ ಪಡೆದಿದ್ದಾರೆ .
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ಎಂ.ಎ.ಕನ್ನಡ ವಿಷಯದಲ್ಲಿ ಇಡೀ ವಿಶ್ವವಿದ್ಯಾಲಯಕ್ಕೆ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕ್ ನೊಂದಿಗೆ ಶ್ರೀಮತಿ ಸಂಗಮ್ಮ ಗುರುಬಸಪ್ಪ ಬಿರಾದಾರ ಚಿನ್ನದ ಪದಕ , ಶ್ರೀ ಈಶ್ವರಚಂದ್ರ ಚಿಂತಾಮಣಿ ಚಿನ್ನದ ಪದಕ , ಶ್ರೀಮತಿ ಪಾರ್ವತಿ ಈಶ್ವರಚಂದ್ರ ಚಿಂತಾಮಣಿ ಚಿನ್ನದ ಪದಕ , ಪ್ರೊ . ಎ.ಎಸ್ . ಹಿಪ್ಪರಗಿ ಚಿನ್ನದ ಪದಕಗಳನ್ನು ಇದೇ ಸೆಪ್ಟೆಂಬರ್ 19 , 2020 ರಂದು ವಿಶ್ವವಿದ್ಯಾಲಯದ 11 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ಕುಲಾಧಿಪತಿಗಳಾದ ರಾಜ್ಯಪಾಲ ರಾದ ವಾಜುಭಾಯಿವಾಲಾ ಅವರು ಚಿನ್ನದ ಪದಕಗಳೊಂದಿಗೆ ಪ್ರದಾನ ಮಾಡಲಿದ್ದಾರೆ . ರೈತ ಕುಟುಂಬದ ಹಿನ್ನೆಲೆಯುಳ್ಳ ಪದ್ಮಾವತಿ ಯತಗಲ್ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ಹಾಗೂ ಇಡೀ ರಾಯಚೂರು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ . ಪದ್ಮಾವತಿ ಯತಗಲ್ ಅವರ ಸಾಧನೆಗೆ ಗ್ರಾಮಸ್ಥರು , ವಿದ್ಯಾಗುರುಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ .

Share and Enjoy !

Shares