ವಿಜಯನಗರವಾಣಿ ಸುದ್ದಿ:
ಬಳ್ಳಾರಿ ಜಿಲ್ಲೆ
ಸಿರುಗುಪ್ಪ :ರಾರಾವಿ ಗ್ರಾಮ. ಪಂಚಾಯಿತಿ ಮುಖ್ಯ ರಸ್ತೆಯ ಪಕ್ಕದಲ್ಲಿ ಎಲ್ಲಂದರಲ್ಲಿ ಕಸ ಬಿದ್ದಿ ದುರ್ವಾಸನೆ ಬೀರಿದೆ ಇದರಿಂದ ಒಡಾಡುವ
ಸಾರ್ವಜಕರು ದುರ್ವಾಸನೆಗೆ ಬೇಸತ್ತಿದ್ದಾರೆಗ್ರಾಮದಲ್ಲಿ ಸ್ವಚ್ಚತೆ ಕಾಪಾಡಬೇಕಾದ ಸ್ಥಳೀಯ ಗ್ರಾಮ ಪಂಚಾಯತಿ ಮಾತ್ರ ತಮಗೇನು ಸಂಬಂದವಿಲ್ಲದಂತಿದೆ.ವಾಹನ ಸವಾರರು, ವೃದ್ಧರು,ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ನಾಗರಿಕರು ದುರ್ವಾಸನೆಗೆ ಬೇಸತ್ತಿದ್ದು ಈ ಕುರಿತು ಸಂಬಂದಿಸಿದ ಅಧಿಕಾರಿಗಳ ಗಮನ ಸೆಳೆದರು ಇಲ್ಲಿಯವರೆಗೆ ಕ್ರಮ ತೆಗೆದುಕೊಂಡಿಲ್ಲ ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳ ಬೀತಿ ಎದುರಾಗಿದ್ದು ಕೂಡಲೇ ಪಂಚಾಯತಿಯವರು ತ್ಯಾಜವಸ್ತುಗಳನ್ನು ತೆಗೆದು ಸ್ವಚ್ಚಗೊಳಿಸಬೆಕೆಂದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೇ.ಅಧಿಕಾರಿಗಳ ನಿರ್ಲಕ್ಷ್ಯ : ನಿತ್ಯ ಇದೇ ರಸ್ತೆಯಲ್ಲಿ ತಿರುಗಾಡುವ ಅಧಿಕಾರಿಗಳ ಕಣ್ಣಿಗೆ ತ್ಯಾಜ್ಯ ವಸ್ತುಗಳು ರಾರಾಜಿಸುತ್ತಿದ್ದರು ಇದ್ದಕೂ ನಮಗೂ ಸಂಬಂಧವಿಲ್ಲ ಎನ್ನವ ರೀತಿಯಲ್ಲಿ ವರ್ತಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಗ್ರಾಮಪಂಚಾಯತಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಜಾಗೃತಿ ಮೂಡಿಸುತ್ತಿದ್ದು ಅವರೇ ಸ್ವಚ್ಚತೆ ಕಾಪಡದೇ ಈ ಇರೊದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣ ವಾಗಿದೆ.ರಸ್ತೆಯ ಪಕ್ಕದಲ್ಲಿ ಬೀದಿ ಬಳಿ ವ್ಯಾಪರಸ್ಥರು ತ್ಯಾಜ್ಯಗಳನ್ನು ಎಸೆಯುತ್ತಿದ್ದು ಗ್ರಾಮಪಂಚಾಯತಿ ಅಧಿಕಾರಿಗಳು ಈ ಕುರಿತು ಗಮನಹರಿಸಿ ಸ್ವಚ್ಚತೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ