ಬೆಳೆಗಳಿಗೆ ಬಿಡಾಡಿ ಕುದುರೆಗಳ ಹಾವಳಿ ಬೇಸತ್ತ ರೈತರು

Share and Enjoy !

Shares

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಸಿರುಗುಪ್ಪ : ತಾಲೂಕಿನಲ್ಲಿ ಒಂದು ಕಡೆ ಕೋರೊನಾ ವೈರಸ್ ಭಯಕಾಡುತ್ತಿದೆ, ಮತ್ತೋಂದು ಕಡೆ ಪ್ರಾರಂಭದಲ್ಲಿ ಉತ್ತಮ ಮಳೆ ಸುರಿದು ಬೆಳೆಯು ಚೆನ್ನಾಗಿ ಬರುವಾಗ ನಿರಂತರ ಮಳೆಯಿಂದಾಗಿ ಬೆಳೆಯನ್ನು ಉಳಿಸಿಕೊಳ್ಳುವ ಸಹಾಸದಲ್ಲಿ ರೈತರಿದ್ದರೆ ಈ ಬಿಡಾಡಿ ಕುದುರೆಗಳ ಕಾಟದಿಂದ ಬೇಸತ್ತಿದ್ದಾರೆ.
ತಾಲೂಕಿನ ಹಳೇಕೋಟೆ, ತೆಕ್ಕಲಕೋಟೆ, ದೇವಿನಗರ, ಬೈರಾಪುರ, ಶಾನವಾಸಪುರ, ಇಬ್ರಾಂಪುರ, ಬಗ್ಗೂರು ಗ್ರಾಮಗಳ ಜಮೀನುಗಳು ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು ಈ ಜಮೀನುಗಳಲ್ಲಿ ಹತ್ತಿ, ತೊಗರೆ, ಭತ್ತ ನಾಟಿ ಮಾಡಿದ್ದು ಮೇವು ತಿನ್ನಲು ಹೋಗುತ್ತಿರುವ ಬಿಡಾಡಿ ಕುದರೆಗಳು ಬೆಳೆಯನ್ನು ತುಳಿದು ಹಾಳು ಮಾಡುತ್ತಿವೆ. ಬಿಡಾಡಿ ಕುದುರೆಗಳು ಗುಂಪುಗಳಾಗಿ ಬೆಳೆಗಳಿಗೆ ನುಗ್ಗುತ್ತಿವೆ ರೈತರು ಅವುಗಳನ್ನು ಓಡಿಸಿದರೂ ಒಬ್ಬರ ಹೊಲದಿಂದ ಮತ್ತೊಬ್ಬರ ಹೊಲಕ್ಕೆ ಲಗ್ಗೆ ಹಾಕುತ್ತಿವೆ.
ಯಾರಿಗೆ ದೂರು ನೀಡುವುದು? : ಕುದುರೆಗಳು ಹಾಳೂ ಮಾಡಿದ ಬೆಳೆಗಳ ಬಗ್ಗೆ ಯಾರಿಗೆ ದೂರು ನೀಡುವುದು ಎಂಬುದು ರೈತರಿಗೆ ಯಕ್ಷ ಪ್ರಶ್ನೆಯಾಗಿದೆ. ಪೊಲೀಸ್ ಠಾಣೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನೆ ಇಲಾಖೆ ಸಂಪರ್ಕಿಸಿದರು ಇದಕ್ಕೆ ಪರಿಹಾರ ದೊರೆಯುತ್ತದೆ? ಕುದುರೆಗಳನ್ನು ಕಟ್ಟಲು ರೈತರ ಕೈಗೆ ಸಿಗುವುದಿಲ್ಲ, ಹೊಲದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿ, ಚಿನ್ನಾಟ ಆಡಿ ಬೆಳೆಯನ್ನು ಹಾಳು ಮಾಡುತ್ತಿವೆ.
ಕುರಿಗಾಹಿಗಳಿಗೆ ಎಚ್ಚರಿಸಬೇಕು : ಕುರಿಗಾಹಿಗಳು ತಮ್ಮ ಹೆಚ್ಚುವರಿ ಕುದುರೆಗಳನ್ನು ಎಲ್ಲಿ ಬೇಕಾಂದರಲ್ಲಿ ಬಿಟ್ಟು ಹೋಗಿದ್ದಾರೆ, ಅವುಗಳು ತಮ್ಮ ಆಹಾರಕ್ಕಾಗಿ ರೈತರ ಬೆಳೆ ಹಾಳು ಮಾಡುತ್ತಿವೆ, ಕುದುರೆಗಳನ್ನು ಬಿಟ್ಟಿಹೋಗಿರುವ ಕುರಿಗಾಹಿಗಳಿಗೆ ಎಚ್ಚರ ನೀಡಬೇಕೆಂದು ರೈತ ಮಾರೆಪ್ಪ ನಾಯಕ್ ಒತ್ತಾಯಿಸಿದ್ದಾರೆ.

 

 

Share and Enjoy !

Shares