ವಿಶ್ವಕರ್ಮನೆಂಬ ಸೃಷ್ಟಿಕರ್ತನ ಸ್ಮರಿಸೋಣ

Share and Enjoy !

Shares

 

ವಿಜಯನಗರವಾಣಿ ಸುದ್ದಿ

ವಿಶ್ವಕರ್ಮಜಯಂತಿಯ ಅಂಗವಾಗಿ ವಿಶೇಷ ಲೇಖನ ಸಂತೊಷ ಬಿದರಗಡ್ಡೆಅವರಿಂದ

ಜಗತ್ತಿನ ಸೃಷ್ಟಿಯ ಬಗ್ಗೆ ಹೇಳುತ್ತಾ ಹೋದರೆ ಅಪಾರ ಜ್ಞಾನ ತಿಳುವಳಿಕೆಯ ಅಗತ್ಯವಿದೆ. ಮನುಕುಲದ ಸೃಷ್ಟಿ ಅದ್ಭುತ ಮತ್ತು ಅಮರ. ಇಂತಹ ಭುವಿಯ ಮೇಲೆ ಜೀವನ ಮಾಡುತ್ತಿರುವ ನಾವು ನೀವೆಲ್ಲ ಅನೇಕ ಸೃಷ್ಟಿ ಸ್ಥಿತಿ ಲಯಗಳನ್ನು ನೋಡಿದ್ದೇವೆ, ನೋಡಬೇಕಾಗಿದೆ.
ಹಬ್ಬ ಹರಿದಿನಗಳನ್ನು ಒಂದೊಂದು ಕಾರಣಕ್ಕಾಗಿ ಒಂದೊಂದು ದಿನವನ್ನು ಆಚರಿಸುವ ಮೂಲಕ ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವವನ್ನು ನಂಬಿದ್ದೇವೆ. ಅಂತಹ ಮಹತ್ವದ ದಿನಾಚರಣೆಗಳಲ್ಲೊಂದು “ವಿಶ್ವಕರ್ಮ ಜಯಂತಿ”. ಬನ್ನಿ ಹಾಗಾದರೆ ಒಂದಿಷ್ಟು ಮಾಹಿತಿಯನ್ನು,
ಶಿಲ್ಪಿಗಳ ದೇವರು ವಿಶ್ವಕರ್ಮ ಜಯಂತಿ ಹಿನ್ನೆಲೆ ವಿಶ್ವಕರ್ಮನ ಕುರಿತು ವಿಶ್ವಕರ್ಮರ ಬಗ್ಗೆ ತಿಳಿಯೋಣ.

ವಿಶ್ವಕರ್ಮನು ಶಿಲ್ಪಕಲೆಗಳ ದೇವರು ಎಂದು ಕರೆಯಿಸಿಕೊಂಡಿದ್ದು ಅಂತೆಯೇ ಇಡಿಯ ವಿಶ್ವವನ್ನು ನಿರ್ಮಿಸಿದ್ದು ಇವರು ಎಂದಾಗಿದೆ. ಇವರನ್ನು ದೇವ ಶಿಲ್ಪಿ ಎಂದೂ ಕರೆಯಲಾಗುತ್ತದೆ. ನಾಲ್ಕ ತಲೆಗಳನ್ನು ಇವರು ಹೊಂದಿದ್ದು, ನಾಲ್ಕು ಕೈಗಳನ್ನು ಹೊಂದಿದ್ದಾರೆ. ತಮ್ಮ ಕೈಗಳಲ್ಲಿ ತನ್ನ ಪರಿಕರಗಳನ್ನು ಹಿಡಿದುಕೊಂಡು ಇವರು ಚಿನ್ನದ ಒಡವೆಯನ್ನು ಧರಿಸಿಕೊಂಡು ಚಿನ್ನದ ಆಸನದಲ್ಲಿ ಕುಳಿತಿರುತ್ತಾರೆ.
ಮೂಲಸ್ತಂಭ ಪುರಾಣದ ಒಂದು ಸೂಕ್ತದ ಪ್ರಕಾರ, ಭೂಮಿ, ಜಲ, ಬೆಳಕು, ಗಾಳಿ ಮತ್ತು ಆಕಾಶ, ತ್ರಿಮೂರ್ತಿಗಳು ಯಾವುದೂ ಇಲ್ಲದಿದ್ದಾಗ ಇವನು ತನ್ನನ್ನು ತನ್ನಿಂದಲೇ ಸೃಷ್ಟಿಸಿಕೊಂಡನು. ನಂತರ, ವೈದಿಕೋತ್ತರ ಮತ್ತು ಬ್ರಹ್ಮಣಗಳ ಅವಧಿಯಲ್ಲಿ, ವಿಶ್ವಕರ್ಮ ಪದವು ಋಷಿ ಮತ್ತು ಶಿಲ್ಪಿಯಾಗಿ ಕಾಣಿಸಿಕೊಂಡಿತು. ಯಜುರ್ವೇದದಲ್ಲಿ ಈ ಪದವು ಪಂಚಋಷಿಗಳ ಹೆಸರುಗಳಲ್ಲಿ ಒಂದಾಗಿ ಕಾಣಲಾಗುತ್ತದೆ. ಈ ಪದವು ಸೂರ್ಯನಾರಾಯಣನ ಗುಣವಾಚಕವಾಗಿದೆಯಾದರೂ, ಸೂರ್ಯನ ಏಳು ಕಿರಣಗಳಲ್ಲಿ ಒಂದಕ್ಕೆ ವಿಶ್ವಕರ್ಮನೆಂದು ಕರೆಯಲಾಗುತ್ತದೆ. ಇವನು ಬಹುಶಃ ಶಿಲ್ಪಿಯಾಗಿದ್ದನು ಮತ್ತು ಪೌರಾಣಿಕವಾದ ಅಷ್ಟಮ ವಸುಗಳಲ್ಲಿ ಎಂಟನೇ ಸಂನ್ಯಾಸಿ ಪ್ರಭಾಸನ ಮಗನಾಗಿದ್ದನು. ಇವನು ಸ್ಥಾಪತ್ಯ ವೇದ / ವಾಸ್ತು ಶಾಸ್ತ್ರ ಅಥವಾ ನಾಲ್ಕನೇ ಉಪವೇದವನ್ನು ಬಹಿರಂಗಗೊಳಿಸಿದನು ಮತ್ತು ಅರವತ್ತುನಾಲ್ಕು ಕಲೆಗಳ ಅಧಿಪತಿಯಾಗಿದ್ದಾನೆ ಎಂದು ಹೇಳಲಾಗಿದೆ.
ವಿಶ್ವಕರ್ಮನನ್ನು ಬ್ರಹ್ಮ ಎಂದೂ ಇಲ್ಲದಿದ್ದರೆ ಸೃಷ್ಟಿಯ ಮೂಲ ಎಂದೂ ಕೂಡ ಕರೆಯುತ್ತಾರೆ. ವಿಶ್ವಕರ್ಮನು ಬ್ರಹ್ಮನ ಪುತ್ರನಾಗಿದ್ದು ವಿಶ್ವದ ತಂದೆ ಎಂದೂ ಇವರನ್ನು ಕರೆಯುತ್ತಾರೆ. ಪ್ರತಿಯೊಂದನ್ನು ತಿಳಿದಿರುವ ದೇವರು ಎಲ್ಲವನ್ನೂ ಅರಿತುಕೊಳ್ಳುವ ದೇವರು ಎಂಬುದಾಗಿ ಕೂಡ ವಿಶ್ವಕರ್ಮನನ್ನು ಕರೆಯುತ್ತಾರೆ. ಯಾವ ದಿಕ್ಕಿನಲ್ಲಿ ವಿಶ್ವವು ತಿರುಗಬೇಕು ಎಂಬುದನ್ನು ಇವರು ನಿರ್ಧರಿಸುತ್ತಾರೆ. ಇವರು ನಾಲ್ಕು ತಲೆಗಳನ್ನು ನಾಲ್ಕು ಕೈಗಳನ್ನು ಹೊಂದಿರುವುದರಿಂದ ಭೂಮಿಯ ಸುತ್ತಲೂ ನೋಡಬಹುದಾಗಿದೆ.

ವಿಶ್ವಕರ್ಮನ ರಚನೆ:-

ಸತ್ಯ ಯುಗದಲ್ಲಿ ವಿಶ್ವಕರ್ಮನು ಸ್ವರ್ಗ ಲೋಕವನ್ನು ಸೃಷ್ಟಿಸಿದರು ಎಂದು ಹೇಳಲಾಗಿದೆ. ಅಂತೆಯೇ ತ್ರೇತಾ ಯುಗದಲ್ಲಿ ಲಂಕೆಯನ್ನು, ದ್ವಾಪರ ಯುಗದಲ್ಲಿ ದ್ವಾರಕೆ ಮತ್ತು ಹಸ್ತಿನಾಪುರವನ್ನು ಕಲಿಯುಗದಲ್ಲಿ ಇಂದ್ರಪ್ರಸ್ಥವನ್ನು ನಿರ್ಮಿಸಿದ್ದರು. ದೇವತೆಗಳು, ಪಟ್ಟಣಗಳು, ನಗರಗಳು ಮತ್ತು ದೇವಸ್ಥಾನಗಳಂತಹ ಸ್ಥಳಗಳಿಗಾಗಿ ವಿಶ್ವಕರ್ಮನು ವಿನ್ಯಾಸ ಮತ್ತು ರಚನೆ ಕಲೆಯನ್ನು ಹೊಂದಿದ್ದಾರೆ. ದ್ವಾರಕೆಯು ಕೃಷ್ಣನ ರಾಜಧಾನಿಯಾಗಿತ್ತು ಅಂತೆಯೇ ಹಸ್ತಿನಾಪುರ ಪಾಂಡವರ ರಾಜಧಾನಿಯಾಗಿತ್ತು ಇವರು ಕೌರವರಿಂದ ಯುದ್ಧ ಮಾಡಿ ಈ ಸ್ಥಳವನ್ನು ಪಡೆದುಕೊಂಡಿದ್ದರು. ಇಂದ್ರಪ್ರಸ್ಥವನ್ನು ಮಹಾಭಾರತದಲ್ಲಿದ್ದ ಪಟ್ಟಣವಾಗಿತ್ತು. ಇದೆಲ್ಲವನ್ನೂ ವಿಶ್ವಕರ್ಮ ನಿರ್ಮಿಸಿದ್ದರು.
ಅಂತೆಯೇ ರಾವಣನ ಚಿನ್ನದ ಅರಮನೆಯನ್ನು ವಿಶ್ವಕರ್ಮನೇ ಮಾಡಿದ್ದರು ಎಂದು ಕೂಡ ಹೇಳಲಾಗಿದೆ. ಇಲ್ಲಿ ಅವರು ಸೀತೆಯನ್ನು ಇಲ್ಲಿ ಬಚ್ಚಿಟ್ಟಿದ್ದರು ಎಂಬುದಾಗಿ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಪುರಿಯ ಜಗನ್ನಾಥ ದೇವಾಲಯವು ವಿಶ್ವಕರ್ಮನ ಸೃಷ್ಟಿಗೆ ಉದಾಹರಣೆಯಾಗಿದೆ. ಭಗವಾನ್ ಜಗನ್ನಾಥ್, ಸುಭಾಧ್ರಾ ಮತ್ತು ಬಲರಾಮ್ನ ಆಕರ್ಷಣೀಯವಾದ ರೂಪಗಳು ದೈವಿಕ ಕುಶಲಕರ್ಮಿಗಳ ಸೃಜನಾತ್ಮಕ ಕೌಶಲ್ಯದ ಪ್ರಕಾರ ಕೆತ್ತಲ್ಪಟ್ಟಿದೆ ಎಂದು ಹೇಳಲಾಗುತ್ತದೆ.
ಇದಲ್ಲದೆ, ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳು ಮತ್ತು ಮಹಾಭಾರತದ ದೈವಿಕ ಪಾತ್ರಗಳು ಮತ್ತು ರಾಮಾಯಣವನ್ನು ಹೊಂದಿದ್ದ ರಥಗಳು ಆತನನ್ನು ವಿನ್ಯಾಸಗೊಳಿಸಿದವು ಎಂದು ನಂಬಲಾಗಿದೆ. ಅದಕ್ಕಾಗಿಯೇ ವಿಶ್ವಕರ್ಮ ಮುಖ್ಯವಾಗಿ ಇಂಜಿನಿಯರ್ ವರ್ಗದವರಿಂದ ಪೂಜಿಸುತ್ತಾರೆ, ಅದರಲ್ಲೂ ವಿಶೇಷವಾಗಿ ವಾಸ್ತುಶಿಲ್ಪಿಗಳು ಮತ್ತು ಇತರ ವಿನ್ಯಾಸಕಾರರು, ಉದಾಹರಣೆಗೆ ಲೋಹೀಯ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳಂತಹ ಕಲಾಕಾರರು ಮತ್ತು ಕುಶಲಕರ್ಮಿಗಳು ವಿಶ್ವಕರ್ಮನನ್ನು ಪೂಜಿಸುತ್ತಾರೆ. ಜನರು ಸಾಮಾನ್ಯವಾಗಿ ದೇವತೆಗೆ ಮುಂಚಿತವಾಗಿ ಪೂಜೆ ಮಾಡುತ್ತಾರೆ ಮತ್ತು ತಮ್ಮ ವೃತ್ತಿಗಳಲ್ಲಿ ಬಳಸುವ ಯಂತ್ರಗಳು ಮತ್ತು ಸಾಧನಗಳನ್ನು ಸ್ವಚ್ಛಗೊಳಿಸುತ್ತಾರೆ, ವಿಶೇಷವಾಗಿ ವಿಶ್ವಾರ್ಮ ಪೂಜೆಯ ದಿನದಲ್ಲಿ ಉತ್ಪಾದನಾ ವ್ಯವಹಾರಗಳನ್ನು ಹೊಂದಿರುವವರು.

ವಿಶ್ವಕರ್ಮ ಪೂಜೆಯು ಹಿಂದೂ ಶಾಸ್ತ್ರದಲ್ಲಿ ಬಹುಮುಖ್ಯವಾದ ಪೂಜೆಯಾಗಿದೆ. ಪ್ರತೀ ವರ್ಷ ದೀಪಾವಳಿ ನಂತರ ವಿಶ್ವಕರ್ಮ ಪೂಜೆಯನ್ನು ನಡೆಸಲಾಗುತ್ತದೆ. ಭಾರತದ ಕೆಲವು ಕಡೆ ಸಪ್ಟೆಂಬರ್ ತಿಂಗಳಿನಲ್ಲಿ ಈ ಪೂಜೆಯನ್ನು ನಡೆಸಲಾಗುತ್ತದೆ. ಕುಶಲ ಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳು ವಿಶೇಷವಾಗಿ ವಿಶ್ವಕರ್ಮ ಪೂಜೆಯನ್ನು ನಡೆಸುತ್ತಾರೆ. ಈ ಪೂಜೆಯನ್ನು ನಡೆಸುವುದರಿಂದ ಉತ್ಪದಾನೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ದೊಡ್ಡ ಫ್ಯಾಕ್ಟ್ರಿಗಳು, ಆಫೀಸ್‌ಗಳು, ಇಂಜಿನಿಯರಿಂಗ್ ಯೂನಿಟ್‌ಗಳು, ಮತ್ತು ಸಣ್ಣ ವರ್ಕ್‌ಶಾಪ್‌ಗಳಲ್ಲಿ ವಿಶ್ವಕರ್ಮ ಪೂಜೆಯನ್ನು ನಡೆಸಲಾಗುತ್ತದೆ. ಒಬ್ಬರು ಈ ಪೂಜೆಯನ್ನು ನಡೆಸಬಹುದಾಗಿದ್ದು ಅಂತೆಯೇ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

ಒಟ್ಟಿನಲ್ಲಿ ವೇದ , ಪುರಾಣ, ಕಟ್ಟುಕಥೆ ಏನೇ ಇರಲಿ ಇಂದು ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ, ಭುವಿಯ ಮೇಲಿನ ಬದುಕಿನ ಸಹಚರ್ಯರಲ್ಲೊಬ್ಬರಾದ ನಾನಾ ಜಾತಿ ಮತ ಪಂಥಗಳೊಟ್ಟಿಗೆ ಬದುಕುತ್ತಿರುವ ನಾವು ನೀವೆಲ್ಲ ಕಲಾವಿದರು, ಆಚಾರ್ಯರು, ಶಿಲ್ಪಗಳು ಮುಂತಾದ ಕಸುಬುದಾರರನ್ನು ಗೌರವಿಸುವ ಮೂಲಕ “ಕಾಯಕವೇ ಕೈಲಾಸ” ವೆಂಬ ಮಂತ್ರ ಪಠಿಸುತ್ತಾ ಬದುಕು ಸಾಗಿಸೋಣ.

ಸಂಗ್ರಹ ಲೇಖನ:
ಸಂತೋಷ್ ಬಿದರಗಡ್ಡೆ
ಶಿಕ್ಷಕ ಸಾಹಿತಿಗಳು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾನಗಲ್ಲ, ಹಾವೇರಿ.

Share and Enjoy !

Shares