ಇಡಪನೂರ ಗ್ರಾಮದಲ್ಲಿ ಭಾರೀ ಮಳೆ ಜನಜೀವನ ಅಸ್ತವ್ಯಸ್ತ

Share and Enjoy !

Shares
Listen to this article

ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಇಡಪನೂರು ಗ್ರಾಮದಲ್ಲಿ ಜೋರಾಗಿ ಮಳೆ ಬಂದು ಗ್ರಾಮದ ಒಳಗೆ ನೀರು ಬಂದು ಇಲ್ಲಿನ ಜನರು ಮತ್ತು ಮನೆಗಳ ಒಳಗೆ ನೀರು ನಿಂತು ಮನೆಗಳು ಬಿದ್ದು ಹೋಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.ಮಳೆ ನೀರು ಮನೆಗೆ ಹೊಕ್ಕು ಜನ ಜಾನುವಾರುಗಳು ಹೊಬರಲು ಪರದಾಡಿದವು ಜನಗಳಿಗೆ ರಾತ್ರಿ ಸಮಯದಲ್ಲಿ ಏನಾಗಿದೆ ಏನು ನಷ್ಟ ಆಗಿದೆ ಎಂಬ ಇನ್ನೂ ತಿಳಿದುಬಂದಿಲ್ಲ ಅಲ್ಲಿನ ಜನರು ತುಂಬಾ ತೊಂದರೆ ಇದೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿರುವುದಿಲ್ಲ ಮತ್ತು ಕಷ್ಟ ಸುಖ ಕೇಳುವರು ಇಲ್ಲದೆ ಅಲ್ಲಿನ ಜನರು ಗೋಳಾಟ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡದೆ ಇರೊದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಗಿದೆ.
ಇಡಪನೂರು ಗ್ರಾಮದ ಕಂದಾಯ ಇಲಾಖೆ ಗ್ರಾಮ ಸಹಾಯಕ ವೈ ರಮೇಶ್ ನಾಯಕ್ ಹಾಗೂ ರಂಗಪ್ಪನಾಯಕ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾಒಬ್ಬ ಅದಿಕಾರಿಗಳು ಇತ್ತ ಗಮನಹರಿಸುತ್ತಿಲ್ಲವೆಂದು ಗ್ರಾಮಸ್ತರು ಆಕ್ರೊಶ ವ್ಯಕ್ತ ಪಡಿಸಿತ್ತಿದ್ದಾರೆ.

Share and Enjoy !

Shares