ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರ ಬಳಕೆ:ಹಣ ದುರುಪಯೋಗದ ಆರೋಪ

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು ತಾಲ್ಲೂಕಿನ ಮುದುಗಲ್ ಪಟ್ಟಣ ಸಮೀಪ ಸಜ್ಜಲಗುಡ್ಡ ಗ್ರಾಮಕೂಲಿ ಕಾರ್ಮಿಕರಿಗೆ ಮಹಾತ್ಮಗಾಂಧಿ ರಾಷ್ಟಿಯ ಉದ್ಯೋಗಖಾತ್ರಿ ಯೋಜನೆಅಡಿ ಕೆಲಸ ನೀಡಬೇಕಾದ ಅಧಿಕಾರಿಗಳೆ ಜೆಸಿಬಿ ಯಂತ್ರದ ಮೂಲಕ ಕೆಲಸ ನಿರ್ವಹಿಸಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಪ್ರಕರಣ ಸಮೀಪದ ಬಯ್ಯಾಪುರು ಗ್ರಾಪಂ.ಯಲ್ಲಿ ಬೆಳಕಿಗೆ ಬಂದಿದೆ. ಬಯ್ಯಾಪುರು ಗ್ರಾಪಂ.ವ್ಯಾಪ್ತಿಯ ಸಜ್ಜಲಗುಡ್ಡದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 2.50 ಲಕ್ಷ ರೂ.ವೆಚ್ಚದಲ್ಲಿ ಖಾತ್ರಿ ಯೋಜನೆ ಅಡಿ ಮಳೆ ನೀರು ಕೊಯಿಲು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ ಕಾಮಗಾರಿ ನಿರ್ಮಾಣಕ್ಕೆ ಕೂಲಿ ಕಾರ್ಮಿಕರನ್ನು ಬಳಸದೆ ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ತೆಗ್ಗು ತೋಡಿ ಸುಮಾರು 46,200 ರೂ. ಬೇನಾಮಿ ಕಾರ್ಮಿಕರ ಹೆಸರಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂಬುದು ಕೂಲಿ ಕಾರ್ಮಿಕರ ಆರೋಪವಾಗಿದೆ.
ಬೇನಾಮಿ ಕಾರ್ಮಿಕರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿ ಕೊಡುವಂತೆ ಅಧಿಕಾರಿಗಳು ದುಂಬಾಲು ಬಿದ್ದಿದ್ದರಿಂದ ಅಧಿಕಾರಿಗಳ ಅಕ್ರಮದ ಸತ್ಯ ಬಯಲಿಗೆ ಬಂದಿದೆ.
ಅಲ್ಲದೆ ಇನ್ನೂ ಕಟ್ಟಡ ನಿಮಾರ್ಣ ಮಾಡದೆ ಅರ್ಧಕ್ಕೆ ಕೆಲಸ ಬಿಡಲಾಗಿದ್ದು ಇನ್ನೂಳಿದ ಹಣವನ್ನು ಲಪಟಾಯಿಸಲು ಮುಂದಗಿದ್ದಾರೆ
ಸ್ಥಳಿಯರ ಆರೋಪವಾಗಿದೆ . ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಹಾರಿಕೆ ಉತ್ತರ ನೀಡುತಿದ್ದಾರೆ ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘ (ಗ್ರಾಕೂಸ್)ದ ಕಾರ್ಮಿಕರಾದ ಹನುಮಂತ, ಬಸವರಾಜ ಮುದಗಲ್.ಶರಣಬಸವ, ಕನಕಪ್ಪ, ನೂರಂದಪ್ಪ ಗುರಿಕಾರ, ಆದಪ್ಪ ಇಲಕಲ್ ಆರೋಪಿಸಿದ್ದಾರೆ.
(ಜಿಲ್ಲಾ ಮಟ್ಟದ ಅಧಿಕಾರಿಗಳ ಸೂಚನೆಯಂತೆ ಶಾಲಾ ಮತ್ತು ಸಮುದಾಯ ಭವನ ಕಟ್ಟಡಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಮಳೆ ನೀರು ಕೊಯಿಲು ಕಾಮಗಾರಿ ಮಾಡಲು ಮುಂದಾಗಿದೆ.
ಆದರೆ ಬಯ್ಯಾಪುರು ಗ್ರಾಪಂ.ವ್ಯಾಪ್ತಿಯ ಸಜ್ಜಲಗುಡ್ಡದಲ್ಲಿ ಜೆಸಿಬಿ ಯಂತ್ರದ ಮೂಲಕ ಮಾಡಿಸಿರುವದು ತಪ್ಪು.ಈ ಬಗ್ಗೆ ಪರಿಶಿಲಿಸಿ ಕ್ರಮ ಕೈಗೊಳ್ಳಲಾಗುವದು.ಸೋಮನಗೌಡ ಉದ್ಯೋಗ ಖಾತ್ರಿ ತಾಲೂಕ ಸಹಾಯಕ ನಿರ್ದೇಶಕರು ಲಿಂಗಸುಗೂರು.
ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೆ ಗ್ರಾಪಂ.ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಮಳೆ ನೀರು ಕೊಯಿಲು ಕಾಮಗಾರಿ ಮಾಡಿ ಲಕ್ಷಾಂತರ ಹಣ ಲಪಟಾಯಿಸಲು ಮುಂದಾಗಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ದಾಖಲೆ ಸಮೇತ ತಾಲೂಕ ಪಂಚಾಯತಿ ಮುಂದೆ ಧರಣಿ ನಡೆಸಲಾಗುವದು.-ಬಸವರಾಜ ಮುದಗಲ್ ಗ್ರಾಮೀಣ ಕೂಲಿ ಕಾರ್ಮಿಕರ ಸಂಘ (ಗ್ರಾಕೂಸ್) ಸಂಚಾಲಕ.
ಮುದಗಲ್ ಸಮೀಪದ ಸಜ್ಜಲಗುಡ್ಡದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಜೆಸಿಬಿ ಯಂತ್ರದ ಮೂಲಕ ತೆಗ್ಗು ತೋಡಿ ಕಾಮಗಾರಿ ಅರ್ಧಕ್ಕೆ ಬಿಟ್ಟಿರುವದು. ಈ ಸಂದರ್ಭ ಗ್ರಾಮಸ್ಥರಾದ ಈರಪ್ಪ ಕೆಲ್ಲೂರು,ದೊಡ್ಡಪ್ಪ ರೇವಡಿಹಾಳ, ಮುತ್ತಣ್ಣ ಗುರಿಕಾರ, ವೀರಭದ್ರಪ್ಪ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಶುಕ್ರವಾರ ಪ್ರತಿಭಟಿಸಿದರು.

Share and Enjoy !

Shares