ಅಮೃತ್ ಯೋಜನೆ ಕಳಪೆ : ಸಿರಾಜ್ ಅಹ್ಮದ್ ಜಾಫ್ರೀ-ಆರೋಪ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ರಾಯಚೂರು: ಅಮೃತ್ ಯೋಜನಡಿಯಲ್ಲಿ ನಗರಕ್ಕೆ 24×7 ಕುಡಿಯುವ ನೀರಿನ ಸರಬರಾಜಗಾಗಿ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡಿ 3 ವರ್ಷ ಕಳೆದರು, ಕಾಮಗಾರಿಯು ಇನ್ನು ಪೂರ್ಣಗೊಂಡಿಲ್ಲದ ಕಾರಣ ಇವರ ವಿರುದ್ಧ ಡಿಆರ್‌ಎಸ್‌ ಇನ್‌ಫ್ರಾಟಿಕ್ ಕಂಪನಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಯಚೂರು ನವ ನಿರ್ಮಾಣ ಸಂಘದ ಮುಖಂಡ ಸಿರಾಜ್ ಅಹ್ಮದ್ ಜಾಫ್ರೀ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಗರದಲ್ಲಿ 24×7 ಕುಡಿಯುವ ನೀರಿನ ಸರಬರಾಜಗಾಗಿ ಕರ್ನಾಟಕ ನಗರ ನೀರು ಸರಬರಾಜ ಮತ್ತು ಒಳಚರಂಡಿ ನಿಗಮವು ಅಮೃತ್ ಯೋಜನಡಿಯಲ್ಲಿ 2017 ರ ಡಿ.20 ರಂದು ಹೈದ್ರಾಬಾದ್ ಮೂಲದ ಡಿಆರ್‌ಎಸ್‌ ಇನ್‌ಫ್ರಾಟಿಕ್ ಕಂಪನಿಗೆ 54 ಲಕ್ಷದ 2599 ಕೋ.ರೂ ಅನುದಾನವನ್ನು ಟೆಂಡರ್ ಮೂಲಕ ನೀಡಲಾಗಿತ್ತು. ಆದರೆ ಸದರಿ ಕಂಪನಿಯವರು ಬಳ್ಳಾರಿಯ ಅಖಿಲ ಇನ್‌ಫ್ರಾ ಕಂಪನಿಗೆ ನೀಡಲಾಗುತ್ತದೆ.
ಈ ಕಾಮಗಾರಿಯಲ್ಲಿ 13 ನೀರಿನ ಟ್ಯಾಂಕ್‌ ನಿರ್ಮಾಣ, ಒಂದು ಭೂ ಮಟ್ಟದ ಸೇವಾ ನೀರು ಸಂಗ್ರಹಣ ಕೆರೆ ನಿರ್ಮಿಸುವುದು, 31 ಕಿ.ಮೀ ನೀರಿನ ಪೈಪ್ ಅಳವಡಿಸುವುದು, ನಗರದ 18 ನೀರಿನ ಅಳಿ ದುರಸ್ತಿ ಮಾಡಿಸುವುದು. 10 ಎಂಎಲ್‌ಡಿಯ ಚಿಕ್ಕಸೂಗೂರಿನಲ್ಲಿ ನೀರು ಶುದ್ಧೀಕರಣ ಟ್ಯಾಂಕ್‌ನ್ನು 22 ಸಾವಿರದ 500 ಮನೆಗಳಿಗೆ ನೀರಿನ ಸಂಪರ್ಕ ನೀಡಲು 2019 ಡಿಸೆಂಬರ್ ರೊಳಗೆ ಪೂರ್ಣಗೊಳಿಸಬೇಕು. ಆದರೆ ಅವಧಿಯನ್ನು ವಿಸ್ತರಿಸಿ ಮಾರ್ಚ್ 2020 ಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.
ನಗರಕ್ಕೆ ನಿರಂತರ ಕುಡಿಯುವ ನೀರಿನ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ. ನಗರದ ಬಹುದೊಡ್ಡ ಯೋಜನೆ ಒಂದನ್ನು ಖಾಸಗಿ ಕಂಪನಿಗಳು ಸಂಪೂರ್ಣ ಹಾಳು ಮಾಡಿವೆ. ಇದನ್ನು ನಿರ್ವಹಣೆ ಮಾಡಬೇಕಾಗಿದ್ದ ಕರ್ನಾಟಕ ನಗರ ನೀರು ಸರಬರಾಜ ಮತ್ತು ಒಳಚರಂಡಿ ನಿಗಮದ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ಮಾಡಿರುವ ಕಂಪನಿಯ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.
ಅಧಿಕಾರಿಗಳು ಮತ್ತು ಉಪ ಗುತ್ತಿಗೆದಾರರು ಸೇರಿ ನಗರದ ಜನತೆಗೆ ಮತ್ತು ಸರ್ಕಾರಕ್ಕೆ ಈ ಯೋಜನೆಯನ್ನು ನಿರುಪಯುಕ್ತ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಗರ ನೀರು ಸರಬರಾಜ ಮತ್ತು ಒಳಚರಂಡಿ ನಿಗಮದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸದರು ಯಾವುದೇ ಕ್ರಮಕೈಗೊಂಡಿಲ್ಲ. ಆದಕಾರಣ ಇದಕ್ಕೆ ಸಂಬಂಧಪಟ್ಟ ಡಿಆರ್‌ಎಸ್‌ ಇನ್‌ಫ್ರಾಟಿಕ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿ.ಗೋವಿಂದ ರೆಡ್ಡಿ, ನರಸಿಂಗಪ್ಪ, ತಾಹೇರ್ ಪಾಷಾ, ಖಾಜಾ, ಮುಹೀವುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares