ತುರುವಿಹಾಳ ಪೋಲಿಸರಿಂದ ಗಾಂಜ ಮಾರುತ್ತಿದ್ದ ವ್ಯಕ್ತಿಯ ಬಂದನ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ

 

ಸಿಂಧನೂರು:ಮಿಂಚಿನ ಕಾರ್ಯಚರಣೆ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನಕರ್ನಾಟಕ ರಾಜ್ಯಾದ್ಯಂತ ತಲ್ಲಣಗೊಳಿಸಿರುವ ಮಾದಕ ದ್ರವ್ಯ ಪ್ರಕರಣವು ಮಾಸುವ ಮುನ್ನವೇ. ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ತುರುವಿಹಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಸ್ಕಿ ತಾಲುಕಿನ ಗದ್ರಟಿಗಿ ಗ್ರಾಮದಲ್ಲಿ ಗಂಗಣ್ಣ ತಂದೆ ಸೋಮಣ್ಣ (60) ವರ್ಷ ತನ್ನ ಮನೆಯ ಹಿತ್ತಲಿನಲ್ಲಿ ಬೆಳೆದ 4 ಗಾಂಜಾ ಗಿಡಗಳನ್ನು ಪಂಚರು ಮಾಡಿ ಒಟ್ಟು 2- ಕೆ.ಜಿ.600 ಗ್ರಾಂ ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲೆ ಮಾಡಲಾಗಿದೆ.ಸದರಿ ಕಾರ್ಯಾಚರಣೆಯಲ್ಲಿ ಎಸ್.ಪಿ. ಶ್ರೀ ನಿಕ್ಕಮ್ ಪ್ರಕಾಶ ಅಮ್ರಿತ್. ಹೆಚ್ಚುವರಿ ಎಸ್.ಪಿ.ಹರಿಬಾಬು. ಡಿ.ವೈ.ಎಸ್.ಪಿ. ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಸಿ.ಪಿ.ಐ ಬಾಲಚಂದ್ರ ಲಕ್ಕಂ ಹಾಗೂ ತುರುವಿಹಾಳ ಪೋಲಿಸ್ ಠಾಣೆಯ ಪಿ.ಎಸ್. ಐ ಎರಿಯಪ್ಪ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎ.ಎಸ್. ಐ ಹನುಮಂತ. ಹುಲುಗಪ್ಪ.ಹೆಚ್.ಸಿ.ತಿಪ್ಪಣ್ಣ. ಗೋಪಾಲ ರವರನ್ನೊಳಗೊಂಡಿರುವ ತಂಡವನ್ನು ರಚಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಚರಣೆಗೆ ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Share and Enjoy !

Shares