ನಾಲೆ ಬಿಟ್ಟು ದಾರಿಗೆ ಹರಿಯುವ ನೀರು, ಉಪಕಾಲುವೆ ರಿಪೇರಿ ಮಾಡುವವರು ಯಾರು?

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸಗೂರು:ರಾಂಪೂರ ಏತನೀರಾವರಿಯ ಮುಖ್ಯನಾಲೆ ಉಪಕಾಲುವೆಗಳು ಕಾಮಗಾರಿಯು ಸರಿಯಾಗಿ ನಡೆದಿಲ್ಲವೆಂದು ಮೊದಲಿನಿಂದಲೂ ರೈತರು ಆರೋಪಿಸುತ್ತಾ ಬಂದಿದ್ದಾರೆ ಕೆಲವೆಡೆ ಉಪಕಾಲುವೆಗಳು ಯಾವೊ ಹಳ್ಳಯಾವುದೊ ಎನ್ನುವಂತಾಗಿರುವ ದೃಶ್ಯಗಳಿಗೇನು ಕಡಿಮೆಯಿಲ್ಲ ಆದರು ನೀರಾವರಿ ಅಧಿಕಾರಿಗಳು ಮಾತ್ರ ಇದಾವುದಕ್ಕೂ ತಲೆಹಾಕದೆ ಕೇವಲ ಬಿಲ್ ಬರೆಯುವುದರಲ್ಲೆ ಬಿಜಿಯಾದಂತೆ ಕಂಡು ಬರುತ್ತಾರೆ
ಇದಕ್ಕೆ ತಾಜಾ ಉದಾಹರಣೆ ತಾಲೂಕಿನ ಐದನಾಳ ಸೀಮಾದಲ್ಲಿರುವ ಮೈನಸ್-೨ ಉಪಕಾಲುವೆ ಇದು ಸೀಮಿ ಈರಣ್ಣ ಭಾಗದಿಂದ ಹೆದ್ದರಿಯನ್ನು ಹಾಯ್ದು ಐದನಾಳ ಕಡೆಗೆ ಸಾಗುವ ಸದರಿ ಉಪಕಾಲುವೆಯು ರಿಪೇರಿ ಕಾಣದೆ ತನ್ನಲ್ಲಿ ಕಲ್ಲು ಮಣ್ಣುಗಳನ್ನು ತುಂಬಿಕೊಂಡು ಹರಿದು ಬರುತ್ತಿರುವ ನೀರು ನಾಲೆಯಲ್ಲಿ ಹರಿದಯದೆ ದಾರಿಯಲ್ಲಿ ಹರಿದು ಹೋಗುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ ಅಪ್ಪಿ ತಪ್ಪಿ ಹೊಸಬರು ನೋಡಿದರೆ ದಾರಿಯಲ್ಲಿ ನಾಲೆಯೋ ನಾಲೆಯಲ್ಲಿ ದಾರಿಯೊ ಎಂಬ ಗೊಂದಲಕ್ಕೆ ಸಿಲುಕುತ್ತಾರೆ ಹಾಗೆ ನಾಲೆಯಲ್ಲಿ ಹರಿಯಬೇಕಾದ ನೀರು ದಾರಿಯಲ್ಲಿ ಹರಿದು ಹೋಗುತ್ತಿದ್ದರು ಇದು ನೀರಾವರಿ ಅಧಿಕಾರಿಗಳ ಗಮನಕ್ಕೆ ಬಮದಂತೆ ತೋರುವುದಿಲ್ಲವಾಗಿದೆ
ಈ ಹಿಂದೆ ಇದೆ ಭಾಗದಲ್ಲಿರುವ ಹಲವಾರು ಉಪಕಾಲುವೆಗಳಿಗೆ ಹಳ್ಳದ ನೀರು ಹರಿದುಬಂದು ನಾಲೆಗಳೆಲ್ಲ ಮುಚ್ಚಿಹೋಗಿದ್ದವು ಅಂತಹ ನಾಲೆ ನಿರ್ಮಾಣದಲ್ಲಿ ಇವರು ಬಲು ನಿಪುಣರೇ ಇರಬೇಕು ಎನಿಸುತ್ತದೆ
ಸದರಿ ನಾಲೆಗೆ ಸುಮಾರು ಎಪ್ಪತ್ತು ಎಂಬತ್ತು ರೈತರ ಹೊಲಗಳು ಬರುತ್ತಿದ್ದು ಹಲವಾರು ಎಕರೆಹೊಲಗಳಿಗೆ ನೀರುಹರಿಯಬೇಕಾಗಿದೆ ಆದರೆ ನಾಲೆಯಲ್ಲಿ ಕಲ್ಲುಮಣ್ಣು ತುಂಬಿದ್ದು ನೀರು ಹರಿಯದಂತಾಗಿದೆ ನಾಲೆಯ ರಿಪೇರಿಗಾಗಿ ನೀರಾವರಿ ಇಲಾಖೆಯವರು ಕಾಳಾಪೂರ ಗ್ರಾಮಪಂಚಾಯಿತಿಗೆ ಪತ್ರ ಬರೆಯಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಆದರೆ ಗ್ರಾಮಪಂಚಾಯಿತಿಯವರು ದುರಸ್ಥಿ ಮಾಡಿರುವುದಿಲ್ಲ ಇತ್ತ ನೀರಾವರಿ ಇಲಾಖೆಯವರು ಮೌನವಾಗಿದ್ದು ವ್ಯಾಪ್ತಿಯ ರೈತರು ಮಾತ್ರ ತೊಂದರೆಯಾಗುವುದು ನಿಶ್ಚಿತ ಆದರೆ ಸದ್ಯ ಮಳೆ ಬರುತ್ತಿದ್ದು ಈಗ ರೈತರಿಗೆ ನೀರಿನ ಅವಶ್ಯಕತೆ ಕಂಡು ಬಂದಿಲ್ಲ ನಂತರ ದಿನಗಳಲ್ಲಿ ಸಮಸ್ಯೆಯಾಗುವುದು ಖಂಡಿತ ಹಾಗಾಗುವ ಮುನ್ನ ಇಲಾಖೆ ಎಚ್ಚೆತ್ತುಕೊಂಡು ರಿಪೇರಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬಹುದೆ ಕಾದು ನೋಡಬೇಕು
ಹೇಳಿಕೆ:ಸದರಿ ನಾಲೆಗೆ ಅಧಿಕೃತವಾಗಿ ನೀರು ಹರಿಸಲಾಗುತ್ತಿಲ್ಲ ನಾಲೆಯನ್ನು ಬಂದ್ ಮಾಡಲಾಗಿದೆ ರೈತರೆ ನಿಯಮಬಾಹಿರವಾಗಿ ನೀರು ಹರಿಸಿಕೊಳ್ಳುತ್ತಿದ್ದಾರೆ ರಿಪೇರಿಗಾಗಿ ಸಂಬAದಿಸಿದ ಗ್ರಾಮಪಂಚಾಯಿತಿಗೆ ಪತ್ರ ಬರೆಯಲಾಗಿದೆ ರಿಪೇರಿ ಮಾಡುತ್ತೇವೆ ಎನ್ನುತ್ತಿದ್ದಾರೆ ನಮಗೆ ರಿಪೇರಿ ಮಾಡಲು ಕಡಿಮೆ ಹಣ ಬರುತ್ತಿದೆ ಯಾವುದಕ್ಕೂ ಸಾಲುವುದಿಲ್ಲವಾಗಿದೆ ರಿಪೇರಿ ಮಾಡಿಸಿಕೊಡಲಾಗುವುದು -ನಾಗೇಶ ಜೆಇ ರಾಂಪೂರ ಏತ ನೀರಾವರಿ ಇಲಾಖೆ ರೋಡಲಬಂಡಾ

Share and Enjoy !

Shares