ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು: ಭೂ ಸುಧಾರಣೆ ಕಾಯ್ದೆ ಮತ್ತು ಎ.ಪಿ.ಎಂ.ಸಿ , ಕಾಯ್ದೆ ತಿದ್ದುಪಡಿ ಮಾಡುವುದಕ್ಕೆ ಲಿಂಗಸಗೂರು ದಿಂದ ಸಾವಿರಾರು ರೈತರು ಲಿಂಗಸಗೂರು ಪಟ್ಟಣದ ಕ್ರಾಸ್ ದಿಂದ ಬಸ್ ಡಿಪೋದ ವರೆಗೆ ರೈತರು ಪಾದಯಾತ್ರೆ ಮಾಡುವ ಮೂಲಕ ಸರಕಾರಕ್ಕೆ ಭೂ ಸುಧಾರಣೆ ಕಾಯ್ದೆ ಮತ್ತು ಎ.ಪಿ.ಎಂ.ಸಿ , ಕಾಯ್ದೆ ಹಿಂಪಡೆಯಬೇಕೆAದು ಜಿಲ್ಲಾ ಉಪ್ಪಾಧ್ಯಕ್ಷರು ಮತ್ತು ತಾಲೂಕಾ ಅಧ್ಯಕ್ಷರ ನೇತೃತ್ವದಲ್ಲಿ ಈ ಮೂಲಕ ಘೋಷಣೆಗಳನ್ನು ಕೂಗುತ್ತಾ ಹೋರಾಟ ಮಾಡಲಾಗುತ್ತದೆ . ರಾಂಪೂರ ತಾಂಡಾ , ಗೊಲೇಬಾಳ , ಕಬಾಲಿಂಗಸಗೂರು , ಹಿರೇಹಸರೂರು , ಚಿಕ್ಕಹೆಸರೂರು ನಿಲೋಗಲ್ ತುಪ್ಪದೂರು , ಹಾಲಾಪೂರ ಗ್ರಾಮದ ರೈತರು ಬೆಂಗಳೂರಿಗೆ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ಹೋಗುತ್ತೇವೆಂದು ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕಾ ಘಟಕ ಲಿಂಗಸಗೂರು ಒತ್ತಾಯಿಸುತ್ತದೆ
ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ ಕೃಷ್ಣಪ್ಪ ಗ್ರಾಮ ಘಟಕದ ಅಧ್ಯಕ್ಷರು ಜಿಲ್ಲಾ ಉಪಾಧ್ಯಕ್ಷರು ರಾಂಪೂರ ತಾಂಡಾ ವೀರಭದ್ರಪ್ಪಗೌಡ ಹಳ್ಳಿ ತಾಲೂಕಾ ಗೌರವಾಧ್ಯಕ್ಷರು ರಾಯಚೂರು ತಾಂಡಾ ವೀರೇಶ ಚಿಕ್ಕಹೆಸರೂರು ಅಮರೇಶ ಗೊರೇಬಾಳೆ ಇತರರು ಇದ್ದರು.