ವಿವಿಧ ಬೇಡಿಕೆ ಈಡೇರಿಕೆಗೆ: ಗ್ರಾ.ಪಂ ನೌಕರರ ಆಗ್ರಹ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ರಾಯಚೂರು.ಸೆ.21- ಗ್ರಾಮ ಪಂಚಾಯತಿಗಳಲ್ಲಿ 10 ವರ್ಷಗಳ ಕಾಲ ಪೂರ್ಣ ಸೇವೆ ಸಲ್ಲಿಸಿದ ಕರ ವಸೂಲಿಗಾರರ ಜೇಷ್ಠತ ಪಟ್ಟಿ ಪ್ರಕಟ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಹಾಗೂ ಸಿಐಟಿಯು ಸಂಯೋಜಿತದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಬಿಲ್ ಕಲೆಕ್ಟರ್, ಗುಮಾಸ್ತ, ಕಂಪ್ಯೂಟರ ಆಪರೇಟರಗಳಿಗೆ 14115, ಸಾವಿರ ರೂ, ಪಂಪ್ ಆಪರೇಟರಗಳಿಗೆ 12281.20 ಸಾವಿರ ರೂ, ಸಿಪಾಯಿ ಜವಾನ 11703.20 ಸಾವಿರ ವರೆಗೆ ಮತ್ತು ಸ್ವಚ್ಚತಾಗಗರಿಗೆ 14563.20 ಸಾವಿರ ವೇತನ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಬಾಕಿ ವೇತನವನ್ನು ತೆರಿಗೆ ಸಂಗ್ರಹದಲ್ಲಿ ಮತ್ತು 14 ನೇ ಹಾಗೂ 15 ನೇ ಹಣಕಾಸು ಆಯೋಗದ ಹಣದಲ್ಲಿ ಬಾಕಿ ಉಳಿದ ಸಿಬ್ಬಂದಿ ವೇತನ ಪಾವತಿಸುವಂತಾಗಬೇಕು ಹಾಗೂ ನಿವೃತ್ತಿಯಾದವರಿಗೆ 15 ತಿಂಗಳು ಗ್ರಾಚೂಟಿ ಕೊಡಬೇಕೆಂದು ಆಗ್ರಹಿಸಿದರು.
ಈ.ಎಫ್.ಎಮ್.ಎಸ್ ಬಾಕಿ ಉಳಿದ ಕಸಗೂಡಿಸುವ ಮತ್ತು ಪಂಪ್ ಆಪರೇಟರ್ ಹಾಗೂ ಇತರೆ ಸಿಬ್ಬಂದಿಗಳನ್ನು ಸರಕಾರದ ಆದೇಶದಂತೆ ಸೇರ್ಪಡೆ ಮಾಡಬೇಕು. 2019ರಲ್ಲಿ ನೀಡಿದ ಆದೇಶದಂತೆ ಎಲ್ಲಾ ಸಿಬ್ಬಂದಿಗಳನ್ನು ಅನುಮೋದನೆ ಮಾಡಬೇಕು ಮತ್ತು ಸೇವಾ ಪುಸ್ತಕ ತೆರೆಯಬೇಕು, ಪಂಪ್ ಆಪರೇಟರಗಳಿಂದ ಕರವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕೆಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸರಕಾರದ ಆದೇಶದಂತೆ ಅನುಕಂಪದ ನೇಮಕಾತಿ ಮಾಡಲು ನಿರ್ದೇಶನ ನೀಡಬೇಕು ಹೊಸದಾಗಿ ಕಾನೂನು ಬಾಹಿರವಾಗಿ ಅಕ್ರಮ ನೇಮಕಾತಿ ಮಾಡಿಕೊಳ್ಳುವುದನ್ನು ತಡೆಯಬೇಕು,
ಬಿಲ್‌ಕಲೆಕ್ಟರ್ ರಿಂದ ಗ್ರೇಡ್ -2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು ಮತ್ತು ಸರಕಾರಿ ಆದೇಶಗಳನ್ನು ಜಾರಿ ಮಾಡಿದ ಪಿ.ಡಿ.ಓ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆ.ನಾರಾಯಣ, ಆರ್ ಎಸ್. ಬಸವರಾಜ, ಅಶೋಕ್, ಮಲ್ಲಿಕಾರ್ಜುನ, ವರಲಕ್ಷ್ಮಿ, ಶರಣಬಸವ ಸೇರಿದಂತೆ ಇತರರು ಇದ್ದರು.

Share and Enjoy !

Shares