ಸಿಯಾತಲಾಬ್ : ಶಾಶ್ವತ ಪರಿಹಾರಕ್ಕೆ ಆಗ್ರಹ

Share and Enjoy !

Shares

 

ವಿಜಯನಗರ ವಾಣಿ
ರಾಯಚೂರು.ಸೆ.21- ಸಿಯಾತಲಾಬ್ ಬಡಾವಣೆಗೆ ಶಾಶ್ವತ ಪರಿಹಾರ ನೀಡದಿದ್ದರೆ ನಗರಸಭೆ ಮುತ್ತಿಗೆ ಹಾಕಲಾಗುತ್ತದೆಂದು
ಸಿಯಾತಲಾಬ್ ಗೆಳೆಯರ ಬಳಗದ ಮುಖಂಡ ಕೆ.ಇ.ಕುಮಾರ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಳೆದ 2 ತಿಂಗಳಿನಿಂದ ಜಿಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಾರ್ಡ್.30 ಮತ್ತು 31 ರ ಸಿಯಾತಲಾಬ್ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಪ್ರತಿ ಭಾರಿ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಮನೆಗಳಿಗೆ ಅಧಿಕಾರಿಗಳು ಬಂದು ತಾತ್ಕಲಿಕವಾಗಿ ಪರಿಹಾರ ಒದಗಿಸಿ ಗಂಜ್ ಕೇಂದ್ರಗಳನ್ನು ಪ್ರಾರಂಭಿಸುತ್ತಾರೆ. ಆದರೆ ಈ ಸಮಸ್ಯೆಯು ಕಳೆದ 20 ವರ್ಷಗಳಿಂದ ಇದೆ.
ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಶಾಸಕರು ಮತ್ತು ನಗರಸಭೆ ಸದಸ್ಯರು ಸಂಪೂರ್ಣ ವಿಫಲರಾಗಿದ್ದಾರೆ. ಬಡಾವಣೆಯಲ್ಲಿ ಬಡವರು, ಕೂಲಿಕಾರರು ವಾಸಿಸುತ್ತಿದ್ದು, ಮನೆಗಳಲ್ಲಿ ನೀರು ನುಗ್ಗಿರುವುದರಿಂದ ತೀವ್ರ ತೊಂದರೆಯಾಗಿದೆ. ನಮಗೆ ದುಡಿಯುವ ಶಕ್ತಿಯಿದೆ ಗಂಜ್ ಕೇಂದ್ರಗಳು ಬೇಕಿಲ್ಲ. ಶಾಸ್ವತ ಪರಿಹಾರ ಬೇಕು. ಸಿಯಾತಲಾಬ್ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದ ಮೂಲ ಕಾರಣವೆಂದರೆ ಸಿಯಾತಲಾಬ್ ಕೆರೆಯನ್ನು ಒತ್ತುವರಿ ಮಾಡಿರುವುದರಿಂದ ಮಳೆ ನೀರೆಲ್ಲ ಮನೆಗಳಿಗೆ ನುಗ್ಗಿತ್ತಿವೆ.
ವಾರ್ಡ್ ನಂ.30,31 ರ ನಗರಸಭೆ ಸದಸ್ಯರ ಪತಿಯಂದಿರು ಇದರಲ್ಲಿ ಮುತುವರ್ಜಿ ವಹಿಸುತ್ತಾರೆ. ಯಾವುದೇ ಸಮಸ್ಯೆ ಇದ್ದರೆ ನಗರಸಭೆ ಸದಸ್ಯರು ಆಗಮಿಸುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಭಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದಕಾರಣ ಕೂಡಲೇ ವಾರ್ಡ್‌ಗಳ ಸದಸ್ಯರ ಪತಿರಾಯರುಗಳ ಅಸ್ತಕ್ಷೇಪವನ್ನು ತಡೆಯಬೇಕು.ಅವರ ಹಿಂಬಾಲಕರ ದೌರ್ಜನ್ಯಕ್ಕೆ ಸೂಕ್ತ ಕ್ರಮ ಕೈಗೊಂಡು ಕೂಡಲೇ ಸಿಯಾತಲಾಬ್ ಬಡಾವಣೆಯ ಜನರಿಗೆ ಶಾಶ್ವತ ಪರಿಹಾರ ಒದಗಿಸಲು 15 ದಿನಗಳ ಕಾಲಾವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ನಗರಸಭೆ ಮುತ್ತಿಗೆಯನ್ನು ಹಾಕಲಾಗುತ್ತದೆಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ವಿನೋದ ರಾಜ್, ನರಸಿಂಹಲು, ಆಂಜಿನೇಯ್ಯ ಬಿ, ವಿಜಯ ಭೀಮಕಾರಿ, ಎಲ್‌.ಬಿ.ಶ್ರೀನಿವಾಸ ಸೇರಿದಂತೆ ಇನ್ನಿತರರು ಉಪಸ್ಥತರಿದ್ದರು.

Share and Enjoy !

Shares