ಕರ್ನಾಟಕ ಪ್ರಾಂತ ರೈತ ಸಂಘಟನೆ(ಕೆಪಿಆರ್ ಎಸ್) ತಾಲೂಕ ಸಮಿತಿ ವತಿಯಿಂದ ಗುರುಭವನದಲ್ಲಿ ಪತ್ರಿಕಾಗೋಷ್ಠಿ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸ್ಗೂರು: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನುಗಳಿಗೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ಸುಗ್ರೀವಾಜ್ಞೆ ವಿರೋಧಿಸಿ ಸೆಪ್ಟೆಂಬರ್ 25 ರಂದು ಅಖಿಲ ಭಾರತ ಮಟ್ಟದಲ್ಲಿ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ 5 ತಾಲೂಕುಗಳಲ್ಲಿ ಬಂದ್ ನಡೆಸಲಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ ಹೇಳಿದರು
ಈ ಬಂದ್ ನಲ್ಲಿ ಕಾರ್ಮಿಕ, ವಿದ್ಯಾರ್ಥಿ, ಯುವಜನ, ದಲಿತ ಸಂಘಟನೆಗಳು ಜಂಟಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಮತ್ತು ಸಾರ್ವಜನಿಕ ಸಂಸ್ಥೆಗಳಾದ ರೈಲ್ವೇ , ಬಿಎಸ್ ಎನ್ ಎಲ್, ವಿಮಾ, ಕ್ಷೇತ್ರಗಳ ಖಾಸಗೀಕರಣ ಕೈಬಿಡಲು ಒತ್ತಾಯಿಸಿ ನಿರಂತರ ಪ್ರತಿಭಟನೆ ಗಳ ಭಾಗವಾಗಿ ಸೆಪ್ಟೆಂಬರ್ 25 ರಂದು ಅಖಿಲ ಭಾರತ ಬಂದ್ ಕರ್ನಾಟಕ ಪ್ರಾಂತ ರೈತ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ, ದಲಿತ ಸಂಘಟನೆಗಳು ಹಾಗೂ ದೇವದಾಸಿ, ಮಹಿಳಾ ಸಂಘಟನೆಗಳ ನ್ನು ಒಳಗೊಂಡು ಕಾಯ್ದೆಗಳಿಗೆ ತಂದಿರುವ ತಿದ್ದಪಡಿ ವಾಪಸ್ ಪಡೆಯುವ ತನಕ ಹೋರಾಟ ಅಚಲ ಎಂದು ಎಚ್ಚರಿಸಿದರು.‌‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿವೆ’ ರೈತರ ಆತ್ಮಹತ್ಯೆಗೆ ಈ ಶಾಸನಗಳು ಕಾರಣವಾಗಲಿವೆ ಎಂದು ಕಿಡಿ ಕಾರಿದರುಈ ಸಂದರ್ಭದಲ್ಲಿ ಕೆಪಿಆರ್ ಎಸ್ ತಾಲೂಕಾಧ್ಯಕ್ಷ ಮಾನಪ್ಪ ಲೆಕ್ಕಿಹಾಳ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಕೆಪಿಆರ್ ಎಸ್ ತಾಲೂಕು ಉಪಾಧ್ಯಕ್ಷ ಆಂಜನೆಯ ನಾಗಲಾಪೂರು, ಹನುಮಂತ ಕಟ್ಟಿಮನಿ ಇದ್ದರು.

Share and Enjoy !

Shares