ವಿಜಯನಗರವಾಣಿ ಸುದ್ದಿ
ರಾಯಚೂರು;ಅಹೋರಾತ್ರಿ ಧಾರಾಕಾರ ಸುರಿದ ಮಳೆಗೆ ನಗರದ ಬಹು ತೇಕ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ . ಕಳೆದ ವಾರ ಸೆ .18 ರಂದು ಶುಕ್ರವಾರ ಮತ್ತು ಶನಿವಾರ ಸುರಿದ ಭಾರೀ ಮಳೆಯಿಂದ ನಗರ ದಲ್ಲಿ ಉಂಟಾಗಿದ್ದ ಅನಾಹುತ ಮತ್ತೆ ನಿನ್ನೆ ಶುಕ್ರವಾರ , ಶನಿವಾರ ಮರುಕಳುಹಿಸಿದೆ ಜನರು ಶುಕ್ರ ಶನಿಕಾಟಕ್ಕೆ ತತ್ತರಿಸಿದ್ದಾರೆ . ನಿನ್ನೆ ರಾತ್ರಿ 11 ಗಂಟೆಯಿಂದ ಆರಂಭಗೊಂಡ ಭಾರೀ ಧಾರಾಕಾರದ ಮಳೆ ಇಂದು ಮುಂದು ವರೆದ ಪರಿಣಾಮ ನಗರದ ಎಲ್ಲಾ ಬಡಾವಣೆ ಗಳು ಜಲಾಮಯವಾಗಿ ಜನ ಆತಂಕಕ್ಕೆ ಗುರಿ ಯಾಗಿದ್ದಾರೆ . ಸ್ಟೇಷನ್, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಳ ರಸ್ತೆಗಳು , ಬಡಾವಣೆ ರಸ್ತೆಗಳು , ರಾಜಕಾಲುವೆ , ಚರಂಡಿಗಳು ಕಾಣದಂತೆ ನೀರು 2 ರಿಂದ 3 ಅಡಿಗಳವರೆಗೂ ಹರಿದು ಸಂಚಾರವೇ ಅಸ್ತವ್ಯಸ್ತಗೊಳಿಸಿದೆ . ನಗರದಲ್ಲಿ ರಾಜಕಾಲುವೆ ಒತ್ತುವರಿ , ಹೂಳು ತೆಗೆಯುವಲ್ಲಿ ನಿರ್ಲಕ್ಷೆ ಮತ್ತು ಮಳೆ ನೀರು ಹರಿದು ಹೋಗಲು ಯೋಜನೆಯ ಕೊರತೆ ನಗರ ಒಂದೇ ವಾರ ದಲ್ಲಿ ಎರಡನೇ ಬಾರಿ ಜಲಾವೃತಗೊಳ್ಳುವಂ ತಹ ಅನಾಹುತಕ್ಕೆ ದಾರಿ ಮಾಡಿದೆ . ಕಳೆದ ವಾರ ಮಳೆ ನೀರಿನಿಂದ ಬಾಧಿತಗೊಂಡ ಜನ ರಿಗೆ ನಗರಸಭೆ , ಜಿಲ್ಲಾಡಳಿತ , ಸರ್ಕಾರದಿಂದ ಬಿಡಿಗಾಸು ಪರಿಹಾರ ಬಾರದೇ , ಸಂಕಷ್ಟದಲ್ಲಿ ರುವವರಿಗೆ ನಿನ್ನೆ ರಾತ್ರಿಯ ಮಳೆ ಜನರನ್ನು ಭಾರೀ ಕಷ್ಟಕ್ಕೆ ನುಗ್ಗಿದೆ . ಮುಂದಿನ 48 ಘಂಟೆಗಳ ಕಾಲ ಇದೇ ರೀತಿ ಮಳೆ ಬರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ನಗರ ದಲ್ಲಿ ಯಾವ ಅನಾಹುತ ಸಂಭವಿಸುತ್ತದೆಂದು ಎಲ್ಲರನ್ನೂ ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ . ನಗರದ ಮೇಲ್ಬಾಗದಲ್ಲಿರುವ ಕೆರೆಗೆ ಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲಿದೆ . ಗದ್ವಾಲ್ ರಸ್ತೆಯಲ್ಲಿರುವ ಕಾಕಿ ಕೆರೆಯ ನೀರು ಜಲಾಲ್ ನಗರ , ಬಾಲಂಕು ಆಸ್ಪತ್ರೆ , ಸಿಯಾತಲಾಬ್ , ಜಹೀರಾಬಾದ್ , ಹರಿಜನವಾಡ , ನವಾಬ್ ಗಡ್ಡ , ಮಡ್ಡಿಪೇಟೆ , ಮಕ್ತಾಲಪೇಟೆ , ಸ್ಟೇಷನ್ ಏರಿಯಾ , ಕುಷ್ಟರೋಗ ಕಾಲೋನಿ ಸೇರಿದಂತೆ ನಗರದ ಎಲ್ಲಾ ಬಡಾವಣೆಗಳು ಜಲಾವೃತ ಗೊಂಡು ಜನ ಅಲ್ಲೋಲ ಕಲ್ಲೋಲಗೊಂಡಿ ದ್ದಾರೆ . ಜನ ವಸತಿ ಪ್ರದೇಶಗಳೊ ಅಥವಾ ಕೆರೆ ಗಳೊ ಎಂದು ತಿಳಿಯದ ಅಯೋಮಯ ಧಾರಾಕಾರದ ಮಳೆ ನಗರದಲ್ಲಿ ಸೃಷ್ಟಿದೆ . ಜಿಲ್ಲಾ ಡಳಿತ , ನಗರಸಭೆ ಸೆ .18 ರಂದು ಸುರಿದ ಮಳೆ ನಂತರ ತ್ವರಿತಗತಿಯಲ್ಲಿ ಪರ್ಯಾಯ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ ನಗರದ ಒಳ ಭಾಗಕ್ಕೆ ನೀರು ಹರಿದು ಬರುವ ಮಾರ್ಗ ಮತ್ತು ಸಂಗ್ರಹಗೊಳ್ಳುವ ನೀರು ಹೊರಗೆ ಹರಿದು ಹೋಗುವಂತೆ ಮಾಡುವ ಪರ್ಯಾಯ ಮಾರ್ಗಗಳ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸದಿರುವುದು ಈ ಎಲ್ಲಾ ಅನಾಹುತಕ್ಕೆ ದಾರಿ ಮಾಡಿದೆ . ಪ್ರತಿ ಮಳೆ ಸಂದರ್ಭದಲ್ಲಿ ಜಲಾವೃತಗೊಳ್ಳುವ ಬಡಾವಣೆ ಗಳು ನಿರ್ದಿಷ್ಟ ಮಾಹಿತಿಯಿದ್ದರೂ , ಇಲ್ಲಿಯ ಜನ ಸುರಕ್ಷಿತವಾಗಿ ಉಳಿ ಯಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳ ವೈಫಲ್ಯ ಜನ ತೀವ್ರ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಿದೆ . ರಾಜಕಾಲುವೆ ಒತ್ತುವರಿ ಮತ್ತು ಹೂಳು ತುಂಬಿದ ಪರಿಣಾಮ ಜನ ವಸತಿ ಪ್ರದೇಶಕ್ಕೆ ನೀರು ನುಗ್ಗಲು ದಾರಿ ಮಾಡಿದೆ . ಫಾರೂಕ್ ಅನ್ವರ್ ಕಂಪನಿಯಿಂದ ಬರುವ ರಾಜ ಕಾಲುವೆ ಅನೇಕ ಕಡ ಬಿದ್ದು ಹೋಗಿದೆ . ಭಾರೀ ಪ್ರಮಾಣದಲ್ಲಿ ಹೂಳು ತುಂಬಿದೆ . ಅಲ್ಲಲ್ಲಿ ಅತಿಕ್ರಮಣಕ್ಕೆ ಗುರಿ ಯಾಗಿದೆ . ಈ ಕಾಲುವೆ ನಿರ್ವಹಣೆ ಮಾಡುವಲ್ಲಿ ನಗರಸಭೆ ಮತ್ತು ಸಂಬಂ ಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸದ ಕಾರಣ ಇಂದು ಸಾವಿರಾರು ಸಂಖ್ಯೆಯಲ್ಲಿ ಜನ ತೊಂದರೆಗೆ ಗುರಿಯಾಗುವಂತಾ ಗಿದೆ . ವರ್ಷಾನುಘಟ್ಟಲೇ ಕೂಡಿಟ್ಟ ಸಾಮಾನು , ಸರಂಜಾಮು , ದವಸ ಧಾನ್ಯ ಮಳೆ ನೀರಿನ ಪಾಲಾಗಿ , ಚರಂಡಿ ನೀರು ಮನೆಗಳಿಗೆ ನುಗ್ಗಿ , ಜನರ ಬದುಕು ಮೂರಾಬಟ್ಟೆಯಾಗುವಂತೆ ಮಾಡಿದೆ . ಮಳೆ ಬಂದಾಗ ನೆಪ ಮಾತ್ರಕ್ಕೆ ಪರಿಹಾರ ಮಾತನಾಡಿ , ಮರೆತು ಹೋಗುವ ಅಧಿಕಾರಿ , ಜನಪ್ರ ತಿನಿಧಿಗಳ ನಿರ್ಲಕ್ಷೆಗೆ ಜನ ಶಿಕ್ಷೆ ಅನುಭವಿಸುವಂತಾಗಿದೆ . ಒಂದೇ ವಾರದಲ್ಲಿ ಎರಡನೇ ಸಲ ಮನೆಗೆ ನೀರು ನುಗ್ಗಿ , ಜನರ ಬದುಕನ್ನೇ ಅಸ್ತವ್ಯಸ್ತಗೊಳಿ ಸಿದೆ . ಇನ್ನಾದರೂ ಜಿಲ್ಲಾಡಳಿತ , ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ , ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸುವಂತಹ ದುಸ್ಥಿತಿ ನಗರದಲ್ಲಿ ನಿರ್ಮಾಣವಾಗಲಿದೆ .