ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಕುಟುಂಬಕ್ಕೆ ದೇಣಿಗೆ ನೀಡಿ ಮಾನವಿಯತೆ ಮೆರೆದ ಛಾಯಾಗ್ರಾಹಕ ಮಿತ್ರರು.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಯಾದಗಿರಿಜಿಲ್ಲೆ:

ಛಾಯಾಗ್ರಾಹಕ ನಿತ್ಯಾನಂದ ಸ್ವಾಮಿ ಯರಗೋಳ ಇವರ ಕುಟುಂಬಕ್ಕೆ 51 ಸಾವಿರ ರೂಪಾಯಿ ದೇಣಿಗೆ ನೀಡಿದ ಛಾಯಾಗ್ರಾಹಕ ಮಿತ್ರರು.ಈ ಸಂದರ್ಭದಲ್ಲಿ ವೀರೇಶ ಹೂಗಾರ್ ಮಾತನಾಡಿ ಯಾದಗಿರಿ ವಲಯ ಛಾಯಾಚಿತ್ರಗ್ರಾಹಕರ ಸಂಘ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮನವಿಯ ಮೇರೆಗೆ ಸಂಘದ ಎಲ್ಲ ಸದಸ್ಯರು ಹಾಗೂ ಲ್ಯಾಬ್ ಮಾಲೀಕರು ಹಾಗೂ ವಲಯದ ಎಲ್ಲ ಮಿತ್ರರು ಸ್ವ-ಇಚ್ಛೆಯಿಂದ ತಮ್ಮ ಕೈಲಾದಷ್ಟು ದೇಣಿಗೆಯನ್ನು ಅಧ್ಯಕ್ಷರ ಮನವಿಯ ಮೇರೆಗೆ ನೀಡಿರುತ್ತೇವೆ. ಈ ಸಂದರ್ಭದಲ್ಲಿ ದೇಣಿಗೆಯನ್ನು ನೀಡಿರುವ ಎಲ್ಲಾ ನನ್ನ ಮಿತ್ರರು ಹಾಗೂ ವಲಯದ ಸದಸ್ಯರು ಮತ್ತು ಲ್ಯಾಬ್ ಮಾಲೀಕರಿಗೆ ವೈಯಕ್ತಿಕವಾಗಿ ಹಾಗೂ ಯಾದಗಿರಿ ವಲಯ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.ನಿರಂತರವಾಗಿ ತಾಯಪ್ಪ ಬೋಮ್ಮನ್ ರವರು ಎಲ್ಲಾ ಛಾಯಾಗ್ರಾಹಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸ್ಪಂದಿಸಿ ನಮ್ಮನ್ನು ಬೆಳಸಿದ್ದಾರೆ. ಅವರ ಸಾಮಾಜಿಕ ಕಾಳಜಿ,ಒಗ್ಗೂಡಿಸುವ ಮನೋಭಾವ ನಮ್ಮೆಲ್ಲರಿಗೂ ಒಳ್ಳೆಯ ವಿಚಾರಗಳಿಗೆ ಕೈಜೋಡಿಸಲು ಆಸಕ್ತಿ ತಂದಿದೆ.ಈ ಒಂದು ಕಾರ್ಯವನ್ನು ಮಾಡಲು ಸೂಚಿಸಿದ ತಾಯಪ್ಪ ಬೋಮ್ಮನ್ ಅಧ್ಯಕ್ಷರ ಕಾರ್ಯ ಮಾದರಿಯಾಗಿದೆ ಎಂದರು.ಈ ವೇಳೆ ದೇಣಿಗೆ ಸ್ವೀಕರಿಸಿ ಮಾತನಾಡಿದ ನಿತ್ಯಾನಂದ ಸ್ವಾಮಿ ಯರಗೋಳ ಮಾತನಾಡುತ್ತಾ ಯಾದಗಿರಿ ವಲಯ ಛಾಯಾಗ್ರಾಹಕನಾದ ನಾನು ಕಷ್ಟದ ಕಾಲದಲ್ಲಿ ಇದ್ದಾಗ ಯಾದಗಿರಿ ವಲಯ ಅಧ್ಯಕ್ಷರಾದ ತಾಯಪ್ಪ ಬೊಮ್ಮನ್ ರವರಿಗೆ ನನ್ನ ಕಷ್ಟವನ್ನು ಹೇಳಿಕೊಂಡೆ. ತಕ್ಷಣವೇ ಪದಾಧಿಕಾರಿಗಳಿಗೆ ಹಾಗೂ ಸದಸ್ಯರ ಜೊತೆ ಚರ್ಚಿಸಿ ಎಲ್ಲರೂ ಕೈ ಜೋಡಿಸೋಣ ಎಂದು ಮನವಿ ಮಾಡಿಕೊಂಡರು. ತಕ್ಷಣನೇ 51,000 ರೂ ಎಲ್ಲಾ ಛಾಯಾಗ್ರಾಹಕರು ಸಹಾಯ ರೂಪದಲ್ಲಿ ದೇಣಿಗೆ ನೀಡಿದ್ದಾರೆ.

ಯಾದಗಿರಿ ವಲಯ ಛಾಯಾಗ್ರಾಹಕ ಸಂಘದ ವತಿಯಿಂದ ದೇಣಿಗೆ ನೀಡಿದ ಛಾಯಾಗ್ರಾಹಕ ಮಿತ್ರರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾತನಾಡುತ್ತಾ ಭಾವುಕರಾದ ಅವರು ನಿಮ್ಮ ಈ ಪ್ರೀತಿ , ವಿಶ್ವಾಸ , ಕಷ್ಟಕ್ಕೆ ಸ್ಪಂದಿಸೋ ಸ್ನೇಹಿತರು ಇರುವುದಕ್ಕೆ ಬಹಳ ಸಂತೋಷವಾಗುತ್ತದೆ.ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನೆಗಳು. ನಿಮ್ಮ ಋಣವನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು.
ದೇಣಿಗೆ ಪಡೆದ ನಿತ್ಯಾನಂದ ಸ್ವಾಮಿಯವರ ತಂದೆ -ತಾಯಿ ಭಾವುಕರಾಗಿ ಕಣ್ಣೀರು ಸುರಿಸಿದರು. ನಿತ್ಯಾನಂದ ಒಬ್ಬನೆ ನಮಗೆ ಮಗನಲ್ಲ ಎಲ್ಲಾ ಛಾಯಾಗ್ರಾಹಕರು ನಮ್ಮ ಮಕ್ಕಳೆಂದು ಹೇಳಿದರು. ಮತ್ತು ನಿಮ್ಮ ಸಂಘಟನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ತಾಯಪ್ಪ ಬೊಮ್ಮಣ್ ಬಳಿಚಕ್ರ ಮತ್ತು ನಿತ್ಯಾನಂದ ಸ್ವಾಮಿ ಯರಗೋಳ ಅವರ ಕುಟುಂಬಸ್ಥರು ಹಾಗೂ ಛಾಯಾಗ್ರಾಹಕ ಸ್ನೇಹಿತರ ಬಳಗ ಉಪಸ್ಥಿತರಿದ್ದರು.

ವರದಿ: ಬೀರಲಿಂಗಪ್ಪ. ಕಿಲ್ಲನಕೆರಾ

Share and Enjoy !

Shares