ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ:
ಕೊಟ್ಟೂರು: ಸರ್ಕಾರದ ಕೃಷಿ ವಿದೇಯಕಗಳಾದ ಎಪಿಎಂಸಿ ಮತ್ತು ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳ ವಿರುದ್ಧ ನಿಗದಿಯಾಗಿದ್ದ ಬಂದ್ ಗೆ ಪಟ್ಟಣದಲ್ಲಿ ತಾತ್ವಿಕ ಸ್ಪಂದನೆ ವ್ಯಕ್ತವಾಯಿತು .ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಜಮಾವಣೆಗೊಂಡ ಕರ್ನಾಟಕ ಹಸಿರು ಸೇನೆ ಮತ್ತು ರೈತ ಸಂಘದ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾಯ್ದೆ ಗಳು ರೈತರಿಗೆ ಮಾರಕವಾಗಿವೆ .ಅವುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ತಾಲ್ಲೂಕು ರೈತ ಸಂಘದ ಬರ್ಮಣ್ಣ ಒತ್ತಾಯಿಸಿದರು .ನಂತರ ಕಾಲ್ನಡಿಗೆ ಮೂಲಕ ತೆರಳಿ ತಹಸೀಲ್ದಾರ್ ಕಚೇರಿಯ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು .ಜೆಡಿಎಸ್ ನ ವಿ.ತಿಪ್ಪೇಸ್ವಾಮಿ,ರೈತ ಸಂಘದ ಕಾರ್ಯದರ್ಶಿಗಳಾದ ಜಯಪ್ರಕಾಶ್ ನಾಯ್ಕ್ ಚಪ್ಪರದ ಹಳ್ಳಿ ಕೊಟ್ರೇಶ್ ,ಮರುಳಸಿದ್ದಪ್ಪ ಕೊಟ್ರಯ್ಯ ಹಾಗು ಸುತ್ತ ಮುತ್ತ ಗ್ರಾಮಘಟಕದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು .ಇದಕ್ಕೂ ಮುಂಚೆ ನಡೆದ ಶಾಂತಿಯುತ ಪ್ರತಿಭಟನೆಗೆ ಪಟ್ಟಣದಲ್ಲಿ ಎಂದಿನಂತೆ ಬಸ್ ಸಂಚಾರವಿತ್ತು ಅಂಗಡಿ ಮುಂಗಟ್ಟು ಗಳು ಹಾಗು ಹೋಟೆಲ್ ಗಳು ತೆರೆದಿದ್ದವು.ಎಲ್ಲಾ ಸಾರ್ವಜನಿಕ ಬ್ಯಾಂಕ್ ಗಳು ಸಹ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದವು .ಸಿಪಿಐ ದೊಡ್ಡಪ್ಪ ಹಾಗು ಪಿಎಸ್ಐ ನಾಗಪ್ಪ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.