ವಿಜಯನಗರ ವಾಣಿ
ರಾಯಚೂರು ಜಿಲ್ಲೆ
ದೇವದುರ್ಗ ತಾಲ್ಲೂಕು ಗಬ್ಬೂರು ಸಮೀಪದ ಗೂಗಲ್ ಸುಂಕೇಶ್ವರಹಾಳ ರಸ್ತೆಯಲ್ಲಿ ಗುಂಡಿಗಳು ಇದೆಯಾ ಅಥವಾ ಗುಂಡಿಗಳ ನಡುವೆ ರಸ್ತೆ ಇದೆಯಾ ಎಂಬ ಅನುಮಾನ ಬರುತ್ತಿದೆ ಇಲ್ಲಿನ ರಸ್ತೆ ಪ್ರಯಾಣಿಕರಿಗೆ
ಇತ್ತೀಚೆಗೆ ಸುರಿದ ಧಾರಕಾರ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟು ಸಂಚಾರಕ್ಕೆ ತೊಂದರೆ ಊಂಟಾಗಿದೆ.
ಕಳೆದ ಹತ್ತು ವರ್ಷಗಳಿಂದ ಈ ರಸ್ತೆ ಸುಧಾರಣೆಗೆ ಯಾವುದೆ ರೀತಿಯ ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ.ಈಗಾಗಿ ರಸ್ತೆ ತುಂಬಾ ಗುಂಡಿಗಳಿವೆ.
ಈ ರಸ್ತೆ ಸುಂಕೆಶ್ವರಹಾಳ,ಮಸಿಹಾಳ, ಹೀರೆಬೂದುರು, ಮಾತ್ಪಳ್ಳಿ ,ಗುಗೂಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
18ಕಿ.ಮೀ ರಸ್ತೆ ಕ್ರಮಿಸುಲು ಸುಮಾರು 1 ರಿಂದ 2 ತಾಸು ಬೇಕಾಗುತ್ತದೆ.
ಇದರಿಂದ ರಸ್ತೆ ಸವಾರರು ನರಕ ಅನುಭವಿಸುತ್ತಿದ್ದಾರೆ.
ಈ ಹಿಂದೆ ಒಂದು ಲಾರಿ ಸಂಚರಿಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಸಿಲುಕಿಕೊಂಡು ಸುಮಾರು ಅರ್ಧದಿನಗಳ ಕಾಲ ಸಾರ್ವಜನಿಕರು ಪರದಾಡಿದ್ದರು.
ರಸ್ತೆಯ ಮೇಲೆಯೆ ಹೊಲಸು ನೀರು ಹರಿಬಿಡುವುದರಿಂದ ಅಲ್ಲದೆ ರಸ್ತೆಗಳು ಕೆಸರು ಗದ್ದೆಯಂತೆ ಬಿಂಬಿಸುತ್ತಿವೆ. ಇದರಿಂದ ನಿತ್ಯ ಅಪಘಾತಗಳು ಸಂಭವಿಸಿದ ನಿದರ್ಶನಗಳು ಇವೆ.
ಈ ರಸ್ತೆ ದುರಸ್ತಿ ಕುರಿತು ಇತ್ತೇಚೆಗೆ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಬಸವರಾಜ ಪಾಟೀಲ್ ಇಟಗಿ ತುಸು ಭಾವುಕರಾಗಿಯೇ ಮಾತನಾಡಿ ರಸ್ತೆ ದುರಸ್ತಿ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.ಇಷ್ಟಾದರೂ ರಸ್ತೆ ದುರಸ್ತಿ ಯಾವಾಗ ಆರಂಭವಾಗುತ್ತೆ ಎಂದು ಈ ಭಾಗದ ಜನತೆ ಪ್ರಶ್ನಿಸುತ್ತಿದ್ದಾರೆ
ಅಧಿಕಾರಿಗಳು ತಕ್ಷಣವೇ ಈ ರಸ್ತೆ ದುರಸ್ತಿ ಕೈಗೊಳ್ಖುವಂತೆ ಈ ಭಾಗದ ಜನತೆ ಒತ್ತಾಯಿಸಿದ್ದಾರೆ.