ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು:- ಕಳೆದ ಮೂರು ದಿನಗಳಿಂದ ಈಚನಾಳ ಕ್ರಾಸ್ ನಲ್ಲಿ ಟ್ರಾನ್ಸಪಾರ್ಮರ್ ಕೆಲ ತಾಂತ್ರಿಕ ಕಾರಣದಿಂದ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಈಚನಾಳ ಕ್ರಾಸ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಕತ್ತಲಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಆಸ್ಪತ್ರೆ ಗೇ 28ರಿಂದ 30 ಹಳ್ಳಿಗಳು ಒಳಪಟ್ಟಿದ್ದು, 24/7 ಹೆರಿಗೆ ಆಸ್ಪತ್ರೆ ಯಾಗಿ ಕಾರ್ಯ ನಿರ್ವಹಿಸುತ್ತಿದೆ, ಆದರೆ ಈ ಆಸ್ಪತ್ರೆ ಗೇ ಅವಶ್ಯವಾಗಿ ಬೇಕಾದ MBBS ವೈದ್ಯರಿಲ್ಲ, ಪ್ರತ್ಯೇಕ ಟಿಸಿ ಇಲ್ಲ, ಶುದ್ಧ ಕುಡಿಯುವ ನೀರಿಲ್ಲ, ಹಾಗೆಯೇ ಆಸ್ಪತ್ರೆ ಕೂಡ 30 ವರ್ಷದ ಕಟ್ಟಡವಾಗಿದ್ದು ಶಿಥಿಲಾವಸ್ಥೆಯ ಹಂತ ತಲುಪಿದೆ.ಅದಲ್ಲದೇ ಪ್ರಸ್ತುತ ಮೂರು ದಿನಗಳಿಂದ ವಿದ್ಯುತ್ ಇಲ್ಲದ ಕಾರಣ ಕ್ಕಾಗಿ ಕೆಲ ಔಷಧಿಗಳು ಕೂಡ ಹಾಳಾಗುವ ಸಾಧ್ಯತೆ ಇದೆ.ಹಾಗಾಗಿ ಆರೋಗ್ಯ ಇಲಾಖೆ ಯ ಮೇಲಾಧಿಕಾರಿಗಳು ಶಿಘ್ರವೇ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಸ್ಯೆ ಗಳಿಗೇ ಮುಕ್ತಿ ನೀಡಬೇಕೆಂದು ಗ್ರಾಮ ದ ಸಾರ್ವಜನಿಕರ ಒತ್ತಾಸೆಯಾಗಿದೆ.