ಜನ ವಿರೋಧಿ ಕಾಯ್ದೆ,ಶಾಸಕ ನಾಡಗೌಡ ಅವರ ದುರಾಡಳಿತದ ವಿರುದ್ಧ ನಾಳೆ ಪ್ರತಿಭಟನೆ: ಮಾಜಿ ಶಾಸಕ ಹಂಪನಗೌಡ ಬಾದರ್ಲಿ.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ….

ಸಿಂಧನೂರು :ಕೇಂದ್ರ ರಾಜ್ಯ ಸರ್ಕಾರಗಳ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಜೊತೆಗೆ ಶಾಸಕ ವೆಂಕಟರಾವ್ ನಾಡಗೌಡ ದುರಾಡಳಿತದ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ವಿಜಯನಗರ ವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಎಪಿಎಂಸಿ ಕಾಯ್ದೆ. ಕೃಷಿ ಕಾಯ್ದೆ. ಭೂ ಸುಧಾರಣೆ ಕಾಯ್ದೆ. ಕಾರ್ಮಿಕ ಕಾಯ್ದೆ ಸೇರಿದಂತೆ ಜನ ವಿರೋಧಿ ಕಾಯ್ದೆ ಗಳ ವಿರೋಧಿಸಿ ರಾಜ್ಯ ವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಅದರ ಅನ್ವಯ ನಾಳೆ ತಹಶಿಲ್ದಾರ ಕಚೇರಿ ಮುಂದೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಮಾಡಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಜನ ವಿರೋಧಿ ಕಾಯ್ದೆ ಹಿಂಪಡೆಯಬೇಕು ಎನ್ನುವುದು ಸೇರಿದಂತೆ ಸ್ಥಳೀಯ ಶಾಸಕ ವೆಂಕಟರಾವ್ ನಾಡಗೌಡರ ದುರಾಡಳಿತ ಹಾಗೂ ನಗರಸಭೆಯ ದುರಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಕಾರಣ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖಂಡರು. ಸದಸ್ಯರು. ತಾಲೂಕು ಪಂಚಾಯತಿ ಸದಸ್ಯರು. ಜಿಲ್ಲಾ ಪಂಚಾಯತ ಸದಸ್ಯರು. ಪಕ್ಷದ ಕಾರ್ಯಕರ್ತರು ಸೇರಿದಂತೆ ರೈತಾಪಿ ಜನರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದುಅವರು ತಿಳಿಸಿದ್ದಾರೆ.

 

Share and Enjoy !

Shares