ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ಜಾಲಹಳ್ಳಿ ಬಂದ್

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಅಂಗಡಿ ಮುಂಗಟ್ಟಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು.
ಸರ್ಕಾರ ಅವೈಜ್ಙಾನಿಕವಾಗಿ ಅರಕೇರವನ್ನ ತಾಲ್ಲೂಕನ್ನಾಗಿ ಘೋಷಣೆ ಮಾಡಿದೆ ನೂತನ ಅರಕೇರಾ ತಾಲ್ಲೂಕನ್ನು ರದ್ದುಪಡಿಸಿ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಕಂದಾಯ ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಜಾಲಹಳ್ಳಿ ತಾಲ್ಲೂಕು ಹೋರಾಟ ಸಮಿತಿಯು ಪೂರ್ವಭಾವಿ ಸಭೆಯ ನಿರ್ಣಯದ ಮೆರೆಗೆ ಇಂದು ಜಾಲಹಳ್ಳಿ ಬಂದ್ ಕರೆ ನೀಡಿದರು.
ಜಾಲಹಳ್ಳಿ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆಗೆ ಒತ್ತಾಯಿಸಿ ಮಾಡಿದ ಪ್ರತಿಭಟನೆಯಲ್ಲಿ ಪ್ರಗತಿ ಸಂಘಟನೆಗಳು ಸೇರಿ ಬೃಹತ್ ಪ್ರತಿಭಟನೆಗೆ ಸಾತ್ ನೀಡಿದರು .
ಇದರ ಭಾಗವಾಗಿ ಜಾಲಹಳ್ಳಿ ಗ್ರಾಮವನ್ನು ಸ್ವಯಂ ಪ್ರೇರಿತರಾಗಿ ತಾಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಅಂಗಡಿಮಾಲಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಾಲಹಳ್ಳಿ ಬಂದ್ ಗೆ ಬೆಂಬಲ ಸೂಚಿಸಿದರು ಈ ಸಂದರ್ಭದಲ್ಲಿ ಜಾಲಹಳ್ಳಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಕೇರಿಲಿಂಗಪ್ಪನಾಡಗೌಡ ,ಹಾಗೂ ಪಂಪಪತಿ ಬಸವರಾಜ್ ,ಆದ್ಯೆಪ್ಪ ಗೌಡ,ರಂಗಣ್ಣ ನರಸಣ್ಣ ನಾಯಕ ,ತಿಮ್ಮಣ ನಾಯಕ , ದಲಿತ ಮುಖಂಡರು ಹಾಗೂ ಪ್ರಗತಿ ಪರ ಸಂಘಟನೆಗಳು ಭಾಗಿಯಾಗಿದ್ದವು

Share and Enjoy !

Shares