ವಿಜಯನಗರವಾಣಿ ಸುದ್ದಿ
ರಾಯಚೂರುಜಿಲ್ಲೆ
ಲಿಂಗಸೂಗೂರು:ಭಾರತ ಹಾಗೂ ಕರ್ನಾಟಕ ರಾಜ್ಯಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಗತಿಸಿದರು ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿವೆ ಉತ್ತರಪ್ರದೇಶದಲ್ಲಿ ದಲಿತ, ವಾಲ್ಮೀಕಿ ಯುವತಿಯ ಮೇಲೆ ಅತ್ಯಾಚಾರ ಮಾಡಿರುವವರಿಗೆ ಗಲ್ಲು ಶಿಕ್ಷೆ ನೀಡಬೇಕು ಹಾಗೂ ದಲಿತ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಿಂಗಸುಗೂರು ಆಯುಕ್ತರ ಮೂಲಕ ಗೃಹ ಸಚಿವರಿಗೆ ತಾಲೂಕಿನ ಪ್ರಗತಿಪರ ಸಂಘಟನೆಗಳು ಹಾಗೂ ಹಾಗೂ ಸಮಿತಿಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು
ದಸಂಸ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಕರವೇ ತಾಲೂಕಾಧ್ಯಕ್ಷ ಜಿಲಾನಿಪಾಶ, ನಂದೀಶ್ ನಾಯಕ್ ಲಿಂಗಪ್ಪ ಪರಂಗಿ ಹುಲಗಪ್ಪ ಕೆಸರಟ್ಟಿ ವೆಂಕಪ್ಪ ಚಿತ್ತಾಪುರ, ಚಿನ್ನಪ್ಪ, ರಮೇಶ ಗೋಸ್ಲೆ,ಹನುಮಂತಪ್ಪ ಕುಣಿಕೆಲ್ಲೂರು ಶಿವಣ್ಣ ಪರಂಗಿ ಶಿವಣ್ಣ ಭಟ್ಟರ್ ಎಂಸಿ ಚಂದ್ರಶೇಖರ್ ಸೇರಿದಂತೆ ಸೇರಿದಂತೆ ಪ್ರಗತಿಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.