ದಲಿತ ಮಹಿಳೆ ಸಾಮೂಹಿಕ ಅತ್ಯಾಚಾರ ಖಂಡಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನೌಕರರ ಸಂಘದ ವತಿಯಿಂದ ರಾಷ್ಟ್ರಪತಿಗೆ ಮನವಿ .

Share and Enjoy !

Shares
Listen to this article

 

ವಿಜಯನಗರ ವಾಣಿ
ರಾಯಚೂರು ಜಿಲ್ಲೆ

ಮಾನ್ವಿ: ಉತ್ತರ ಪ್ರದೇಶದ ವಾಲ್ಮೀಕಿ ಸಮುದಾಯದ ಯುವತಿ ಮನೀಷಾ ವಾಲ್ಮೀಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹತ್ಯೆ ಹಾಗೂ ದಲಿತ ಮಹಿಳೆಯರ ಮೇಲೆ ನಡೆಯುತ್ತೀರುವ. ನಿರಂತರ ಅತ್ಯಾಚಾರ ದೌರ್ಜನ್ಯ ಘಟನೆಗಳನ್ನು ಖಂಡಿಸಿ ಇಂದು ಪಟ್ಟಣದ ವಾಲ್ಮೀಕಿ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.

ದೇಶದಲ್ಲಿ ದಲಿತ ಮಹಿಳೆಯರ ಮೇಲೆ ನಡೆಯುತ್ತೀರುವ ಅತ್ಯಾಚಾರ ದೌರ್ಜನ್ಯ ಘಟನೆಗಳು ಸಮಾಜ ತಲೆ ತಗ್ಗಿಸುವಂತದ್ದು, ಉತ್ತರ ಪ್ರದೇಶದಲ್ಲಿ ಸೆ.14ರಂದು 19ವರ್ಷದ ವಾಲ್ಮೀಕಿ ಸಮುದಾಯದ ಮನೀಷಾ ವಾಲ್ಮೀಕಿ ಯುವತಿಯ ಮೇಲೆ ನಾಲ್ಕು ಜನ ದುಷ್ಕರ್ಮಿಗಳು ಸಾಮೂಹಿಕ ವಾಗಿ ಅತ್ಯಾಚಾರ ನಡೆಸಿ ತುಂಬಾ ಕ್ರೂರವಾಗಿ ಯುವತಿಯ ನಾಲಿಗೆ ಕೊಯ್ದು, ಬೆನ್ನುಮೂಳೆಯ ಮುರಿದಿದ್ದಾರೆ. ಈ ಅಮಾನವೀಯ ಘಟನೆಯು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆ ನಡೆದ ನಂತರ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡಿಲ್ಲ. ತರತುರಿಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದ ಸದಸ್ಯರಿಗೆ ಅಂತಿಮ ದರ್ಶನ ಮಾಡಿಕೊಡದೆ. ರಾತ್ರೋರಾತ್ರಿ ಯುವತಿಯ ಶವವನ್ನು ಪೊಲೀಸರ ಸರ್ಪಗಾವಲಿನಲ್ಲಿ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿತೋರುಸುತ್ತದೆ. ಇಂತಹ ಅಧಿಕಾರಿಗಳ ಪರವಾಗಿ ಇದ್ದವರನ್ನು ಕ್ಷಮಿಸಬಾರದು. ಇದಕ್ಕೆ ಸಹಕರಿಸಿದ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು. ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಅಧಿತ್ಯನಾಥರು ದುಷ್ಕರ್ಮಿಗಳನ್ನು ಗಲ್ಲುಗೆ ಎರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನೌಕರರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಈರಣ್ಣ ನಾಯಕ ತಾಲ್ಲೂಕು ಅಧ್ಯಕ್ಷರು ಭಾಗಯ್ಯ ನಾಯಕ ಜಿಲ್ಲಾ ಕಾರ್ಯದರ್ಶಿ, ಡಾ. ಹುಲಿಯಪ್ಪ ನಾಯಕ ಜಿಲ್ಲಾ ಕಾರ್ಯದರ್ಶಿ ,ಆಂಜನೇಯ ನಸಲಾಪುರ, ಭೀಮಾಶ ನಾಯಕ , ಶಿವರಾಜ ಹರಿವಿ, ಚಂದ್ರಶೇಖರ ನಾಯಕ, ಗುರುರಾಜ್ ,ರಂಗನಾಥ್ ನಾಯಕ ,ನಾಗರಾಜ, ಉಪನ್ಯಾಸಕರು ಇದ್ದರು . ಸಂಘದ ಪದಾಧಿಕಾರಿಗಳು ಉಪಸ್ಥಿತಿ ಇದ್ದರು

Share and Enjoy !

Shares