ವಿಜಯನಗರವಾಣಿ ಸುದ್ದಿ
ರಾಯಚೂರುಜಿಲ್ಲೆ
ದೇವದುರ್ಗ :ವಿಶ್ವಜ್ಞಾನಿ
ಸಂವಿಧಾನ ಶಿಲ್ಪಿವಿಶ್ವಮಾನವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಆಧಾರಿತ ಮಹಾನಾಯಕ’ ಧಾರಾವಾಹಿಗೆ ದೇವದುರ್ಗ ನಗರದ ಅಂಬೇಡ್ಕರ್ ವೃತ್ತದ ಛಲುವಾದಿ ಮಹಾಸಭಾ ವತಿಯಿಂದ ಹಾಗೂ ಅನುಯಾಯಿಗಳು ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರಿಗೆ ಬೆಂಬಲ ಸೂಚಿಸಿ ಸಂಭ್ರಮಾಚರಣೆ ಮಾಡಿದರು.ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಅಳವಡಿಸಲಾದ ಅವರ ಜೀವನ ಚರಿತ್ರೆ ಆಧಾರಿತ ‘ಮಹಾನಾಯಕ’ ಧಾರಾವಾಹಿ ಪ್ರಸಾರದ ಬೃಹದಾಕಾರದ ಬ್ಯಾನರ್ (ಕಟೌಟ್)ನ್ನು ಶನಿವಾರ ಬೆಳಿಗ್ಗೆ ಅನಾವರಣಗೊಳಿಸಲಾಯಿತು.ಪ್ರತಿ ಶನಿವಾರ ಮತ್ತು ಭಾನುವಾರದಂದು ಧಾರಾವಾಹಿ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿಗೆ ಬೆಂಬಲ ಸೂಚಿಸಿದರು. ಧಾರಾವಾಹಿ ಪ್ರಸಾರ ಮಾಡದಂತೆ ಬೆದರಿಕೆ ಒಡ್ಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ, ಸೂಕ್ತ ತನಿಖೆ ಕೈಗೊಂಡು ಅವರನ್ನು ಬಂಧಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ನರಸಪ್ಪ ವಕೀಲ್ ನಿಂಗಪ್ಪ ಜಾಲಹಳ್ಳಿ,ಮಲ್ಲಿಕಾರ್ಜುನ್ ಮಸರಕಲ್ ನಾಗರಾಜ ಶಾವಂತಗೇರ ಮೈನ್ ಉದ್ದಿನ್ ಬಸವರಾಜ್ ಕೋಪ್ಪರ್ಹನುಮಂತ ಮನ್ನಪೂರಿ ಯಲ್ಲನಗೌಡ ಇರಬಗೇರ, ಬೀಮಣ್ಣ ಅಂಚೆಸೂಗುರು, ಶಾಂತಕುಮಾರ್ ಹೊನ್ನಟಗಿ ಸೇರಿದಂತೆ ಮಹಳಾ ಮುಖಂಡರಾದ ಹಂಪಮ್ಮ ಹುಲಿಮನಿ ಸೇರಿ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.